ಜ್ಯೋತಿಷ್ಯ

ರಾಶಿ ಆಧಾರಿತ ಗುಣಗಳು ವೈವಾಹಿಕ ಜೀವನದಲ್ಲಿ ಹೇಗೆ ಪ್ರಭಾವ ಬೀರುತ್ತದೆ ಎಂದರೆ…!

ಸಂಸಾರದ ಸರಿಗಮದಲ್ಲಿ ಸ್ವರಗಳ ಏರಿಳಿತಗಳು ಸರ್ವೆ ಸಾಮಾನ್ಯ ಆದರೂ ಸಹ ನಮ್ಮ ಜೀವನ ಅಪಶೃತಿ ಆಗದಂತೆ ನೋಡಿಕೊಳ್ಳಲು ಶಾಸ್ತ್ರದ ಸರಿಯಾದ ಅಳವಡಿಕೆ ಅತ್ಯವಶ್ಯ. ಸಾಮಾನ್ಯವಾಗಿ ಪ್ರೇಮ ವಿವಾಹವೇ ಆಗಲಿ ಅಥವಾ ಹಿರಿಯರು ಅಳೆದೂ-ತೂಗಿ ಗಣಕೂಟಗಳನ್ನು ಲೆಕ್ಕ ಹಾಕಿ ವಿವಾಹ ಮಾಡಿದ್ದರೂ ಸಹ ಮನುಷ್ಯನ ಗುಣಗಳು ಅವನ ಜನ್ಮರಾಶಿ (ಅಥವಾ ಲಗ್ನದ) ಆಧಾರದ ಮೇಲೆ ನಿಂತಿರುವುದರಿಂದ ಅನುಭವಿಸಲೇ ಬೇಕಾದ ಸಂಗತಿಗಳು ಬಹಳ ಇರುತ್ತವೆ.

                ರಾಶ್ಯಾಧಾರಿತ ಗುಣಗಳು ವೈವಾಹಿಕ ಜೀವನದಲ್ಲಿ ಹೇಗೆ ಪ್ರಭಾವ ಬೀರುತ್ತದೆ ಎಂದರೆ :

ಬಾಳ ಸಂಗಾತಿಯೊಂದಿಗೆ ಜೀವನ ನೆಡೆಸುವುದೇ ಅಸಾಧ್ಯ ಎಂಬಷ್ಟು ಕಷ್ಟಪಡುವವರು ಎಂದರೆ ಸಾಮಾನ್ಯವಾಗಿ ಕುಂಭ, ತುಲಾ, ವೃಷಭ ಹಾಗು ಸಿಂಹ ರಾಶಿಗೆ ಸೇರಿದವರು ಕಾರಣ ರಾಶ್ಯಾಧಿಪತಿಗೆ ಹಾಗು ಸಪ್ತಮಾಧಿಪತಿ ರಾಶಿಯ ಸ್ವಭಾವ ಹಾಗು ಗುಣದರ್ಮ! ಹೀಗಿರುವಾಗ ಆಗಾಗ ಹಿಂಸೆ ಆದರೂ ಸಹ ಏನೇ ಆಗಲಿ ಸಹಿಸಿಕೊಂಡು ಹೋಗಬೇಕು ಎಂದರಿತು ಜೀವನ ಸಾಗಿಸುವವರ ಸಾಲಿಗೆ ಬರುವ ರಾಶಿಗಳು ಎಂದರೆ ಮಿಥುನ, ಕನ್ಯಾ, ಕರ್ಕ ಹಾಗು ಮೀನ ಇನ್ನೂ ಕ್ಷಣಕ್ಕೊಂದು ತರಹ ಬದಲಾಗುವ ತಮ್ಮ ಬಾಳಸಂಗಾತಿಯ ಬಗ್ಗೆ ಯಾವ ತೀರ್ಮಾನಕ್ಕೂ ಬರಲಾಗದೇ ಕಸಿವಿಸಿಯಲ್ಲೇ ಕಾಲಕಳೆಯುವವರು ಧನು ಹಾಗು ಮಕರ ರಾಶಿಯವರು ಆಗಿರುತ್ತಾರೆ. ಇಲ್ಲಿ ಬಹಳ ವಿಶೇಷ ಹಾಗು ವಿಭಿನ್ನ ಎನ್ನಿಸುವುದು ಮಾತ್ರ ಮೇಷ ಹಾಗು ವೃಶ್ಚಿಕ ರಾಶಿಯವರ ಸಮಸ್ಯೆಗಳು ಎಂದರೆ ತಪ್ಪಲ್ಲ! ಕಾರಣ ವಿವಾಹದ ಆದಿಯಲ್ಲಿ ಸರಿ ಇರುವ ಇವರುಗಳು ಮದುವೆಯ ನಂತರ ಗಂಡಸಿಗೆ ಭಾರ್ಯಾ ರೂಪವತೀ ಶತ್ರು ಎಂದೆನಿಸಿದರೆ ಪ್ರಪಂಚದ ಎಲ್ಲಾ ಹೆಂಗಸರು ತನ್ನ ಗಂಡನ ಹಿಂದೆನೆ ಬಿದ್ದಿದ್ದಾರೆ ಎಂದು ಪರಿತಪಿಸುವ ಹೆಂಡತಿ!

