ಜ್ಯೋತಿಷ್ಯ

ಈ ಕಾರಣಗಳೇ ನಿಮ್ಮ ಮನೆಯ ಕಷ್ಟಕ್ಕೆ ಮೂಲ !

ಜ್ಯೋತಿಷ್ಯ ವಿದ್ವಾನ್ ವಿನಯ್ ಭಟ್

MOBILE – 9448824575 / 8660425633   

ವಸಂತಿ ಅಸ್ಮಿನ್ ಇತಿ ‘ ವಾಸ್ತು: ‘

ಅಂದರೆ ` ಇಲ್ಲಿ ವಾಸಿಸುವುದು ‘ ಎಂದರ್ಥ.

ನಾವು ವಾಸ ಮಾಡುವ ಜಾಗದ ಅಥವಾ ಮನೆಯ ಬಗ್ಗೆ ಹೇಳುವ ಶಾಸ್ತ್ರವೇ ವಾಸ್ತು ಶಾಸ್ತ್ರ.

” ಭೂರೇವ ಮುಖ್ಯ ವಸ್ತು ಸ್ಯಾತ್ ತತ್ರ ಜಾತಾನಿ ಯಾನಿಹಿ ” ಎಂಬುದು ಮಯ ಎಂಬ ವಾಸ್ತು ಶಿಲ್ಪಿಯ ಮಾತು. ಭೂಮಿಯೇ ಮುಖ್ಯವಾದ ವಸ್ತು ; ಈ ಭೂಮಿ ಎಂಬ ವಸ್ತುವಿನಿಂದ ನಿರ್ಮಿಸುವ ಮನೆ, ದೇವಾಲಯ , ಕಾರ್ಯಾಲಯ ಮುಂತಾದ ನಿರ್ಮಾಣ ವಿಶೇಷಗಳಿಗೆ ವಾಸ್ತು ಎಂಬ ಹೆಸರು ಬಂದಿದೆ. ವಾಸ್ತುಪುರುಷ ಬಲವಾಗಿದ್ದರೆ ಮನೆಯ ಎಲ್ಲ ಸದಸ್ಯರೂ ಆರೋಗ್ಯವಂತರಾಗಿ , ವಿದ್ಯಾವಂತರಾಗಿ ಹಾಗೂ ಆರ್ಥಿಕವಾಗಿಯೂ ಪ್ರಬಲರಾಗಿರುತ್ತಾರೆ. ವಾಸ್ತುಪುರುಷ ಪ್ರಬಲನಾಗಲು ಮನೆಯ ವಾಸ್ತು ಸರಿ ಇರಬೇಕಲ್ಲವೇ ?

ಮನೆಯ ಯಾವ ಯಾವ ದಿಕ್ಕಿನಲ್ಲಿ ಏನೇನಿದ್ದರೆ ಮನೆಯ ವಾಸ್ತು ಬಲವಿರಿತ್ತದೆ ?

ಮೊದಲನೆಯದಾಗಿ ಈಶಾನ್ಯದಿಕ್ಕಿಗೆ ವಾಸ್ತು ಶಾಸ್ತ್ರದಲ್ಲಿ ಪ್ರಥಮ ಆದ್ಯತೆ ನೀಡುತ್ತಾರೆ. ಈಶಾನ್ಯ ಎಂದರೆ ಪೂರ್ವ ಮತ್ತು ಉತ್ತರ ದಿಕ್ಕಿನ ಮಧ್ಯಭಾಗ. ಇಂಗ್ಲಿಷಿನಲ್ಲಿ ಇದಕ್ಕೆ northeast ಎಂದು ಕರೆಯುತ್ತಾರೆ. ಈ ದಿಕ್ಕಿನಲ್ಲಿ ಭಾರ ಕಡಿಮೆ ಇರಬೇಕು. ಈಶಾನ್ಯ ದಿಕ್ಕಿನಲ್ಲಿ ದೇವರ ಮನೆ ಇರಬೇಕು. ಇದರಿಂದ ಮನೆಯ ಯಜಮಾನನಿಗೂ ಹಾಗೂ ಮನೆಯ ಗಂಡು ಮಕ್ಕಳಿಗೆ ಉತ್ತಮ ಲಾಭವಾಗುತ್ತದೆ. ಅಥವಾ ಈ ದಿಕ್ಕಿನ ಜಾಗವನ್ನು ಖಾಲಿ ಬಿಡಬೇಕು. ಇಲ್ಲಿ ಶೌಚಾಲಯವನ್ನು ಕಟ್ಟಬಾರದು. ಹಾಗೆಯೇ ಇಲ್ಲಿ ಪೊರಕೆ , ಚಪ್ಪಲಿಗಳನ್ನು ಇಡಬಾರದು ಇದರಿಂದ ಮನೆಗೆ ಹಾಗು ಮನೆಯ ಯಜಮಾನನಿಗೂ ಶ್ರೇಯಸ್ಸಲ್ಲ.

