ನಮ್ಮ ಮಕ್ಕಳು ಒಳ್ಳೆಯ ವಿದ್ಯಾವಂತರಾಗಬೇಕು ಎನ್ನುವ ಆಸೆ ಸಾಮಾನ್ಯವಾಗಿ ಎಲ್ಲಾ ಪೆÇಷಕರಲ್ಲೂ ಇರುತ್ತದೆ. ನನ್ನ ಮಗ ಅಥವಾ ಮಗಳು ನನಗಿಂತ ಹೆಚ್ಚು ಓದಬೇಕು ಹೆಚ್ಚಿನ ಸಾಧನೆ ಮಾಡಬೇಕು ಎಂದು ಪರದಾಡುವ ತಂದೆ ತಾಯಿ ಆ ನಿಟ್ಟಿನಲ್ಲಿ ಹೆಚ್ಚಿನ ಸಮಯ ಹಾಗು ಹಣ ಎರಡನ್ನೂ ವ್ಯಯಿಸುತ್ತಾರೆ. ಹೀಗಿರುವಾಗ ನಮ್ಮ ವಿಶಿಷ್ಟ ಪುರಾತನ ಜ್ಯೋತಿಷ ಶಾಸ್ತ್ರದ ಸಹಾಯವನ್ನೂ ಸಹ ಪಡೆದರೆ ಗುರಿ ಮುಟ್ಟುವುದು ಸ್ವಲ್ಪ ಮಟ್ಟಿಗೆ ಸುಲಭ ಸಾಧ್ಯ ಆಗುವುದರಲ್ಲಿ ಸಂಶಯವಿಲ್ಲ.
ಜ್ಯೋತಿಷ ಶಾಸ್ತ್ರದ ಪ್ರಕಾರ ವಿದ್ಯೆ ಚನ್ನಾಗಿ ಸಿಗಬೇಕು ಎಂದರೆ ಆ ಜಾತಕದಲ್ಲಿ ಪ್ರಮುಖವಾಗಿ ಗುರು ಗ್ರಹ ಹಾಗು ಬುಧ ಗ್ರಹ ಈ ಎರಡೂ ಗ್ರಹಗಳು ಚನ್ನಾಗಿ ಇರಬೇಕು. ವಿದ್ಯಾಕಾರಕ ಬುಧ ಹಾಗು ಜ್ಞಾನಕಾರಕ ಗುರು ಈ ಎರಡೂ ಗ್ರಹಗಳು ವಿದ್ಯಾ ಪ್ರಾಪ್ತಿಯಲ್ಲಿ ವಿಶೇಷ ಪಾತ್ರವಹಿಸುತ್ತದೆ.
ಗಣಿತ ಶಾಸ್ತ್ರ ಎಂಬುದು ಬಹಳಷ್ಟು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ ಇದಕ್ಕೆ ಕಾರಣ ಕೆಲವೊಮ್ಮೆ ಅಂಥವರ ಜಾತಕದಲ್ಲಿ ಬುಧನ ಸ್ಠಿತಿ ಮೇಷ, ಕರ್ಕ, ವೃಶ್ಚಿಕ ಹಾಗೂ ಮೀನ ಈ ರಾಶಿಗಳಲ್ಲಿ ಬುಧ ಜಾತಕದಲ್ಲಿ ಇದ್ದಾಗ ರಾಶ್ಯಾಧಿಪತಿಯೊಂದಿಗಿನ ವೈರತ್ವ ಅಥವಾ ನೀಚತ್ವದಿಂದಾಗಿ ತನ್ನ ಬಲ ಕಳೆದು ಕೊಳ್ಳುವ ಬುಧ ಜಾತಕನಿಗೆ ಒಳ್ಳೆಯ ವಿದ್ಯೆ ಕೊಡುವಲ್ಲಿ ವಿಫಲನಾಗುತ್ತಾನೆ. ಇನ್ನು ಗುರುಗ್ರಹವೂ ವ್ಯಯದಲ್ಲಿ ಇದ್ದರೆ ಅಥವಾ ವೃಷಭ,ಮಿಥುನ,ಕನ್ಯಾ,ತುಲಾ,ಮಕರ ಈ ಯಾವುದಾದರೊಂದು ರಾಶಿಯಲ್ಲಿ ಇದ್ದರೆ ಗುರು ಗ್ರಹವೂ ಸಹ ಬಲಹೀನನಾಗಿ ವಿದ್ಯಾರ್ಥಿಗಳು ಚನ್ನಾಗಿ ಕಷ್ಟಪಟ್ಟು ಓದಿದ ವಿಷಯ ಸಮಯಕ್ಕೆ ಸರಿಯಾಗಿ ನೆನೆಪಾಗದೆ ಮರೆವು ಹೆಚ್ಚಾಗಿ ಪರಿಕ್ಷೆಯಲ್ಲಿ ತೊಂದರೆಗಳು ಅನುಭವಿಸ ಬೇಕಾಗುತ್ತದೆ.
