ಬೇಕಾಗುವ ಸಾಮಾಗ್ರಿಗಳು :
ನಿಂಬೆ ಹಣ್ಣು-1, ಅರಿಶಿಣದ ಪುಡಿ ಅರ್ಧ ಚಮಚ, ಒಣ ಮೆಣಸು -4, ಹುಣಸೆ ಹಣ್ಣು ಒಂದು ಚಿಕ್ಕ ಉಂಡೆ,ಬೆಲ್ಲ ಅರ್ಧ ಚಮಚ, ಕೊಬ್ಬರಿ ಎಣ್ಣೆ ಎರಡು ಚಮಚ, ಉಪ್ಪು, ಕಾಯಿ ತುರಿ 2 ಲೋಟ.
ಮಾಡುವ ವಿಧಾನ:
ನಿಂಬೆ ಹಣ್ಣನ್ನು ಚಿಕ್ಕದಾಗಿ ಹೆಚ್ಚಿ ಕೊಳ್ಳಿ ನಂತರ ಅದಕ್ಕೆ ಅರಿಶಿಣದ ಪುಡಿ, ಹುಣಸೆ ಹಣ್ಣು ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಕೊಬ್ಬರಿಎಣ್ಣೆ ಮತ್ತು ಬೆಲ್ಲವನ್ನು ಮಿಶ್ರಣ ಮಾಡಿ ಅರ್ಧ ಗಂಟೆ ಬಿಡಿ ನಂತರ ಕಾಯಿತುರಿಯನ್ನು ಅದಕ್ಕೆ ಸೇರಿಸಿ ನುಣ್ಣಗೆ ರುಬ್ಬಿ ಕೊಳ್ಳಿ ಇದನ್ನು ಅನ್ನಕ್ಕೆ ಸೇರಿಸಿಕೊಂಡು ಸೇವಿಸ ಬಹುದು.
ಶೀಲಾ ಸಿ.ರಾವ್ ಹೊನಗೋಡು.
Wednesday, October 26, 2011