ಪೂರ್ವ ದಿಕ್ಕಿನಲ್ಲಿ ಮನೆಯ ಬಾಗಿಲು ಇರಬೇಕು.ಪೂರ್ವದಿಕ್ಕಿಗೆ ಅಭಿಮುಖವಾಗಿ ಮನೆ ಕಟ್ಟಿದರೆ ತುಂಬಾ ಉತ್ತಮ. ಸೂರ್ಯನ ಕಿರಣ ಮನೆಯ ಪ್ರಧಾನ ಬಾಗಿಲಿನ ಮೇಲೆ ಬೀಳಬೇಕು. ಮನೆಯ ಪೂರ್ವದ ಜಾಗ ಖಾಲಿ ಇದ್ದರೆ ಮನೆಯ ಆರ್ಥಿಕ ಪರಿಸ್ಥಿತಿ ಮತ್ತು ಮನೆಯವರ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ.

ಆಗ್ನೇಯ(southeast) ದಿಕ್ಕಿನಲ್ಲಿ ಅಂದರೆ ಪೂರ್ವ ಮತ್ತು ದಕ್ಷಿಣ ದಿಕ್ಕುಗಳ ಮಧ್ಯದಲ್ಲಿ ಅಡುಗೆ ಮನೆ ಇರಬೇಕು.ಈ ದಿಕ್ಕಿನಲ್ಲಿ ಶೌಚಾಲಯವಿದ್ದರೆ ಮನೆಯ ಸದಸ್ಯರು ತುಂಬಾ ಕಷ್ಟವನ್ನು ಅನುಭವಿಸುತ್ತಾರೆ.ಆದಾಯಕ್ಕೆ ಮೀರಿದ ಖರ್ಚು, ಸಾಲ , ಗಂಡು ಸಂತಾನದ ನಾಶ ಈ ರೀತಿಯ ಸಂಕಷ್ಟಗಳು ಬರುತ್ತವೆ.

ದಕ್ಷಿಣ ದಿಕ್ಕಿನಲ್ಲಿ ಬಾವಿ ಇರಕೂಡದು. ಆಕಸ್ಮಾತ್ ಇದ್ದರೆ ಮನೆಯ ಹೆಂಗಸರ ಮೇಲೆ ದುಷ್ಪರಿಣಾಮವಾಗುತ್ತದೆ. ಈ ದಿಕ್ಕಿನಲ್ಲಿ ಶಯನಗೃಹ ಇದ್ದರೆ ಒಳ್ಳೆಯದು.

ಈಶಾನ್ಯ ದಿಕ್ಕಿಗಿರುವಷ್ಟೇ ಪ್ರಮುಖ ಸ್ಥಾನ ನೈಋತ್ಯ(southwest) ದಿಕ್ಕಿಗೂ ಇದೆ. ಈ ಭಾಗವು ಎತ್ತರವಾಗಿರಬೇಕು. ಈ ದಿಕ್ಕಿನಲ್ಲೂ ಶಯನಗೃಹವಿರಬಹುದು. ಈಶಾನ್ಯದಿಕ್ಕಿನಲ್ಲಿ ದುಡ್ಡು , ಸಂಪತ್ತು ಹಾಗು ಒಡವೆಗಳನ್ನು ಇಡುವ ಕಪಾಟನ್ನು ಉತ್ತರಾಭಿಮುಖವಾಗಿಟ್ಟರೆ ಇನ್ನು ಸಂಪತ್ತು ವೃದ್ಧಿಯಾಗುತ್ತದೆ.

ಪಶ್ಚಿಮ ದಿಕ್ಕಿನಲ್ಲಿ ಸ್ಟೋರ್ , ಶೌಚಾಲಯಗಳನ್ನು ನಿರ್ಮಿಸಬೇಕು. ಈ ಭಾಗದಲ್ಲಿ ಗಿಡಗಳನ್ನು ನೆಡಬಹುದು. ಈ ದಿಕ್ಕಿನಲ್ಲಿ ದೇವರ ಮನೆಯಾಗಲಿ ಅಥವಾ ಅಡುಗೆ ಮನೆಯಾಗಲೀ ಇರಬಾರದು.

