ಜ್ಯೋತಿಷ್ಯ

ಮರುಮದುವೆ ಆಗಲು ಬಯಸುವವರು ಗಮನಿಸಬೇಕಾದ ಅಂಶಗಳು

ಸಾಮಾನ್ಯವಾಗಿ ಯಾರು ಸಹ ತಮ್ಮ ಜೀವನದಲ್ಲಿ ಅವಶ್ಯವಾಗಿ ಮರುಮದುವೆ ಆಗಬೇಕೆಂದು ಮೊದಲೇ ತೀರ್ಮಾನಿಸಿರುವುದಿಲ್ಲ ಆದರೆ ಕೆಲವರಿಗೆ ಪರಿಸ್ಥಿತಿಯ ಪ್ರಭಾವಗಳಿಂದ ಜೀವನಾಂಶದ ಅನಿವಾರ್ಯತೆಯಿಂದ ಅಥವಾ ಸಂತಾನದ ಪಾಲನೆ ಪೋಷಣೆಗಾಗಿ ಮರುಮದುವೆಯಾಗಲೇ ಬೇಕಾದ ಸ್ಥಿತಿ ಉಧ್ಭವಿಸುತ್ತದೆ. ಈ ಕಾರಣಗಳು ಗಂಡು ಹಾಗೂ ಹೆಣ್ಣು ಇಬ್ಬರಿಗೂ ಸಮವಾಗಿ ಇರುತ್ತದೆ. ಸಾಮಾನ್ಯವಾಗಿ ಮರುಮದುವೆಯ ಅವಶ್ಯಕತೆಗಳು ಬರುವುದು ಹೆಣ್ಣಿಗೆ ವೈಧವ್ಯ ಹಾಗೂ ಗಂಡಿಗೆ ವಿದುರತ್ವ ಪ್ರಾಪ್ತವಾದಾಗ ಅಥವಾ ವಿವಾಹ ವಿಚ್ಛೇದನ ಆದಾಗ. ಇವುಗಳಲ್ಲಿ ಯಾವುದಾದರೂ ಸಂಭವಿಸಲು ಹಲವು ಕಾರಣಗಳು ಗಂಡು ಹೆಣ್ಣಿನ ಜಾತಕದಲ್ಲಿಯೇ ಇರುತ್ತವೆ.

ಮೊದಲನೇ ವಿವಾಹ ಮಾಡುವ ಮೊದಲು ಗಂಡು ಹಾಗೂ ಹೆಣ್ಣಿನ ಜಾತಕಗಳನ್ನು ಸರಿಯಾಗಿ ಪರಿಶೀಲಿಸದೆಯೇ ಆಶಾಸ್ತ್ರೀಯವಾಗಿ ಕೇವಲ ಹೆಸರು ಬಲದ ಮೇಲೆ ವಿವಾಹ ಮಾಡುವುದರಿಂದ ಅಥವಾ ಗಂಡು ಹೆಣ್ಣಿನ ಜಾತಕಗಳನ್ನು ಪರಿಶೀಲಿಸದೆ ಕೇವಲ ಜನ್ಮ ನಕ್ಷತ್ರಗಳಿಂದ ಒಟ್ಟೂ ಬರುವ ಗಣಕುಟಗಳನ್ನು ಎಣಿಸಿ ಮದುವೆ ಮಾಡುವುದು. ಹೀಗೆ ಮಾಡಿದಾಗ ಗಂಡಿಗಾಗಲಿ ಅಥವಾ ಹೆಣ್ಣಿಗಾಗಲಿ ಮೂಲ ಜಾತಕದಲ್ಲಿ ಜನ್ಮ ಲಗ್ನ ಅಥವಾ ಜನ್ಮ ರಾಶಿಯ ಸಪ್ತಮ ಅಥವಾ ಅಷ್ಟಮ ಭಾವಗಳಲ್ಲಿ ದುರದೃಷ್ಟವಶಾತ್ ಪಾಪಗ್ರಹಗಳು ಇದ್ದರೆ ಆ ದಂಪತಿಗಳು ಸುಖಿ ದಾಂಪತ್ಯ ಜೀವನ ನೆಡೆಸುವುದು ಕಷ್ಟಕರವಾಗಿಬಿಡುತ್ತದೆ ಹಾಗೂ ದ್ವಿಕಲತ್ರ ಯೋಗ ಸಂಭವಿಸುತ್ತದೆ ಅಂದರೆ ಅನಿವಾರ್ಯ ಕಾರಣಗಳಿಂದ ಮರುವಿವಾಹ ಎಂದು ತಿಳಿಯಬಹುದು.

ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಶಾಸ್ತ್ರಗಳಲ್ಲಿ ಸ್ತ್ರೀಯರಿಗೆ ಮರು ವಿವಾಹದ ಬಗ್ಗೆ ತಿಳಿಸದೆ ಇದ್ದರೂ ಸಹ ಕೇರಳದ ಪುರಾತನ ಪ್ರಶ್ನ ಮಾರ್ಗಮ್ ಗ್ರಂಥದ 20ನೇ ಅಧ್ಯಾಯದ 55 ಶ್ಲೋಕದಲ್ಲಿ “ಪುಮ್ಸಾಮ್ ತಥೈವ ನಾರೀಣಾಂ ಕರ್ತವ್ಯಮ್ ಭರ್ತೃಚಿಂತನಂ” ಎಂದು ತಿಳಿಸಿದಂತೆ ಪುರುಷರ ಭಾರ್ಯಾ ಚಿಂತನೆ ಮಾಡಿದಂತೆಯೇ ಸ್ತ್ರೀಯರ ಪತಿ ಚಿಂತನೆಯನ್ನು ಮಾಡಬೇಕು. ಹೀಗಿರುವಾಗ ಸ್ತ್ರೀ ಜಾತಕದಲ್ಲಿ ಎಂಟನೆಯ ಭಾವದಲ್ಲಿ ಪಾಪ ಗ್ರಹರಿದ್ದು ಅದನ್ನು ಸರಿ ಮಾಡಿ ನೋಡದೆ ವಿವಾಹ ಮಾಡಿದಲ್ಲಿ ಆ ಸ್ತ್ರೀ ನಂತರ ವೈಧವ್ಯವನ್ನು ಅನುಭವಿಸ ಬೇಕಾಗುತ್ತದೆ ಇನ್ನು ಗಂಡನ ಜಾತಕದಲ್ಲಿ ಆಯುಷ್ಯ ಗಟ್ಟಿ ಇದ್ದರೆ ಕಾರಣಾಂತರಗಳಿಂದ ಗಂಡನಿಂದ ದೂರ ಇರ ಬೇಕಾಗುವುದು ಅಥವಾ ವಿವಾಹ ವಿಚ್ಛೇದನ ಪಡೆದು ಮರು ಮದುವೆಯ ಬಗ್ಗೆ ಚಿಂತಿಸುವ ಪರಿಸ್ಥಿತಿಗಳು ಉಧ್ಭವಿಸುತ್ತವೆ. ಇಲ್ಲಿ ಸ್ತ್ರೀ ಜಾತಕವನ್ನೇ ಪ್ರಧಾನವಾಗಿ ಗಮನಿಸಿದರೆ ಸಪ್ತಮದಲ್ಲಿ ಕ್ರೂರ ಗ್ರಹಗಳಿಂದ ವಿಧವಾ ಯೋಗವಾದರೆ ಅದೇ ಭಾವದಲ್ಲಿ ಬಲಹೀನ ಪಾಪ ಗ್ರಹಗಳು ಇದ್ದರೆ ಪತಿಯಿಂದ ತ್ಯಜಿಸಲ್ಪಡುವಳು!

