‘ಗಾಳಿಪಟ’ ಸಿನಿಮಾದಲ್ಲಿ ಅರಳು ಹುರಿದಂತೆ ಮಾತನಾಡಿ, ಚೆಂದದ ಹಾಡಿಗೆ ಅಷ್ಟೇ ಸೊಗಸಾಗಿ ಹೆಜ್ಜೆ ಹಾಕಿ ಪ್ರೇಕ್ಷಕರ ಮನದಲ್ಲಿ ನೆಲೆಯೂರಿದ ಅಪ್ಪಟ ಕನ್ನಡತಿ ಭಾವನಾ ರಾವ್. ಗಾಳಿಪಟ ನಂತರ ಚಂದನವನದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ತಮಿಳು ಸಿನಿಮಾಗಳಲ್ಲೂ ಮಿಂಚಿದ್ದಾರೆ. ಪ್ರತಿಭೆ ಹಾಗೂ ಸಹಜ ಅಭಿನಯದ ಮೂಲಕ ಎಲ್ಲರ ಗಮನ ಸೆಳೆಯೋ ಭಾವನಾ ರಾವ್ ಬಾಲಿವುಡ್ ಬಹು ನಿರೀಕ್ಷಿತ ವೆಬ್ ಸೀರೀಸ್ ನಲ್ಲಿ ಬಿಟೌನ್ ದಿಗ್ಗಜರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಬಾಲಿವುಡ್ ನಲ್ಲಿ ಬಿಡುಗಡೆಗೆ ಸಜ್ಜಾಗಿರುವ ‘ಧಾರಾವಿ ಬ್ಯಾಂಕ್’ ವೆಬ್ ಸೀರೀಸ್ ನಲ್ಲಿ ಭಾವನಾ ರಾವ್ ನಟಿಸಿದ್ದಾರೆ. ಇದರಲ್ಲಿ ಕನ್ನಡಿಗ ಹಾಗೂ ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಜೊತೆ ಭಾವನಾ ರಾವ್ ಅಭಿನಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆಸಿರುವ ಭಾವನಾ ರಾವ್ ಹಿಂದಿಯಲ್ಲಿ ಇದು ನನ್ನ ಮೊದಲ ವೆಬ್ ಸೀರೀಸ್. ಇದರಲ್ಲಿ ಸುನೀಲ್ ಶೆಟ್ಟಿ ಮಗಳಾಗಿ ನಟಿಸಿದ್ದು, ಲಾಯರ್ ಪಾತ್ರವನ್ನು ನಿರ್ವಹಿಸಿದ್ದೇನೆ. ಒಟ್ಟು ಹತ್ತು ಸಂಚಿಕೆಗಳಿದ್ದು, ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ. ನವೆಂಬರ್ 19ರಂದು ಈ ವೆಬ್ ಸೀರೀಸ್ ಬಿಡುಗಡೆಯಾಗುತ್ತಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಭಾವನಾ ರಾವ್ ನಟನೆಯ ಹೊಂದಿಸಿ ಬರೆಯಿರಿ, ಗ್ರೇ ಗೇಮ್ಸ್ ಬಿಡುಗಡೆಗೆ ರೆಡಿಯಾಗಿದ್ದು, ಇವುಗಳ ಜೊತೆ ಇನ್ನೂ ಮುರ್ನಾಲ್ಕು ಸಿನಿಮಾಗಳು ಕೈಯಲ್ಲಿವೆ.
ಇಂದೋರಿ ಇಶ್ಕ್, ಹಾಫ್ ಟಿಕೆಟ್ ಸಿನಿಮಾ ಖ್ಯಾತಿಯ ಸಮಿತ್ ಕಕ್ಕಡ್ ‘ಧಾರಾವಿ ಬ್ಯಾಂಕ್’ ವೆಬ್ ಸೀರೀಸ್ ನಿರ್ದೇಶನ ಮಾಡಿದ್ದಾರೆ. ಚಿತ್ರದ ಲೀಡ್ ರೋಲ್ ಗಳಲ್ಲಿ ಸುನೀಲ್ ಶೆಟ್ಟಿ ಹಾಗೂ ವಿವೇಕ್ ಒಬೇರಾಯ್ ನಟಿಸಿದ್ದಾರೆ. ಟ್ರೇಲರ್ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದ್ದು ನವೆಂಬರ್ 19ರಂದು MX ಪ್ಲೇಯರ್ ನಲ್ಲಿ ವೆಬ್ ಸೀರೀಸ್ ಬಿಡುಗಡೆಯಾಗುತ್ತಿದೆ.