                ಸಂಸಾರದಲ್ಲಿ ಒಡಕು ಉಂಟು ಮಾಡುವ ಇನ್ನು ಬಹಳ ಮುಖ್ಯವಾದ ಕಾರಣ ರಾಶಿಯಿಂದ ಸಪ್ತಮದಲ್ಲಿ ಇರುವ ಪಾಪಗ್ರಹಗಳು! ಯಾವುದೇ ರಾಶಿಯವರಾಗಲೀ ಅವರ ಜನ್ಮ ಜಾತಕದಲ್ಲಿ ಲಗ್ನ ಅಥವಾ ರಾಶಿಯಿಂದ ಏಳನೇಯ ಮನೆಯಲ್ಲಿ ಪಾಪ ಅಥವಾ ಕ್ರೂರ ಗ್ರಹಗಳಾದ ರಾಹು, ಕೇತು, ಶನಿ, ಕುಜ ಇತ್ಯಾದಿಗಳಿದ್ದರೆ ಬಾಳ ಸಂಗತಿಯೊಂದಿಗೆ ವಿರಸ, ಜಗಳ ಎಂದೂ ಸಹ ಮಿತಿಮೀರದಂತೆ ಎಚ್ಚರವಹಿಸ ಬೇಕು. ಶಾಸ್ತ್ರಕಾರರ ಪ್ರಕಾರ ಸ್ತ್ರೀ ಜಾತಕದಲ್ಲಿ ಸಪ್ತಮದಲ್ಲಿ ಬಲಹೀನ ಪಾಪಗ್ರಹಗಳಿದ್ದರೆ ಪತಿಯಿಂದ ತ್ಯಜಿಸಲ್ಪಡುತ್ತಾಳೆ ಹಾಗು ಶುಭಾ ಶುಭ ಗ್ರಹರೊಂದಿಗೆ ಕ್ರುರ ದೃಷ್ಠಿ ಕ್ರೂರ ಗ್ರಹಮುತ ಕ್ರೂರ ನವಾಂಶ ಪಾಪ ಕರ್ತರೀ ಯೋಗದಲ್ಲಿದ್ದಲ್ಲಿ ಸ್ತ್ರೀ ಅನ್ಯ ಪುರುಷನನ್ನು ಹೊಂದುತ್ತಾಳೆ! ಇನ್ನು ಪುರುಷರಿಗೂ ಸಹ ಸಪ್ತಮಾಧಿಪ ಹಾಗು ವಿವಾಹ ಕಾರಕಗ್ರಹ ಶುಕ್ರನು ಬಲಹೀನನಾಗಿ ಸಪ್ತಮರಾಶಿಯು ಪಾಪಕ್ರಾಂತವಾಗಿ ದುರ್ಬಲವಾದರೆ ಸಪ್ತಮಕ್ಕೆ ಶುಭಯೋಗ ದೃಷ್ಠಿ ಇಲ್ಲದಿದ್ದರೆ ಶಾಸ್ತ್ರ ಪ್ರಕಾರ ಅದು ಕಳತ್ರಾರಿಷ್ಠ. ಹೆಂಡತಿಗೆ ಅರಿಷ್ಟ ಹೆಂಡತಿಯಾದವಳಿಗೆ ತೊಂದರೆ ಸ್ತ್ರೀ ಜಾತಕದಲ್ಲಾಗಲೀ ಅಥವಾ ಪುರುಷ ಜಾತಕದಲ್ಲಾಗಲೀ ಪ್ರಣಯ ಕಾರಕ ಶುಕ್ರ ಉಚ್ಛಸ್ಥಿತಿಯಲ್ಲಿ ಇದ್ದು ಶರೀರದಲ್ಲಿ ಆಸೆಗಳನ್ನು ತಾರಕ್ಕೇರಿಸುವಾಗ ಶನಿಯ ಪ್ರಭಾವ ಲಗ್ನ ಅಥವಾ ರಾಶಿಯ ಮೇಲೆ ಇದ್ದು ನಪುಂಸಕರಾಶಿ ಅಥವಾ ಲಗ್ನವನ್ನು ಸಪ್ತಮಾಧಿಪತಿಯಾಗಿ ಪಡೆದರೆ ಅನೈತಿಕತೆ ತಾಂಡವವಾಡುವುದರಲ್ಲಿ ಸಂಶಯವಿಲ್ಲ!

