ಪಾಕಶಾಲೆ

ಅಡುಕಲೆಯ ಸ್ವಾದ,ಆಸ್ವಾದ !

ಬರಹ
ಸಂಧ್ಯಾ ಅಜಯ್ ಕುಮಾರ್

ಸಣ್ಣ ಮಟ್ಟದಲ್ಲಿ ಪ್ರಾರಂಭಿಸಿದ ಕೆಲಸ ಕಾರ್ಯಗಳು ದೊಡ್ಡ ಮಟ್ಟದಲ್ಲಿ ಮಾಡಬೇಕೆಂಬ ಕನಸು ಪ್ರತಿಯೊಬ್ಬರಲ್ಲೂ ಸಹಜ.ಹೀಗಿರುವಾಗ ಆ ಕನಸು ನನಸಾದಾಗ ಆಗುವ ಆನಂದಕ್ಕೆ ಪಾರವೇ ಇಲ್ಲ.ಆದರೆ ಅದಕ್ಕೆ ಬೇಕಾದ ಶ್ರಮ ಅಷ್ಟಿಷ್ಟಲ್ಲ.ಒಂದಲ್ಲ ಒಂದು ತೊಂದರೆಗಳನ್ನು ಎದುರಿಸಿ,ಜವಾಬ್ದಾರಿಯನ್ನು ನಿಭಾಯಿಸುವಾಗ,ಅನೇಕರ ನಾನಾ ಬಗೆಯ ವಾಕ್ಯಗಳನ್ನು ಸಹಿಸಿಕೊಂಡು ಮನೆಯನ್ನು ನೀಗಿಸಿ,ಸಮಾಜದಲ್ಲಿ ನಿಂತಾಗ ಮಾತ್ರ ನಾನೆಷ್ಟರ ಮಟ್ಟಕ್ಕೆ ಬೆಳೆದಿದ್ದೇನೆಂದು ತಿಳಿಯುತ್ತದೆ.ಇಲ್ಲವೇ ಇತರರು ನಮ್ಮ ಬಗೆಗೆ ಮಾತನಾಡಿದಾಗ ಅರಿವಾಗುತ್ತದೆ.

ವ್ಯಕ್ತಿಯ ವ್ಯಕ್ತಿತ್ವ ರೂಪುಗೊಂಡ ಬಗೆ….

ಸಮಾಜದಲ್ಲಿ ಯಾವುದಾದರೊಂದು ಉದ್ಯೋಗದಲ್ಲಿ ನಿರತರಾಗಬೇಕೆನ್ನುವ ಹಂಬಲ ಕ್ರಿಯಾಶೀಲ ವ್ಯಕ್ತಿಗಳಲ್ಲಿ ಸದಾ ಕುದಿಯುತ್ತಿರುತ್ತದೆ.ಹೀಗಿರುವಾಗ ತಾನೊಬ್ಬ ಕಾರ್ಪೊರೇಟ್ ಆಫೀಸರ್ ಆಗಿ ರಿಟೈರ್ಡ್ ಆದ ಮೇಲೆ ಮುಂದೇನು ಎಂಬ ಯೋಚನೆ ಬಂದಾಗ ಕಣ್ಣಿಗೆ ಕಂಡದ್ದು ಸಾವಯವ ಕೃಷಿ.ಜೊತೆಗೆ ದನಗಳನ್ನು ಕಟ್ಟಿ ಹಾಲಿನ ಡೈರಿ ಮಾಡಿ ಸಾರ್ವಜನಿಕರಿಗೆ ಏನಾದರೂ ಪ್ರಯೋಜನವಾಗುವಂತಾಹಾ ಕೆಲಸ ಮಾಡುವ ಹಂಬಲ.ಬೆಂಗಳೂರು ವಾಸಿ ಶ್ರೀಯುತ ರವೀಂದ್ರ ಇದೆಲ್ಲದರ ರುವಾರಿ.ಆಫೀಸರ್ ಆಗಿದ್ದಾಗ ತಾನಾಯಿತು ತನ್ನ ಕೆಲಸ ವಾಯಿತು ಎಂತಿದ್ದ ಇವರಿಗೆ ತಾನೊಬ್ಬ ವ್ತಕ್ಯಿಯಾಗಿ ತನ್ನ ವ್ಯಕ್ತಿತ್ವವನ್ನು ಇನ್ನಷ್ಟು ಇಮ್ಮಡಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಅನೇಕರಿಗೆ ಮಾದರಿಯಾಗಿದ್ದಾರೆ.