“ಲಗ್ನೆ ಕುಟುಂಬೆ ದಾರೆ ವಾ ಪಾಪಖೇಚರ ಸಂಯುತೆ,ದಾರೆಶೆ ನೀಚ ಮುಡಾರೌ ಕಳತ್ರತ್ರಮಾದಿಶೇತ್”ಎಂದು ಪ್ರಶ್ನ ಮಾರ್ಗಂ ಗ್ರಂಥದಲ್ಲಿ ಉಲ್ಲೇಖವಾಗಿರುವ ಇನ್ನೊಂದು ಶ್ಲೋಕವು ಸಹ ಗಮನಾರ್ಹ ! ಈ ಶ್ಲೋಕದ ಅರ್ಥ ಜನ್ಮ ಲಗ್ನದಲ್ಲಾಗಲಿ ಎರಡನೇ ಭಾವದಲ್ಲಾಗಲಿ ಏಳನೇ ಭಾವದಲ್ಲಾಗಲಿ ಪಾಪಗ್ರಹಗಳಿದ್ದು ಸಪ್ತಮಾಧಿಪತಿ ನೀಚ ಭಾವದಲ್ಲಿಯಾಗಲಿ ಅಥವಾ ಮೌಢ್ಯದಿಂದ ಕೂಡಿದ್ದು ಅಂದರೆ ರವಿಯೊಂದಿಗೆ ಅಸ್ತವಾಗಿದ್ದರೆ ಅಥವಾ ಶತ್ರು ಕ್ಷೇತ್ರ ಸ್ಥಿತನಾಗಿದ್ದರೆ ಮೂರು ಬಾರಿ ವಿವಾಹ ಯೋಗ ಇರುತ್ತದೆ !! ಆದುದರಿಂದಲೇ ಇಲ್ಲಿ ಗಮನಿಸ ಬೇಕಾದ ಅಂಶ ಎಂದರೆ ಒಮ್ಮೆ ವಿದುರತ್ವ ಅಥವಾ ವೈಧವ್ಯ ಅಥವಾ ವಿಚ್ಛೇದನ ಪಡೆದ ಸ್ತ್ರೀ ಅಥವಾ ಪುರುಷ ಮರುಮದುವೆ ಆಗ ಬಯಸಿದಲ್ಲಿ ಈಗಲಾದರೂ ಜಾತಕಗಳನ್ನು ಸರಿಮಾಡಿ ಪರಿಶೀಲಿಸಿ ಮದುವೆ ಆಗ ಬೇಕು. ಕಾರಣ ಜಾತಕದಲ್ಲಿ ಯಾವುದೇ ದೋಷ ಸ್ತ್ರೀಗೆ ಇಲ್ಲದೆ ಗಂಡನ ಜಾತಕದ ದೋಷದಿಂದಾಗಿ ವಿಚ್ಛೇದನ ಆಗಿದ್ದರೆ ಹಾಗೂ ಅಂತಹ ಸ್ತ್ರೀ ಜಾತಕದಲ್ಲಿ ದ್ವಿತೀಯ ಹಾಗೂ ಅಷ್ಟಮದಲ್ಲಿ ಶುಭ ಗ್ರಹಗಳಿದ್ದರೆ ಸೌಮಂಗಲ್ಯ ಯೋಗ ಇರುತ್ತದೆ ಆದುದರಿಂದ ಮರು ಮದುವೆ ಆಗುವಾಗ ಉತ್ತಮ ಜಾತಕದ ಪುರುಷನನ್ನು ಆರಿಸಿಕೊಳ್ಳ ಬೇಕು.

