ಬೆಂಗಳೂರು : ಆರ್‌ಎಂಎಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಗ್ರಂಥಪಾಲಾಕಿಯಾಗಿ ಕೆಲಸ ಮಾಡುತ್ತಿರುವ ಯುವ ಕವಯಿತ್ರಿ ಕವಿತಾ ವಿ ಬಣಕಾರ್ ಅವರ “ವಿದ್ರುಮ” ಕವನ ಸಂಕಲನ ಇತ್ತೀಚೆಗೆ ಆರ್‌ಎಂಎಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು.
ಪುಸ್ತಕವನ್ನು ಬಿಡುಗಡೆಗೊಳಿಸಿ ಹಾರೈಸಿದ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸುಮಾ ಪ್ರಸಾದ್ ಅವರು ಶಾಲೆಯಲ್ಲಿ ಬಿಡುವಿಲ್ಲದೆ ಕಾರ್ಯೋನ್ಮುಖವಾಗಿರುವ ಗ್ರಂಥಪಾಲಕಿಯೊಬ್ಬರು ಇಂತಹ ಸದಭಿರುಚಿಯನ್ನು ಬೆಳೆಸಿಕೊಂಡು ಕವನ ಸಂಕಲನವೊಂದನ್ನು ಹೊರತಂದಿರುವ ಅಪರೂಪದ ವಿಶೇಷ ಸಾಧನೆ. ಇದು ಇಂದಿನ ಯುವಪೀಳಿಗೆಗೆ ಮಾದರಿಯೂ ಆಗಿದೆ. ಹೀಗೆಯೇ ಇಂತಹ ಹೆಚ್ಚು ಹೆಚ್ಚು ಮೌಲ್ಯಯುತವಾದ ಪುಸ್ತಕಗಳನ್ನು ಕವಿತಾ ವಿ ಬಣಕಾರ್ ಅವರು ಹೊರತರುವಂತೆ ಆಗಲಿ ಎಂದು ಶುಭಹಾರೈಸಿದರು. ಶಾಲೆಯ ಸಹ ಶಿಕ್ಷಕರಾದ ಶಾಲಿನಿ ಎಸ್ ಆರ್, ಭಾರತಿ ಎಮ್ , ಸುಮಾ ಗೌಡ ಹಾಗೂ ಮುಂತಾದ ಸಹ ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು. ಕನ್ನಡ ಟೈಮ್ಸ್ ಪಬ್ಲಿಕೇಷನ್ಸ್ ಇದನ್ನು ಪ್ರಕಟಿಸಿದೆ.