ಅದಾವರೀತಿ ಎಂದು ಊಹಿಸುವುದಾದರೆ,ಮೂಲತ: ಸಂಕೇತಿ ಕುಟುಂಬದವರಾದ್ದರಿಂದ ಅಡುಗೆ ಮಾಡುವುದಕ್ಕೆ ಬಳಸುವ ನಿತ್ಯ ಪದಾರ್ಥಗಳ ತಯಾರಿಕೆಯಲ್ಲಿ ನಿರತರಾಗಿ ಹಲವರಿಗೆ ಉದ್ಯೋಗ ನೀಡಿ ತಮ್ಮ ಮನೆತನದ ರುಚಿಕರತೆಯನ್ನು ಕರ್ನಾಟಕ,ದೇಶ,ವಿದೇಶಗಳತ್ತವೂ ಕೊಂಡೊಯ್ಯುವ ಮಹತ್‍ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.ಅಮ್ಮ ಮಾಡುತ್ತಿದ್ದ ಅಡುಗೆಯನ್ನು ನೆನೆದು ಪ್ರತಿಯೊಂದನ್ನು ಹೇಗೆ ಮಾಡುವುದು ಅದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಪರಿಶೀಲಿಸಿ ಜೊತೆಗೆ ಆರೋಗ್ಯಕರ ತಿನಿಸುಗಳ ಬಳಕೆ ಹೇಗಾಗಬೇಕೆಂದು ತಿಳಿದು ಇಂದು”ಅಡುಕಲೆ”ಎಂಬ ಹೆಸರಿನಲ್ಲಿ ತಯಾರಾಗುತ್ತಿರುವ ಎಲ್ಲ ಉತ್ಪನ್ನಗಳು ಬಹುಬೇಡಿಕೆಗೆ ಒಳಪಟ್ಟಿದೆ.

ಖುದ್ದಾಗೆ ತಾವೇ ಇದೆಲ್ಲವನ್ನೂ ಮಾಡುವುದರ ಜೊತೆ-ಜೊತೆಗೆ ವ್ಯಾವಹಾರಿಕತೆಯನ್ನೂ ನೋಡಿಕೊಳ್ಳತ್ತಾ,ಜೀವನಕ್ಕೆ ಮಾತ್ರವಲ್ಲದೆ ಪ್ರತಿಯೊಬ್ಬರ ಜೀವಕ್ಕೆ ಅಗತ್ಯವಿರುವ ಪೌಷ್ಠಿಕ ಆರೋಗ್ಯಕರ ಆಹಾರ ತಯಾರಿಕೆಗೆ ಸಾಕಷ್ಟು ಪರಿಶ್ರಮಿಸಿ,ತಾವೇ ಅದರ ಸದ್ಬಳಕೆಯತ್ತ ಗಮನ ಹರಿಸಿ,ನಿತ್ಯ ಕಾಯಕವೆನ್ನುವುದನ್ನು ಮನಸ್ಸಿನಲ್ಲಿರಿಸಿ,ಹಲವರಿಗೆ ಉತ್ತಮ ಗುಣಮಟ್ಟದ ರುಚಿಕರ ಅಡುಗೆಯ ಬಗೆಯನ್ನು ಬಲು ಸುಲಭವಾಗಿಸಿದಲ್ಲಿ ರವೀಂದ್ರರವರು ನಿಷ್ಣಾತರು ಎನಿಸಿದ್ದಾರೆ.