ಇನ್ನು ಪರಿಹಾರಗಳ ವಿಷಯಕ್ಕೆ ಬಂದಾಗ ಮರುಮದುವೆ ಆಗಲು ಬಯಸುವವರು ಕೇವಲ ಹೆಸರು ಬಲ ಅಥವಾ ಜನ್ಮ ನಕ್ಷತ್ರದ ಆಧಾರದ ಮೇಲೆ ಗಣಕೂಟ ಅಷ್ಟೇ ನೋಡದೆ ಗಂಡು ಹೆಣ್ಣಿನ ಜಾತಕ ಪರಿಶೀಲಿಸ ಬೇಕು. ಅಲ್ಲಿ ಸಪ್ತಮ ಹಾಗೂ ಅಷ್ಟಮ ಭಾವ ದಲ್ಲಿ ಇರುವ ಪಾಪ ಗ್ರಹಗಳ ಮಾಹಿತಿ ತಿಳಿದು ಆ ಗ್ರಹಗಳಿಗೆ ಶಾಂತಿ ಹವನವನ್ನು ಆಚರಿಸ ಬೇಕು, ಹಾಗೂ ಮೂರುಸಲ ವಿವಾಹ ಯೋಗ ಇರುವವರು ತಪ್ಪದೇ ಕದಳಿ ವಿವಾಹ ಅಥವಾ ಕುಂಭ ವಿವಾಹ ಮಾಡಿಸಿಕೊಳ್ಳ ಬೇಕು. ಯಾವುದೇ ದೇವತಾರಾಧನೆ ಪರಿಹಾರಗಳನ್ನು ಆಚರಿಸದೆ ಮರುಮದುವೆಯ ಬಗ್ಗೆ ಚಿಂತನೆ ಸಹ ಮಾಡದಿರಿ !

ಮರುಮದುವೆಯ ಇನ್ನೊಂದು ಮೂಲ ಉದ್ದೇಶ ಮನಶಾಂತಿ ಆದುದರಿಂದ ನೀವು ವೃಶ್ಚಿಕ ರಾಶಿಯವರಲ್ಲದಿದ್ದರೆ, ಶುಕ್ಲ ಪಕ್ಷದಲ್ಲಿ ಹುಟ್ಟಿದವರು ಹಾಗೂ ಜಾತಕದಲ್ಲಿ ಚಂದ್ರ ಜನ್ಮ ಲಗ್ನದಿಂದ 3,5,9ಅಥವಾ 11 ನೆಯ ಮನೆಯಲ್ಲಿ ಇದ್ದು ಆರನೇ,ಎಂಟನೇ ಅಥವಾ ಹನ್ನೆರಡನೇ ಮನೆಯ ಅಧಿಪತಿ ಅಲ್ಲದಿದ್ದರೆ ಉತ್ತಮ ಗುಣಮಟ್ಟದ ಮುತ್ತನ್ನು ಶನಿವಾರ ಹಾಗೂ ಭಾನುವಾರ ಪೂಜೆ ಮಾಡಿ ಸೋಮವಾರ ಮುಂಜಾನೆ ಉಂಗುರದ ಬೆರಳಿಗೆ ಧರಿಸುವುದರಿಂದ ಮಾನಸಿಕ ನೆಮ್ಮದಿಯನ್ನು ಪಡೆಯಬಹುದು. ಇನ್ನು ಮರುಮದುವೆಯ ಚಿಂತನೆಗಳನ್ನು ಮಾಡುತ್ತಿರುವವರು ಜಾತಕ ಪರಿಶೀಲನೆ ಅಷ್ಟೇ ಅಲ್ಲದೆ ಪ್ರಶ್ನ ಶಾಸ್ತ್ರದ ಮುಖಾಂತರ ಅಗೋಚರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ನಂತರ ವಿವಾಹ ಆಗುವುದು ಉತ್ತಮ ಕಾರಣ ಕೇವಲ ಪ್ರಶ್ನ ಶಾಸ್ತ್ರದ ಮುಖಾಂತರವೇ ಗಂಡು ಹೆಣ್ಣಿನ ನಡುವೆ ಆ ಋಣಾನುಬಂಧ ಎಷ್ಟರ ಮಟ್ಟಿಗೆ ಇದೆಯೆಂದು ತಿಳಿಯುವುದು. ಹೆಚ್ಚಿನ ಮಾಹಿತಿಗಾಗಿ:-9845682380
VITTAL BHAT

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.