ಜ್ಯೋತಿಷ್ಯ

ಸ್ವಗೃಹ ಯೋಗ- ನನಸಾಗೋದು ಮಾತ್ರ ಕೆಲವರಿಗಷ್ಟೆ ! ಇದಕ್ಕೆ ಕಾರಣಗಳು ?

ಸ್ವಂತ ಮನೆಯಲ್ಲಿ ವಾಸ ಮಾಡಬೇಕು ಎನ್ನುವುದು ಸಾಮಾನ್ಯವಾಗಿ ಎಲ್ಲರ ಕನಸು. ಆದರೆ ಅದು ನನಸಾಗೋದು  ಮಾತ್ರ ಕೆಲವರಿಗಷ್ಟೆ ಇದಕ್ಕೆ ಕಾರಣಗಳು ಹತ್ತು ಹಲವು ಇದ್ದರೂ ಪ್ರಮುಖವಾದ ಕಾರಣವನ್ನು ಜ್ಯೋತಿಷ್ಯಶಾಸ್ತ್ರ ತಿಳಿಸುತ್ತದೆ.

                “ ದೇವತಾ: ಗ್ರಹರೂಪೇಣ ದರ್ಶಯಂತಿ ಶುಭಾಶುಭಂ” ಎನ್ನುವಂತೆ ನಮ್ಮ ಎಲ್ಲಾ  ಕನಸುಗಳ ಹಾಗೂ ಕಾಮನೆಗಳ ಸಾಕಾರಕ್ಕೆ ಗ್ರಹ ಬಲ ಮುಖ್ಯ  ಗ್ರಹ ನಿರ್ಮಾಣದ ವಿಚಾರಕ್ಕೆ ಬಂದಾಗ ಜ್ಯೋತಿಷ್ಯಶಾಸ್ತ್ರ ಬಹಳ ವಿಶೇಷವಾದ ವಿಭಿನ್ನ ಫಲಗಳನ್ನು ಕೊಡುವ ಗ್ರಹಗಳತ್ತ ಬೆಳಕು ಚೆಲ್ಲುತ್ತದೆ. ವಿಭಿನ್ನ ಹಾಗೂ ವಿಶೇಷ ಹೇಗೆ ಎಂದರೆ ಮನೆಯನ್ನು ಕೊಡುವ ಗ್ರಹ ಎಂದು  ನಾವು ಒಂದೇ ಗ್ರಹವನ್ನು ಸೂಚಿಸಲು ಆಗದು! ಏಕೆ ಎಂದರೆ ಮನೆಯನ್ನು ಕಟ್ಟಲು ಬೇಕಾದ ಜಾಗವನ್ನು ಅಂದರೆ ಭೂಮಿಯನ್ನು ಕೊಡುವ ಗ್ರಹ ’ಕುಜ’ ಹಾಗೇಯೇ ಕುಜ ಕೊಟ್ಟ ಭೂಮಿಯಲ್ಲಿ  ಮನೆ ಕಟ್ಟಲು ಸಾಮಾಗ್ರಿಗಳನ್ನು ಖರೀದಿಸಲು ಹಣವನ್ನು ಕೊಡುವ ಗ್ರಹ ಶುಕ್ರ  ನಂತರ ಅಂಥಃ ಕಟ್ಟಿದ ಮನೆ ಗಟ್ಟಿಯಾಗಿರಲು ನೂರು ವರ್ಷ  ಬಾಳಿಕೆ ಬರಲು ಹಾಗೂ ಆ ಮನೆಯಲ್ಲಿ ನಾವು ವಾಸ ಮಾಡಲು ಯೋಗವನ್ನು ಕರುಣಿಸುವವ “ಶನ್ಯೆಶ್ವರ’!

ಹೀಗೆ ಈ ಮೂರೂ ಗ್ರಹಗಳ ಬಲ ಯಾರಿಗೆ ಸಂಪೂರ್ಣವಾಗಿರುತ್ತದೆಯೋ ಅವರಿಗೆ ಸಂತೋಷವಾದ ಸ್ವಗೃಹ ನಿವಾಸಯೋಗ ! ಇನ್ನು ಕೆಲವರಿಗೆ ಜಾತಕದಲ್ಲಿ ಕರ್ಕ ರಾಶಿಯಲ್ಲಿ ಕುಜನಿದ್ದಾಗ ನೀಚತ್ವದಿಂದಾಗಿ ಭೂಮಿ ಖರೀದಿಸುವ ಯೋಗ ಇಲ್ಲದಿದ್ದರೂ ಅವರ ಜಾತಕದಲ್ಲಿ ಶುಕ್ರ ಹಾಗು ಶನಿ ಬಲಯುತನಾಗಿದ್ದ ಪಕ್ಷದಲ್ಲಿ ಪ್ಲಾಟ್ ಖರೀದಿಸುವ ಹಾಗು ಅದರಲ್ಲಿ ವಾಸಿಸುವ ಯೋಗ ಸಿಗುತ್ತದೆ . ಕುಜ ಹಾಗು ಶುಕ್ರ ಈ ಎರಡೂ ಗ್ರಹ ಸರಿಯಿಲ್ಲದೆ ಕೇವಲ ಶನಿ ಬಲ ಮಾತ್ರ ಇದ್ದರೆ ಬಾಡಿಗೆ ಮನೆಯಾದರೂ ಉತ್ತಮವಾದ ಹಾಗು ಸುಖಮಯವಾದ ಗೃಹಲಾಭ.