ಒಬ್ಬ ಗಂಡಸಿನ ಯಶಸ್ಸಿನ ಹಿಂದೆ ಹೆಣ್ಣಿನ ಸಹಕಾರವಿದೆ ಎನ್ನುವುದಕ್ಕೆ ಶ್ರೀಮತಿ ನಾಗರತ್ನರವೀಂದ್ರ ಉದಾಹರಣೆ ಹಾಗೂ ಪ್ರತ್ಯಕ್ಷ ಸಾಕ್ಷಿ..ರವೀಂದ್ರರವರ ಈ ಕಾರ್ಯಕ್ಷೇತ್ರಕ್ಕೆ ಸದಾ ಬೆನ್ನೆಲುಬಾಗಿ ನಿಂತ ಪತ್ನಿ ನಾಗರತ್ನ ಕೂಡಾ ಸರಳ ಹಾಗೂ ಚಾಣಾಕ್ಷತೆಯ ಮಹಿಳೆ.ಮನೆ ಕೆಲಸವನ್ನು ಸರ ಸರನೆ ಮುಗಿಸಿ,ಸಮಯಕ್ಕೆ ಸರಿಯಾಗಿ ತಮ್ಮ ಫ್ಯಾಕ್ಟರಿಗೆ ಆಗಮಿಸಿ ಅಲ್ಲಿ ತಯಾರಾಗುವ ಉತ್ಪನ್ನಗಳನ್ನು ನೋಡಿಕೊಳ್ಳುವುದಲ್ಲದೇ,ಲೆಕ್ಕವ್ಯವಹಾರ,ಕೆಲಸಗಾರರನ್ನು ಮನೆಯವರಂತೆ ಪ್ರೀತಿಯಿಂದ ನೋಡಿಕೊಂಡು,ತಾನೂ ಕೂಡಾ ಕೆಲಸದಲ್ಲಿ ಪಾಲ್ಗೊಳ್ಳುವ ಪರಿ ವರ್ಣನಾತೀತ.

ಹಲವು ಕೈಗಳ ಸಾಕಾರ..
ಇನ್ನು ರವೀಂದ್ರರ ಜೊತೆಗೂಡಿ ಮತ್ತೋರ್ವರು ಸಹಕರಿಸುತ್ತಿದ್ದಾರೆ.ಅವರು ರವೀಂದ್ರರ ಸ್ವಂತ ಅಕ್ಕ,ನಾಡಿನ ಹೆಮ್ಮೆಯ ಪ್ರಖ್ಯಾತ ಸುಗಮ ಸಂಗೀತಗಾರ್ತಿ ಶ್ರೀಮತಿ ಮಾಲತಿ ಶರ್ಮಾ.ಫ್ಯಾಕ್ಟರಿಯಲ್ಲಿ ಕೂತರೆ ಒಂದು ಪಾಸಿಟೀವ್ ಎನರ್ಜಿ ಎಲ್ಲೆಡೆ ಬೀರುವ ಇಲ್ಲಿ ಇತ್ತೀಚಿನ ದಿನಗಳಿಗೆ ಅನುಗುಣವಾಗಿ ಕಂಡುಬರುವ ಬೃಹದಾಕಾರದ ಯಂತ್ರಗಳು ಕಾಣಸಿಗುತ್ತದೆ.ಸಣ್ಣಮಟ್ಟದಲ್ಲಿ ಆರಂಭಗೊಂಡ ಈ ನಿತ್ಯ ಉಪಯೋಗಿ ಪದಾರ್ಥಗಳ ಕೆಲಸ ಇಂದು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎಂದರೆ ಅಲ್ಲಿ ನಡೆಯುವ ಕೆಲಸ ಹಾಗೂ ಅದರ ರುಚಿಯನ್ನು ಗಮನಿಸಬಹುದು.ಆಲೋಚಿಸಬಹುದು.

