–ಅರ್ಪಿತಾ ಹರ್ಷ ಲಂಡನ್
ಬೇಕರಿಗಳಲ್ಲಿ ಸಿಗುವ ದೂದ್ ಪೇಡ ತಿಂದು ಎಷ್ಟೊಂದು ರುಚಿಯಾಗಿದೆ ಹೇಗೆ ಮಾಡಬಹುದು ಎಂದು ಯೋಚಿಸುತ್ತಿದ್ದೀರಾ ? ಬಲು ಸುಲಭ. ಈ ಪೇಡ ಮನೆಯಲ್ಲಿಯೇ ಬಲು ಬೇಗ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು :
೧. ಹಾಲು ೨ ಕಪ್
೨. ಸಕ್ಕರೆ ೨ ಕಪ್
೩. ಮಿಲ್ಕ್ ಪೌಡರ್ ಅಥವಾ ಮಿಲ್ಕ್ ಕ್ರೀಂ
೪.ತುಪ್ಪ ೧ ಚಮಚ
ಮೊದಲಿಗೆ ಹಾಲನ್ನು ಚೆನ್ನಾಗಿ ಕುದಿಸಬೇಕು , ಕುದಿಯುತ್ತಿರುವ ಹಾಲಿಗೆ ಸಕ್ಕರೆ ಮಿಶ್ರ ಮಾಡಿ ಹಾಲು ಸ್ವಲ್ಪ ಬತ್ತುವವರೆಗೆ ಕಾಯಬೇಕು. ನಂತರ ಇದಕ್ಕೆ ಮಿಲ್ಕ್ ಪೌಡರ್ ಅಥವಾ ಮಿಲ್ಕ್ ಕ್ರೀಂ ಅನ್ನು ಹಾಕಿ ಚೆನ್ನಾಗಿ (ಸೌಟಿನಿಂದ ) ತಳಹಿಡಿಯದಂತೆ ಕಲಕುತ್ತಿರಬೇಕು. ಗಟ್ಟಿ ಆಗುತ್ತಾ ಬಂದ ನಂತರ ಉಂಡೆ ಮಾಡಬಹುದಾದ ಹದ ತಲುಪುತ್ತಿದ್ದಂತೆ ಒಲೆಯಿಂದ ತೆಗೆದು ಆರಲು ಬಿಡಬೇಕು ಸ್ವಲ್ಪ ಸಮಯದ ನಂತರ ಬೇಕಾದ ಆಕಾರದಲ್ಲಿ ಉಂಡೆ ಮಾಡಬಹುದು. ರುಚಿಯಾದ ದೂದ್ ಪೇಡ ರೆಡಿ .