ಇನ್ನು ಭವಿಷ್ಯದಲ್ಲಿ ಉತ್ತಮ ಉದ್ಯೋಗದ ಕನಸುಹೊತ್ತು ಓದುವ ವಿದ್ಯಾರ್ಥಿಗಳು ಗಮನಿಸಲೇ ಬೇಕಾದ ಕೆಲವು ಸಂಗತಿಗಳು ಇವೆ ಅದು ಎನು ಅಂದರೆ ಪ್ರತಿಯೊಬ್ಬರ ಜಾತಕದಲ್ಲೂ ಸಹ ಕರ್ಮಾಧಿಪತಿ ಗ್ರಹ ಎಂದು ಇರುತ್ತದೆ. ಅಂಥಃ ಕರ್ಮಾಧಿಪತಿ ಗ್ರಹ ಯಾವ ಉದ್ಯೋಗವನ್ನು ಸೂಚಿಸುತ್ತದೆಯೋ ಅದನ್ನೇ ಮೊದಲಿನಿಂದಲೂ ಅಭ್ಯಾಸ ಮಾಡಿ ಅದೇ ವಿಷಯದಲ್ಲಿ ಪದವಿ ಪಡೆದರೆ ಭವಿಷ್ಯದಲ್ಲಿ ಉದ್ಯೊಗ ದೊರಕುವುದು ಸುಲಭವಾಗಿರುತ್ತದೆ.
ಬುಧ ಹಾಗು ಗುರು ಗ್ರಹ ಈ ಎರಡೂ ಗ್ರಹಗಳು ಚನ್ನಾಗಿ ಇದ್ದರೂ ಸಹ ಕೆಲವರಿಗೆ ವಿದ್ಯೆಯಲ್ಲಿ ಸಮಸ್ಯೆಗಳು ಎದುರಾಗುತ್ತವೆ ಅದಕ್ಕೆ ಇನ್ನೊಂದು ಮುಖ್ಯ ಕಾರಣ ಸರ್ಪದೋಷ ! ಈ ದೋಷದಿಂದಾಗಿ ಶ್ರದ್ದೆಯಿಂದ ಓದಿದರೆ ಒಳ್ಳೆಯ ವಿದ್ಯೆ ಪಡೆಯಬಹುದಾದ ವಿದ್ಯಾರ್ಥಿಗಳು ಸಹ ಅತಿಯಾದ ಸಿಟ್ಟು ಹಾಗು ಬೇಡದ ಹಠ ಮಾಡಿ ವಿದ್ಯೆಯಿಂದ ವಂಚಿತರಾಗುತ್ತಾರೆ.
ಇಂಥ ಸಮಸ್ಯೆಗಳ ಪರಿಹಾರದ ವಿಚಾರಕ್ಕೆ ಬಂದಾಗ ಪೆÇೀಷಕರು ಹೆಚ್ಚಿನ ಆಸಕ್ತಿ ತೋರ ಬೇಕಾಗುತ್ತದೆ. ತಮ್ಮ ಮಕ್ಕಳ ಜಾತಕವನ್ನು ಒಮ್ಮೆ ಸರಿಯಾದ ಜ್ಯೋತಿಷ್ಯಗಳ ಬಳಿ ಕೊಟ್ಟು ಪರಿಶೀಲಿಸಬೇಕು . ಬುಧನ ದೋಷ ಪರಿಹಾರಕ್ಕಾಗಿ ಪುರುಷ ಸೂಕ್ತ ಹವನ ಹಾಗು ಗುರು ದೋಷ ಪರಿಹಾರಕ್ಕೆ ಗುರು ಮಂತ್ರ ಜಪ ಹಾಗು ಹವನ ಮಾಡಿಸಬೇಕು ಅದರಲ್ಲೂ ಸಹ ಸರಸ್ವತೀ ಮಂತ್ರ ಹವನದಿಂದ ಖಂಡಿತ ವಿಶೇಷ ಫಲ ಸಿಗುತ್ತದೆ. ಇನ್ನು ಹವನ ಮಾಡಿಸಲು ಅಶಕ್ತರು ಯಂತ್ರ ಮುದ್ರಿತ ಅಲ್ಲದೆ ಶಾಸ್ರ್ತೇಕ್ತವಾಗಿ ಕೈಯಲ್ಲೇ ತಾಮ್ರದ ತಗಡಿನಲ್ಲಿ ಸರಸ್ವತಿ ಯಂತ್ರ ಬರೆಸಿ ಅದನ್ನು ತಮ್ಮ ಮಕ್ಕಳ ಕೈನಲ್ಲಿ ಪೂಜೆ ಮಾಡಿಸಬಹುದು. ಪ್ರತಿ ನಿತ್ಯ ಸರಸ್ವತಿ ಅಷ್ಟೋತ್ತರ ಒದಿಸಬೇಕು.ಇನ್ನು ಮನೆಯಲ್ಲಿ ಈಶಾನ್ಯದಲ್ಲಿ ಒಂದು ಕೋಣೆ ಇದ್ದ ಪಕ್ಷದಲ್ಲಿ ಮಕ್ಕಳನ್ನು ಅದೇ ಕೋಣೆಯಲ್ಲಿ ಕುಳಿತು ಓದಲು ಹೇಳಿದರೆ ಉತ್ತಮ ಫಲ ನಿರೀಕ್ಷಿಸಬಹುದು.
ಪೆÇೀಷಕರು ತಮ್ಮ ಇತರೇ ಪ್ರಯತ್ನಗಳೊಂದಿಗೆ ಹೀಗೆ ಶಾಸ್ತ್ರದ ಸಹಾಯವನ್ನು ಪಡೆದರೆ ತಮ್ಮ ಕನಸನ್ನು ಹಾಗು ತಮ್ಮ ಮಕ್ಕಳ ಆಸೆ ಎರಡನ್ನೂ ಸಾಧಿಸಬಹುದು ,
VITTAL BHAT
ಹೆಚ್ಚಿನ ಮಾಹಿತಿಗಾಗಿ – 9845682380