ನಾಯಕ-ನಾಯಕಿ

ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ‘ವಿಕ್ರಮ್’ ಬೆಡಗಿ ಧಾರವಾಡದ ಸ್ವತಿಷ್ಠ ಕೃಷ್ಣನ್ – ‘ಒಂದು ಸರಳ ಪ್ರೇಮಕಥೆ’ಯಲ್ಲಿ ವಿನಯ್ ರಾಜ್ ಕುಮಾರ್ ಗೆ ನಾಯಕಿ

ನಿರ್ದೇಶಕ ಸಿಂಪಲ್ ಸುನಿ, ವಿನಯ್ ರಾಜ್ ಕುಮಾರ್ ಕಾಂಬಿನೇಶನ್ ನಲ್ಲಿ ಮೂಡಿ ಬರ್ತಿರುವ ನೂತನ ಚಿತ್ರಕ್ಕೆ ನಾಯಕಿ ಆಯ್ಕೆ ಆಗಿದ್ದಾರೆ. ಮ್ಯೂಸಿಕಲ್ ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡ ‘ಒಂದು ಸರಳ ಪ್ರೇಮಕಥೆ’ ಚಿತ್ರದ ಮೂಲಕ ‘ವಿಕ್ರಮ್’ ಚಿತ್ರದಲ್ಲಿ ನಟಿಸಿರುವ ಸ್ವತಿಷ್ಠ ಕೃಷ್ಣನ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

ವಿನಯ್ ರಾಜ್ ಕುಮಾರ್, ಸಿಂಪಲ್ ಸುನಿ ಕಾಂಬಿನೇಶನ್ ನಲ್ಲಿ ಮೂಡಿ ಬರ್ತಿರುವ ಮೊದಲ ಸಿನಿಮಾ ‘ಒಂದು ಸರಳ ಪ್ರೇಮಕಥೆ’ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಮ್ಯೂಸಿಕಲ್ ಲವ್ ಸ್ಟೋರಿ ಸಬ್ಜೆಕ್ಟ್ ಚಿತ್ರಕ್ಕಾಗಿ ನಾಯಕಿ ಹುಡುಕಾಟದಲ್ಲಿದ್ದ ಸಿಂಪಲ್ ಸುನಿ ಧಾರವಾಡ ಮೂಲದ ಕನ್ನಡತಿ ನಟಿ ಸ್ವತಿಷ್ಠ ಕೃಷ್ಣನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆ ತಂದಿದ್ದಾರೆ. ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಸ್ವತಿಷ್ಠ ಕೃಷ್ಣನ್ ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ವಿನಯ್ ರಾಜ್ ಕುಮಾರ್ ಗೆ ನಾಯಕಿಯಾಗುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಸಿಂಪಲ್ ಸುನಿ ನನಗೆ ಕನ್ನಡದ ಹುಡುಗಿಯೇ ನಾಯಕಿಯಾಗಿ ಬೇಕಿತ್ತು. ನನ್ನ ಎಲ್ಲಾ ಸಿನಿಮಾಗಳಲ್ಲೂ ಅದು ಮೊದಲ ಆದ್ಯತೆಯಾಗಿರುತ್ತೆ ವಿಕ್ರಮ್ ಸಿನಿಮಾದಲ್ಲಿ ಸ್ವತಿಷ್ಠ ಪಾತ್ರ ನೋಡಿ ಇಷ್ಟವಾಗಿತ್ತು. ಸ್ವತಿಷ್ಠ ಮೂಲತಃ ಉತ್ತರ ಕರ್ನಾಟಕದವರು. ನಮ್ಮ ಸಿನಿಮಾ ಪಾತ್ರಕ್ಕೆ ಅವರು ಸೂಕ್ತ ಎನಿಸಿತು ಅವರು ಕೂಡ ಕಥೆ ಕೇಳಿ ಓಕೆ ಮಾಡಿ ನಮ್ಮ ಚಿತ್ರತಂಡ ಸೇರಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಚಿತ್ರಕ್ಕೆ ಪ್ರಸನ್ನ ಕಥೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ ಬರೆದು ಸಿಂಪಲ್ ಸುನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಸಿಂಪಲ್ ಸುನಿ ಸದ್ಯದಲ್ಲೇ ಸಿನಿಮಾ ತಾರಾಬಳಗ ಎಲ್ಲದರ ಬಗ್ಗೆ ಅಧೀಕೃತ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಚಿತ್ರಕ್ಕೆ ಮೈಸೂರು ರಮೇಶ್ ಬಂಡವಾಳ ಹೂಡುತ್ತಿದ್ದು, ವೀರ್ ಸಮರ್ಥ್ ಸಂಗೀತ ನಿರ್ದೇಶನ, ಸಭಾ ಛಾಯಾಗ್ರಾಹಣ ಚಿತ್ರಕ್ಕಿದೆ.

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.