ಅನೇಕರ ನಾಲಿಗೆಗೆ ತಮ್ಮ ಉತ್ಪನ್ನಗಳ ರುಚಿ ಹತ್ತಿಸಿರುವ “ಅಡುಕಲೆ” ಫ್ಯಾಕ್ಟರಿಗೆ ಬಂದು ಕೊಂಡುಕೊಳ್ಳುವ ಗ್ರಾಹಕರನ್ನು ಕೂರಿಸಿ,ಮಾತನಾಡಿಸುವಾಗ ಮತ್ತೊಮ್ಮೆ ನಮ್ಮ ನಾಡಿನ ಸಂಸ್ಕøತಿಯನ್ನು ತೋರ್ಪಡಿಸುತ್ತದೆ…ಅಲ್ಲದೇ ನಿತ್ಯ ಪೂಜೆ,ಪ್ರತಿಯೊಬ್ಬರಿಗೂ ಅರಿಶಿನ ಕುಂಕುಮ ನೀಡುವ ಪದ್ಧತಿ ಭಾರತೀಯ ಸಂಸ್ಕಾರದ ಪ್ರತೀಕ ಮತ್ತಷ್ಟು ಉತ್ಸುಕತೆಗೆ ನಾಂದಿ ಹಾಡುವಂತದ್ದು.ಪ್ರತಿಯೊಂದು ಉತ್ಪನ್ನಗಳನ್ನು ಅಲ್ಲಿನ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರೂ ನಿಭಾಯಿಸುವ ಅದರ ಬಗೆಗೆ ತೋರುವ ಆಸಕ್ತಿ ರವೀಂದ್ರರವರ ಶ್ರಮ,ಇವೆಲ್ಲವೂ ಆ ಉತ್ಪನ್ನವನ್ನು ಗ್ರಾಹಕರಿಗೆ ಶುಚಿ-ರುಚಿಯಾಗಿ ನೀಡುವ ಮನಸ್ಸು,ಸ್ವಚ್ಚತೆ ಎರಡೂ ಸಹಾ ಅತ್ಯಂತ ಮಹತ್ವದ್ದಾಗಿದ್ದು ಹಲವೆಡೆ ಇದರ ಘಮ-ಘಮ ಬೀರಲು ಸಾಧ್ಯವಾಗಿದೆ.

ಅಂದಹಾಗೆ ಇಲ್ಲಿ ಯಾವ ರೀತಿಯ ಅಡುಗೆಗೆ ಬಳಸುವ ಪದಾರ್ಥಗಳು ಸಿಗುತ್ತದೆ ಎಂದು ತಿಳಿಯುವುದಾದರೆ,ನಿತ್ಯ ಬಳಕೆಗೆ ಅವಶ್ಯವಿರುವ ಸಾರಿನ ಪುಡಿ,ಸಾಂಬಾರುಪುಡಿ,ಚಟ್ನಿಪುಡಿ,ಅಲ್ಲದೇ ನಿಪ್ಪಟ್ಟು,ಬೆಣ್ಣೆ ಮುರುಕು,ಪುಳಿಯೋಗರೆಪುಡಿ,ಚೂಡಾ ಅವಲಕ್ಕಿ,ವಾಂಗಿಬಾತ್ ಪುಡಿ,ಉಪ್ಪಿಟ್ಟಿನ ರವೆ,ದೋಸೆ ಹಿಟ್ಟು, ಕಾಫಿ ಪುಡಿಯೂ ಸೇರಿ..ಇನ್ನಿತರೆ ಉತ್ಪನ್ನಗಳು.ಒಟ್ಟಾರೆಯಾಗಿ ರೆಡಿ ಟು ಈಟ್ ಗೆ ಅನುಕೂಲಕರವಾಗುವಂತೆ ಕೈಗೆಟಕುವ ಬೆಲೆಯಲ್ಲಿ ಸಿಗುವ ಶುದ್ಧ ಸಂಕೇತಿ ಪದಾರ್ಥಗಳು,.ತಿಂದರೆ ಅಬ್ಬಾ…ರುಚಿಯನ್ನು ಆಸ್ವಾದಿಸಿದವರಿಗೇ ಗೊತ್ತು.ಬಲ್ಲವನೇ ಬಲ್ಲ ಬೆಲ್ಲದ ಸವಿಯ ಎನ್ನುವಂತೆ.

ಅಡುಕಲೆ ಎಲ್ಲೆಲ್ಲಿ ಲಭ್ಯ..?