                ಇನ್ನು ಪರಿಹಾರಗಳತ್ತ ನಾವು ಚಿಂತಿಸಿದರೆ ಅಪಾಯ ಕೋಟಿಗಳಿಗೆ ಉಪಾಯ ಹರಿನಾಮ ಎಂಬ ದಾಸವರೆಣ್ಯರ ನುಡಿಯಂತೆ ಸರಿಯಾದ ವಿಧಾನದಲ್ಲಿ ದೇವತಾರಾಧನೆ ಮಾಡಬೇಕಾಗುತ್ತದೆ. ಎಲ್ಲಾ ರಾಶಿಯವರೂ ಸಹ ತಮ್ಮ ಸಪ್ತಮಾಧಿಪತಿಗ್ರಹದ ಅಭಿಮಾನಿ ದೇವತೆಯ ವೇದೋಕ್ತ ಆರಾಧನೆಯಿಂದ ಬಾಳ ಸಂಗಾತಿಯೊಂದಿಗೆನ ಎಲ್ಲಾ ತರಹದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳ ಬಹುದು. ಅದರಲ್ಲಿಯೂ ಸಹ ವಿಶೇಷವಾಗಿ ಕಮಲ ಪುಷ್ಪಗಳಿಂದ ಶುಕ್ರವಾರದಂದು ಸಾಯಂಕಾಲದಲ್ಲಿ ಶ್ರೀ ಲಕ್ಷ್ಮಿನಾರಾಯಣ ಹೃದಯ ಪಾರಾಯಣ, ಪೂಜೆ ಹಾಗು ಹವನದಿಂದ ಸುಖಿ ಸಂಸಾರ ಜೀವನ ನಿರ್ವಹಣೆ ಅಷ್ಟೇ ಅಲ್ಲದೇ ಅದೇ ಸ್ತೋತ್ರದಲ್ಲಿ ಹೇಳಿದಂತೆ “ಜಾಯತೇ ಶ್ರೀಪತಿ ಸ್ವಯಂ”

                ಆ ಮಹಾವಿಷ್ಣುವಿನ ಅನುಗ್ರಹದಿಂದ ಉತ್ತಮ ಸಂತಾನವನ್ನೂ ಸಹ ಪಡೆದು ಸುಖವಾಗಿ ಇರಬಹುದು. ಎಲ್ಲರ ಮನೆ ದೊಸೆನೂ ತೂತು ಎಂದು ತಿಳಿದಿದ್ದರೂ ಸಹ ಹೆಂಚು ತೂತಾಗ ಬಾರದೆಂದು ಸದಾ ನಮ್ಮ ಪ್ರಯತ್ನವಿರಬೇಕು.  ಹೆಚ್ಚಿನ ಮಾಹಿತಿಗಾಗಿ – 9845682380

ಪಂಡಿತ್ ಶ್ರೀ ವಿಠ್ಠಲ್ ಭಟ್

 

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.