ಭಾವಾನುವಾದ – ನೃತ್ಯಗುರು ಸಹನಾ ಚೇತನ್
ಹಾಡಲಾರೆನು ನಾನು..
ಮುಖವಾಡ ಕಳಚಿದ ಚಹರೆಗಳು,
ಆಳವಾಗಿಹÀ ಗಾಯದ ಕಲೆಗಳು
ಕಳಚುತ್ತಿರುವ ರಹಸ್ಯದಿ
ಸತ್ಯತೆಯಿಂದಲೇ ಭಯಭೀತಗೊಂಡು
ಹಾಡಲಾರೆನು ನಾನು |
ಯಾರ ದೃಷ್ಟಿ ತಗುಲಿತೋ
ಸೀಸೆಯ ನಗರ ಚದುರಿತೋ
ತನ್ನವರ ಸಂಗದೀ ಹೊಂದಿಕೊಳ್ಳಲಾರದೆ ಅದುಮಿ
ಹಾಡಲಾರೆನು ನಾನು |
ಚಂದಿರನಂದದಿ ಬೆನ್ನಿಗೇ ಚೂರಿ,
ರಾಹುವು ನಡೆದ ರೇಖೆಯ ಮೀರಿ,
ಮುಕ್ತಿಯ ಕ್ಷಣದಲ್ಲಂತೋ,
ಪ್ರತೀ ಘಳಿಗೆ ಸಿಕ್ಕ್ಕಿಕೊಳ್ಳುವ ಭೀತಿ,
ಹಾಡಲಾರೆನು ನಾನು |
ಹೊಸ ಹಾಡ ಹಾಡುವೆನು ನಾನು….
ಛಿದ್ರವಾದ ನಕ್ಷತ್ರದೊಳಗಿಂದು ಹರಿಯಿತು ವಸಂತನ ಸ್ವರ,
ಕಲ್ಲೆದೆಯಿಂದ ಉಗಮಿಸಿತದೋ ಚೆಲುವ ಅಂಕುರ,
ಉದುರಿತವೋ ಹಳದಿಗಟ್ಟಿದ ಎಲೆಗಳು, ಕೋಗಿಲೆಯ ಗಾನಕ್ಕೆ,
ಮುಸ್ಸಂಜೆಯ ಸೂರ್ಯ ರಶ್ಮಿಯ ಕಂಡು, ನಲಿವು ಈ ಆತ್ಮಕ್ಕೆ
ಹೊಸ ಹಾಡ ಹಾಡುವೆನು ನಾನು |
ಚೂರಾದ ಕನಸಿನ ಮನದಾಳದ ಅಳಲನ್ನು ಕೇಳುವವರ್ಯಾರು,
ಕಣ್ಣಂಚಿನ ಮಿನುಗುವಿಕೆಯೇ ಈ ಕ್ಷಣದ ಚಿರವ್ಯಥೆ,
ಸೋಲಲಾರೆನು ನಾನು, ಮಣಿಯಲಾರೆನು ನಾನು,
ಕಾಲನ ಕಪಾಲದ ಬರಹವನು ಅಳಿಸುವೆನು ನಾನು,
ಹೊಸ ಹಾಡ ಹಾಡುವೆ ನಾನು….
गीत नही गाता हुँ |
बेनकाब चेहरे हैं , दाग बड़े गहरे हैं\ टूटता तिलिस्म,
आज सच से भय ख़ाता हूँ | गीत नही गाता हुँ |
लगी कुछ ऐसी नज़र, बिखरा शीशे सा शहर,
अपनो के मेले में मिट नही पता हूँ, गीत नही गाता हुँ |
पीठ में छुरी सा चाँद, राहु गया रेखा फाँद,
मुक्ता के क्षण में , बार बार बाँध जाता हूँ, गीत नही गाता हुँ |
……….
गीत नया गाता हूँ|
टूटे हुए तारों से , फूटे बसंती स्वर.
पत्थर की छाती में उग आया ना अंकुर,
झड़े सब पीले पात, कोयल की कुक रात,
प्राची में अरुणिमा की रेत देख पता हूँ, गीत नया गाता हूँ|
टूटे हुए सपने की सुने कौन सिसकी,
अंतः की चिर व्यथा, पलाको पर ठिठकी,
हार नही मानूगा, रार नही ठानुगा,
कल के कपाल पर लिखता, मिटाता हूँ|
गीत नया गाता हूँ|