ಅಡುಕಲೆಯ ಪದಾರ್ಥಗಳು ಇದೀಗ ನಗರದಲ್ಲಿ ಅನೇಕ ಏರಿಯಾಗಳಲ್ಲಿ ಲಭ್ಯ .ಅಲ್ಲದೇ ಅಲ್ಲಲ್ಲಿ ಅಡುಕಲೆ ಶಾಪ್ ಕೂಡಾ ಆರಂಭವಾಗಿದೆ.ಇನ್ನು ಮಲ್ಲೇಶ್ವರಂನಲ್ಲಿ ಆಕರ್ಷಕ ಮಾದರಿಯಲ್ಲಿ ಅಡುಕಲೆಯ ಸ್ಟೋರ್ ಈಗಾಗಲೇ ಅನೇಕರಿಗೆ ಚಿರಪರಿಚಯವಾಗಿದ್ದು ಅಲ್ಲಿ ವ್ಯಾಪಾರ ವಹಿವಾಟು ಕೂಡಾ ಸರಾವಾಗಿ ನಡೆಯುತ್ತಿದೆ.ವಿಶೇಷವೆಂದರೆ ಯಾರೂ ಮಾಡದ ವಿಭಿನ್ನ ಕೆಲಸ ಏನಾದರೂ ಮಾಡಬೇಕು ಎನ್ನುವ ತುಡಿತದಲ್ಲಿರುವ ಅಡುಕಲೆಯವರು ಪ್ರತಿ ತಿಂಗಳಿಗೊಮ್ಮೆ ಸ್ಟೋರ್‍ಗೆ ಬರುವವರಿಗಾಗಿ “ಸ್ವಾದ-ಆಸ್ವಾದ”ಎನ್ನುವ ಆಹ್ಲಾದಕರ ಕಾರ್ಯಕ್ರಮವನ್ನು ಹಮ್ಮಿಕೊಂಡು ಆ ಕಾರ್ಯಕ್ರಮಕ್ಕೆ ನಾಡಿನ ಹೆಸರಾಂತ ಕಲಾವಿದರನ್ನು ಕರೆಸಿ ಜನರೊಟ್ಟಿಗೆ ಮಾತನಾಡುವ ಹೊಸ ಕಾರ್ಯಕ್ರಮವೊಂದನ್ನು ಆಯೋಜಿಸಿದೆ.ಈಗಾಗಲೇ ಅನೇಕ ಗಣ್ಯರು,ವಿವಿಧ ಕ್ಷೇತ್ರದ ಮಹನೀಯರು ಭೇಟಿ ನೀಡಿರುವ ಈ ‘ಅಡುಕಲೆ’ ಎಲ್ಲರನ್ನು ಸೆಳೆದು ತಿನಿಸು ಪದಾರ್ಥಗಳ ಸಾಲಿಗೆ ಹೊಸ ಆಯಾಮವನ್ನು ಬರೆಯುತ್ತಿದೆ.

ವ್ಯವಹಾರ ಅಂದ ಮೇಲೆ ಅಲ್ಲಿ ಆರ್ಥಿಕ ಸ್ಥಿತಿ-ಗತಿಯಲ್ಲಿ ಏರಿಳಿತ ಇದ್ದದ್ದೇ.ಆದರೆ ಮಾಡುವ ಕೆಲಸದಲ್ಲಿ ನಾವೆಷ್ಟು ಕಲಿಯುವಂತದ್ದು,ತಿಳಿಯುವಂತದ್ದು ಇರುತ್ತದೆ ಎನ್ನುವುದು ಮಾತ್ರ ಮುಖ್ಯ ಎಂದೆನ್ನುವ ರವೀಂದ್ರರ ಮೊಗದಲ್ಲಿ ಸದಾ ನಗು ಹಚ್ಚ ಹಸಿರಿನಂತೆ ತೋರುತ್ತದೆ.ಯಾರ ಮನಸ್ಸನ್ನು ನೋಯಿಸದೇ ತಾನು ತಿಳಿದು,ಮತ್ತೊಬ್ಬರಿಗೆ ತಿಳಿಸಿಕೊಡುವ ಮೃದು ಸ್ವಭಾವದ ವ್ಯಕ್ತಿಯಾಗಿ “ಅಡುಕಲೆ”ಯ ಮೂಲಕ ತಾನೊಬ್ಬ ಫ್ಯಾಕ್ಟರಿ ಓನರ್ ಎನ್ನುವುದನ್ನು ಮರೆತು ಎಲ್ಲರೊಟ್ಟಿಗೂ ಕೆಲಸಗೈಯ್ಯುವ ಇವರ ಸರಳತೆ ಯುವ ಪೀಳಿಗೆಗೆ ಆದರ್ಶ ಎಂದಲ್ಲಿ ಉತ್ಪೇಕ್ಷೆಯಲ್ಲ.ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ.9008036363

ಬರಹ
ಸಂಧ್ಯಾ ಅಜಯ್ ಕುಮಾರ್

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.