“ ವಾಯುವ್ಯೇ ಪಶುಮಂದಿರಂ ಸ್ಯಾತ್ ” ಅಂದರೆ ವಾಯುವ್ಯ(northwest) ದಿಕ್ಕಿನಲ್ಲಿ ಪಶುಮಂದಿರ(ಕೊಟ್ಟಿಗೆ)ವಿರಬೇಕು. ಈಗಿನ ನಗರಜೀವನದ ವ್ಯವಸ್ಥೆಯಲ್ಲಿ ಕೊಟ್ಟಿಗೆಯೇ ಇಲ್ಲವಾಗಿದೆ. ವಾಯುವ್ಯಕೋಣೆಯಲ್ಲಿ ಅಡುಗೆ ಮನೆ ಇರಬಹುದು. ವಾಯುವ್ಯ ದಿಕ್ಕಿನ ದೋಷದಿಂದಲೇ ಕೋರ್ಟಿನಲ್ಲಿ ಸೋಲು , ಮಿತ್ರರು ಶತ್ರುಗಳಾಗುವುದು, ಗಂಡಸರು ದುಷ್ಚಟಗಳ ದಾಸರಾಗುವುದು, ಹೆಂಗಸರು ಅನಾರೋಗ್ಯಪೀಡಿತರಾಗುತ್ತಾರೆ.

ಕೊನೆಯದಾಗಿ ಉತ್ತರ ದಿಕ್ಕಿನಲ್ಲಿ ಮುಖ್ಯ ದ್ವಾರ (ಬಾಗಿಲು) , ಡೈನಿಂಗ್ ಹಾಲ್ ಅಥವಾ ಸ್ಟಡಿ ಕೋಣೆ ಇರಬಹುದು. ಈ ದಿಕ್ಕಿನ ಪರಿಣಾಮದಿಂದ ಮನೆಯಲ್ಲಿ ಹಣದ ಕೊರತೆ ಉಂಟಾಗುತ್ತದೆ.

ದೇವರ ಕೋಣೆಯ ವೈಶಿಷ್ಟ್ಯ:

ಮನೆ ಎಂದ ಮೇಲೆ ದೇವರ ಕೋಣೆಯೇ ಪ್ರಧಾನ. ಈಶಾನ್ಯದಲ್ಲಿ ದೇವರ ಕೋಣೆಯಿದ್ದು ದೇವರನ್ನು ಪೂರ್ವಾಭಿಮುಖವಾಗಿಡಬೇಕು ಇಲ್ಲವೇ ಉತ್ತರಾಭಿಮುಖವಾಗಿಡಬೇಕು. ಇದರಲ್ಲಿ ವಾಸ್ತು ಪ್ರಾಧಾನ್ಯ ಕಂಡುಬರುತ್ತದೆ. ಪಶ್ಚಿಮಕ್ಕೆ ಮುಖ ಮಾಡಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ ಭದ್ರಾಚಲ , ಶ್ರೀ ಕಾಳಹಸ್ತಿ ಮೊದಲಾದ ಪುಣ್ಯಕ್ಷೇತ್ರಗಳು ಸಂಪೂರ್ಣವಾಗಿ ಫಲವನ್ನು ಅನುಭವಿಸುತ್ತಿಲ್ಲ.

ಆದ್ದರಿಂದ ಮನೆ ಕಟ್ಟುವಾಗ ಹಾಗು ಮನೆ ಕೊಂಡುಕೊಳ್ಳುವಾಗ ಎಲ್ಲ ರೀತಿಯಿಂದಲೂ ಯೋಚಿಸಿ ಮುಂದುವರಿಯಿರಿ.

“ದೇಹದ ವಕ್ರತೆಗೆ ಶಸ್ತ್ರ ಚಿಕಿತ್ಸೆ – ಗೇಹ(ಮನೆ)ದ ವಕ್ರತೆಗೆ ವಾಸ್ತು ಚಿಕಿತ್ಸೆ”

ಶುಭಂ ಭವತು.

ಜ್ಯೋತಿಷ್ಯ ವಿದ್ವಾನ್ ವಿನಯ್ ಭಟ್

MOBILE – 9448824575 / 8660425633   

Tags

Related Articles

Back to top button
Close
Close

Adblock Detected

Please consider supporting us by disabling your ad blocker