ಮೊಗದಲ್ಲಿ ಗಾಂಭೀರ್ಯ, ಮಾದಕತೆಯ ಸೌಂದರ್ಯ, ಚಿತ್ರರಂಗದಲ್ಲಿ ತಾನು ಸಾಧಿಸಿಯೇ ಸಾಧಿಸುವೆನೆಂಬ ಆತ್ಮಸ್ತೈರ್ಯ, ಇವೆಲ್ಲಕ್ಕಿಂತ ಹೆಚ್ಚಾಗಿ ಅದಕ್ಕೆ ಇರಬೇಕಾದ ಆತ್ಮವಿಶ್ವಾಸ, ಧೈರ್ಯ ಇವೆಲ್ಲದರ ಸಂಗಮವೇ…ವಿಹಂಗಮವೇ ಈ ಮಧುಚಂದ. ಮಧುಚೆಂದ…ಆಹಾ ..ಈ ಹೇಸರೇ ಏನ್ ಚೆಂದ ! ಯಾರೀ ಕುವರಿ ? ಅದೆಲ್ಲಿಂದ ಬಂದಳೀ ಸುಂದರಿ? ಎಂಬ ಕಿರುಪ್ರೆಶ್ನೆಗೆ ಕಿರು ಉತ್ತರವೇ ಈ ಕಿರು ಲೇಖನ.
ಕಲ್ಕತ್ತ ಸನಿಹದ ಕಂಚ್ರಾಪರ ಎಂಬ ಊರಿನ ಸಂಪ್ರದಾಯಸ್ಥ ಮನೆತನದ ಈ ಸುಂದರಿ ಮಧುಚಂದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿ ಮುಂದೆ ಚಂಡಿಗಡ ವಿಶ್ವವಿದ್ಯಾಲಯದಲ್ಲಿ ಸಂಗೀತ ಹಾಗೂ ಚಿತ್ರಕಲೆಯಲ್ಲಿ ಮಾಸ್ಟರ್ ಡಿಗ್ರಿಯನ್ನು ಪಡೆದು ಸೀದಾ ಬಂದಿಳಿದಿದ್ದು ದಕ್ಷಿಣದ ಚೆನ್ನೈಗೆ. ಸಂಗೀತವನ್ನು ಆ ಮಟ್ಟಕ್ಕೆ ಕಲಿತರೂ ಹಿನ್ನೆಲೆ ಗಾಯಕಿಯಾಗುವ ಬದಲು ಮುನ್ನೆಲೆಗೆ ಬಂದದ್ದು ಮಾತ್ರ ನಾಯಕ ನಟಿಯಾಗಿ. ಹಾಟ್ ಹಾಟ್ ಸ್ಟಾರ್ ಆಗಿ !
೨೦೦೭ರಲ್ಲಿ ಈಕೆಯ ಮೊದಲ ಚಿತ್ರ ತಮಿಳಿನ “ಮುದಲ್ ಮುದಲೈ” ಬಿಡುಗಡೆಯಾದ ನಂತರ ಈಕೆ ಮತ್ತೆ ಹಿಂದಿರುಗಿ ನೋಡಲಿಲ್ಲ. ಸಾಲು ಸಾಲು ತಮಿಳು ಚಿತ್ರಗಳಲ್ಲಿ ನಟಿಸಿ ತನ್ನ ಅಭಿನಯ ಪ್ರತಿಭೆಯನ್ನು ಹೊರಹಾಕಿದಳು. ತಮಿಳರ ಮನೆ ಮನ ಸೇರಿದಳು. ಅಲ್ಲಲ್ಲಿ ಸಹಜತೆಯಲ್ಲೇ ಹಾಟ್ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆ ಹೈಕಳ ನಿದ್ದೆ ಕೆಡಿಸಿದಳು.
ಅಂತೂ ತಮಿಳಿನಲ್ಲೇ ನೆಲೆಯೂರಿ ವೈದಗಿ, ಮಿನ್ಸಾರಂ, ಸಿರುವಾಣಿ ಹಾಗೂ ಬಾನು ಎಂಬ ಹೆಸರಿನ ಚಿತ್ರಗಳಲ್ಲಿ ನಟಿಸುವ ಮೂಲಕ ಮತ್ತಷ್ಟು ಹೆಸರು ಮಾಡಿದಳು. ಇಂತಹ ಸಂಪ್ರದಾಯಸ್ಥ ಮನೆತನದಿಂದ ಬಂದ ನಾಯಕಿ ಇನ್ನೂ ಹಲವಾರು ಚಿತ್ರಗಳಲ್ಲಿ ನಟಿಸಿ ಸುಪ್ರಸಿದ್ಧಿಗೆ ಬರಲಿ ಎಂಬುದೇ ಈಕೆಯ ಅಭಿಮಾನಿಗಳ ತುಂಬು ಮನಸ್ಸಿನ ಶುಭಹಾರೈಕೆ.