ಬೇಕಾಗುವ ಸಾಮಾಗ್ರಿಗಳು: ಅರ್ಧ ಲೋಟ ಅಕ್ಕಿ, ಒಂದು ಲೋಟ ಹೆಸರು ಬೇಳೆ, ಎರಡು ಲೋಟ ಹೆಚ್ಚಿದ ತರಕಾರಿ ಹೋಳು(ಬೀನ್ಸ ಅಥವಾ ತೊಂಡೆ), ಹುಳಸೆ ಹಣ್ಣು ಒಂದು ಚಿಕ್ಕ ಉಂಡೆ, ಹಸಿಮೆಣಸು-2,ಉಪ್ಪು, ತುಪ್ಪ-4 ಚಮಚ, ಜೀರಿಗೆ-1 ಚಮಚ.
ಮಾಡುವ ವಿಧಾನ: ಅಕ್ಕಿ, ಹೆಸರು ಬೇಳೆ, ತರಕಾರಿ ಹೋಳು ಕುಕ್ಕರ್‍ನಲ್ಲಿ ಒಟ್ಟಿಗೆ ಬೇಯಿಸಿ ಕೊಳ್ಳಿ, ನಂತರ ಒಂದು ಬಾಣಲಿಯಲ್ಲಿ
ತುಪ್ಪ ಮತ್ತು ಜೀರಿಗೆ ಹಾಕಿ ಒಗ್ಗರಣ್ಣೆ ಮಾಡಿಕೊಳ್ಳಿ ನಂತರ ಅದಕ್ಕೆ ಬೇಯಿಸಿದ ಮಿಶ್ರಣ ಮತ್ತು ಹುಳಸೆ ಹಣ್ಣು,ಹೆಚ್ಚಿದ ಹಸಿ ಮೆಣಸು,ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಒಂದು ಬಾರಿ ಕುದಿಸಿ, ಈಗ ಕಿಚಡಿ ಸವಿಯಲು ತಯಾರಾಗಿದೆ.
ಶೀಲಾ ಸಿ.ರಾವ್ ಹೊನಗೋಡು.
Wednesday, October 26, 2011