ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ಮೂಡಿ ಬರ್ತಿರೋ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ‘ಹನು-ಮಾನ್’ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಭಾರತದ ಮೊದಲ ಸೂಪರ್ ಹೀರೋ ‘ಹನು-ಮಾನ್’ ಸುತ್ತ ಹೆಣೆದ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ನಾಯಕ ನಟನಾಗಿ ತೇಜ ಸಜ್ಜ ನಟಿಸಿದ್ದು, ಅಮೃತಾ ಐಯ್ಯರ್ ನಾಯಕಿಯಾಗಿ ನಟಿಸಿದ್ದಾರೆ. ಟೀಸರ್ ಮೂಲಕ ಭಾರತೀಯ ಸಿನಿರಸಿಕರ ಮನಗೆದ್ದ ಈ ಚಿತ್ರ ಬಿಡುಗಡೆಯಾಗಲು ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಮೇ 12ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ.
ಪ್ರೈಮ್ ಶೋ ಎಂಟಟೈನ್ಮೆಂಟ್ ಬ್ಯಾನರ್ ನಡಿ ಬಿಗ್ ಬಜೆಟ್ ನಲ್ಲಿ ನಿರ್ಮಾಣವಾದ ಪ್ಯಾನ್ ಇಂಡಿಯಾ ಸಿನಿಮಾ ‘ಹನು-ಮಾನ್’. ಪ್ರಶಾಂತ್ ವರ್ಮಾ ನಿರ್ದೇಶನದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಚಿತ್ರಕ್ಕಾಗಿ ಯುವ ನಟ ತೇಜ ಸಜ್ಜ ಭರ್ಜರಿ ತಯಾರಿ ನಡೆಸಿದ್ದು ಟೀಸರ್ ಝಲಕ್ ಇದಕ್ಕೆ ಸಾಕ್ಷಿಯಾಗಿದೆ. ತೇಜ ಸಜ್ಜ ಲುಕ್, ಚಿತ್ರದ ಮೇಕಿಂಗ್, ಕ್ಯಾಮೆರಾ ವರ್ಕ್, ಮ್ಯೂಸಿಕ್ ಮೂಲಕ ಟೀಸರ್ ತುಣುಕಿನಲ್ಲಿ ಭರವಸೆ ಮೂಡಿಸಿರುವ ‘ಹನು-ಮಾನ್’ ಮೇ12ರಂದು ಬಿಡುಗಡೆಯಾಗುತ್ತಿದೆ. ಟೀಸರ್ ಗೆ ಸಿಕ್ಕ ಅದ್ಭುತ ರೆಸ್ಪಾನ್ಸ್ ಕಂಡು ಥ್ರಿಲ್ ಆಗಿರುವ ಚಿತ್ರತಂಡ ಕನ್ನಡ, ಮರಾಠಿ, ತೆಲುಗು, ತಮಿಳು, ಮಲಯಾಳಂ, ಸ್ಪ್ಯಾನಿಶ್, ಇಂಗ್ಲೀಷ್, ಕೊರಿಯನ್, ಜಪಾನೀಸ್ ಸೇರಿದಂತೆ ಇನ್ನೂ ಹಲವಾರು ಭಾಷೆಯಲ್ಲಿ ಪ್ಯಾನ್ ವರ್ಲ್ಡ್ ಸಿನಿಮಾವಾಗಿ ಪ್ರಪಂಚದಾದ್ಯಂತ ಬಿಡುಗಡೆ ಮಾಡಲು ನಿರ್ಧರಿಸಿದೆ.
ಕೆ. ನಿರಂಜನ್ ರೆಡ್ಡಿ ಪ್ರೈಮ್ ಶೋ ಎಂಟಟೈನ್ಮೆಂಟ್ ಬ್ಯಾನರ್ ನಡಿ ಅದ್ದೂರಿಯಾಗಿ ಬಿಗ್ ಬಜೆಟ್ ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವರಲಕ್ಷಿ ಶರತ್ ಕುಮಾರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಗೆಟಪ್ ಶ್ರೀನು, ಸತ್ಯ ಒಳಗೊಂಡ ಸ್ಟಾರ್ ಕಲಾವಿದರ ತಾರಾಬಳಗ ಚಿತ್ರದಲ್ಲಿದೆ. ಯುವ ಹಾಗೂ ಪ್ರತಿಭಾವಂತ ಸಂಗೀತ ನಿರ್ದೇಶಕರಾದ ಗೌರಹರಿ, ಅನುದೀಪ್ ದೇವ್ ಮತ್ತು ಕೃಷ್ಣ ಸೌರಭ್ ಸಂಗೀತ ನಿರ್ದೇಶನ, ದಶರಧಿ ಶಿವೇಂದ್ರ ಕ್ಯಾಮೆರಾ ವರ್ಕ್, ಎಸ್. ಬಿ ರಾಜು ತಲರಿ ಸಂಕಲನ ಚಿತ್ರಕ್ಕಿದೆ.