                ಎಲ್ಲಾ ಗ್ರಹಗಳ ಬಲವಿದ್ದರೂ ಸಹ ಕೆಲವರಿಗೆ ಮನೆ ಕಟ್ಟಲು ಆಗದು ಅದ್ದಕ್ಕೆ ಕಾರಣಗಳು ಹಲವು

1)            ಅಶುದ್ಧ ಭೂಮಿ:- ಯಾವ ಜಾಗದಲ್ಲಿ ಮನೆ ಕಟ್ಟಬೇಕು ಎಂದು ಯೋಚಿಸಿ ಪ್ರಾರಂಭಿಸುತ್ತಾರೊ ಮೊದಲನೇಯದಾಗಿ ಆ ಜಾಗ ಶುದ್ಧ ಹಾಗು ಗೃಹ ನಿರ್ಮಾಣಕ್ಕೆ ಯೋಗ್ಯವಾಗಿರುಬೇಕು , ಅಂದರೆ ಆಜಾಗದಲ್ಲಿ ನಾಗವಾಸಿಸುವ ಹುತ್ತ , ನಾಗನೆಡೆ (ಸರ್ಪಸಂಚಾರ) ಇರಬಾರದು ,ಸ್ಮಶಾನದ ಬಳಿಯಿರುವ ಜಾಗವು ಸಹ ನಿಷೀದ್ದ .

2)            ಕುಲದೇವತಾ ಕೋಪ:-  ನಮ್ಮ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಮನೆದೇವರ ಆಶೀರ್ವಾದ ಅತ್ಯಂತ ಆವಶ್ಯಕ. ಸ್ವಂತ ಮನೆಕಟ್ಟುವ ಮೊದಲು ನಮ್ಮ ಕುಲದೇವರಿಗೆ ಹೋಗಿ ಅಲ್ಲಿ ಪೂಜೆ ಹಾಗು ಪ್ರಾರ್ಥನೆ ಮಾಡದಿದ್ದರೆ ಮನೆ ಕಟ್ಟುವುದು ಕಷ್ಟ.

3)            ಆಯ :- ಮನೆಯನ್ನು ಕಟ್ಟುವ ಮೊದಲು ಖಾಲಿ ನಿವೇಶನದ ಉದ್ದ ಹಾಗು ಅಗಲವನ್ನು ಪರಿಗಣಿಸಿ ನಮ್ಮ ಶಾಸ್ತ್ರಗಳಲ್ಲಿ ಧ್ವಜ , ಗಜ, ಸಿಂಹ ,ವೃಷಭ ಹೇಗೆ ಕೆಲವು ಆಯಗಳನ್ನು ಹೇಳಿರುತ್ತಾರೆ , ಆಯಾದಿ ಷೊಡಶ ವರ್ಗದಲ್ಲಿ ಸೂಚಿಸುವಂತೆ ಎಲ್ಲ ಗುಣಗಳು ಸರಿಹೊಂದುವುದು ಕಷ್ಟ ಸಾಧ್ಯ ಆದರು ಸಹ ಮನೆಯನ್ನು ಕಟ್ಟುವಾಗ ಧನ, ಋಣ, ಆಯಸ್ಸು ,ಆಯ ಇವುಗಳನ್ನು ವಿಶೇಷವಾಗಿ ಪರಿಗಣಿಸಿ ಉತ್ತಮವಾದುದನ್ನು ಬಳಸಿ ಮನೆಯನ್ನು ಕಟ್ಟಬೇಕು ಇಲ್ಲವಾದಲ್ಲಿ ಸಹ ಗೃಹ ನಿರ್ಮಾಣ ಕಷ್ಟ ಸಾಧ್ಯ .

4)            ವಾಸ್ತು :- ಮನೆಯನ್ನು ಕಟ್ಟುವ ಕಾರ್ಯ ಪ್ರಾರಂಭಿಸುವಾಗ ಈಶಾನ್ಯದಿಂದಲೇ ಪ್ರಾರಂಭಿಸಬೇಕು ಅದಲ್ಲದೆ ಅಗ್ನಿ ಮೂಲೆಯಿಂದ ಅಥವಾ ವಾಯುವ್ಯದಿಂದ ಪ್ರಾರಂಭಿಸಿದಾಗ ಮನೆಕಟ್ಟುವ ಕಾರ್ಯದಲ್ಲಿ ವಿಘ್ನಗಳು ಹಾಗು ಅಕ್ಕ ಪಕ್ಕ ದವರಿಂದ ಮನಸ್ತಾಪ ಜಗಳಗಳು ಆಗುತ್ತವೆ .

ಹೀಗೆ ಸ್ವಗೃಹ ನಿರ್ಮಾಣದ ಕನಸು ನನಸಾಗಿಸಲು ಅನೇಕ ವಿಧವಾದ ತೊಡಕುಗಳು ಇರುತ್ತವೆ ಆದರೆ ಶಾಸ್ತ್ರದಲ್ಲಿ ಹೇಳಿದ ಪರಿಹಾರವನ್ನು ಸರಿಯಾದ ಮಾರ್ಗದಲ್ಲಿ ಅನುಸರಿಸಿದಾಗ ಆ ಕಂಡ ಕನಸು ನನಸಾಗಿ ಸುಖವಾಗಿ ಅಲ್ಲಿ ನೆಲಸಬಹುದು.

ಹೆಚ್ಚಿನ ಮಾಹಿತಿಗಾಗಿ:- 9845682380.

VITTAL BHAT

 

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.