ಜ್ಯೋತಿಷ್ಯ

ವಾಮಾಚಾರ ಪ್ರಯೋಗ ಆಗಿರುವ ಬಗ್ಗೆ ಅದರ ಲಕ್ಷಣಗಳಿಂದಲೇ ಸುಲಭವಾಗಿ ತಿಳಿಯಬಹುದು !

ಪ್ರಾಮಾಣಿಕವಾಗಿ ತನ್ನ ವೃತ್ತಿ ಅಥವಾ ವ್ಯಾಪಾರ ಮಾಡುತ್ತಾ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಹತ್ತಿ ಮೇಲೆ ಬರುತ್ತಾ ಯಶಸನ್ನು ಕಂಡು ಜೀವನದಲ್ಲಿ ಇನ್ನೇನು ಸುಖವನ್ನು ಕಾಣಬೇಕು ಹಣವನ್ನು ಸಂಪಾದಿಸಬೇಕು ಅಥವಾ ಕೀರ್ತಿಯನ್ನು ಪಡೆಯಬೇಕು ಎನ್ನುವಾಗ ಮನುಷ್ಯನಿಗೆ ಬಡಿದೆಬ್ಬಿಸಿ ನೆಲಕ್ಕುರುಳಿಸುವ ಅಪಾಯವೇ ವಾಮಾಚಾರ ! ಹೆಸರೇ ಸೂಚಿಸುವಂತೆ ಇದು ವಾಮ ಮಾರ್ಗ, ನಮ್ಮ ಮುಂದೆ ಬಂದು ನ್ಯಾಯ ಮಾರ್ಗದಲ್ಲಿ ನಮ್ಮನ್ನು ಎದುರಿಸಿ ಸಾಧಿಸಲಾಗದವರು ನಮಗೆ ತಿಳಿಯದಂತೆ ಕೆಟ್ಟ ದುಷ್ಟ ಶಕ್ತಿಗಳನ್ನು ನಮ್ಮ ಮೇಲೆ ಪ್ರಯೋಗಿಸಿ ನಮ್ಮ ಪತನಕ್ಕಾಗಿ ಕಾದು ಕೂರುತ್ತಾರೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಈ ತರಹದ ವಾಮಾಚಾರವನ್ನು ನಾವು ನಂಬದೇ ಇರುವುದು ಹಾಗೂ ಈ ವಿಚಾರದಲ್ಲಿ ನಾವು ತೋರಿಸುವ ಅತೀ ಹುಂಬು ಧೈರ್ಯವೇ ಅವರ ಪಾಲಿಗೆ ವರವಾಗಿ ವಾಮಾಚಾರ ಮಾಡುವವರಿಗೆ ಕಾರ್ಯ ಸುಲಭ ಸಾಧ್ಯವಾಗುತ್ತದೆ. ದೇವರನ್ನು ನಂಬುವ ನಾವು ಕೃತ್ರಿಯ ಮಾಟ ಮಂತ್ರಗಳನ್ನು ನಂಬುವುದಿಲ್ಲ ಎಂದರೆ ನಾವು ಬೆಳಕನ್ನು ಮಾತ್ರ ನಂಬುತ್ತೇನೆ ಕತ್ತಲನ್ನು ನಂಬುವುದಿಲ್ಲ ಕತ್ತಲ ಅಸ್ತಿತ್ವ ಸುಳ್ಳು ಎಂಬಷ್ಟೇ ಹಾಸ್ಯಾಸ್ಪದವಾಗುತ್ತದೆ.

ಈ ವಾಮಾಚಾರದಲ್ಲಿ ಬಹಳ ವಿಧಗಳು ಇದ್ದರೂ ಸಹ ಪ್ರಮುಖವಾಗಿ ವಾಮಾಚಾರದ ಎರಡು ವಿಭಾಗಗಳನ್ನು ಶಾಸ್ತ್ರ ಹೇಳುತ್ತದೆ ಅದುವೇ

1) ಕ್ಷುದ್ರಾಭಿಚಾರ  ಹಾಗೂ 2) ಮಹಾಭಿಚಾರ .

‘ಪ್ರಶ್ನಮಾರ್ಗಂ’ ಎಂಬ ಅದ್ಭುತವಾದ ಪ್ರಶ್ನ ಶಾಸ್ತ್ರ ಗ್ರಂಥದಲ್ಲಿ ನಮಗೆ ಈ ಎರಡೂ ಪ್ರಕಾರಗಳ ಬಗ್ಗೆ ಮಾಹಿತಿ ಸಿಗುತ್ತದೆ.

ಮಹಾಭಿಚಾರ ಎಷ ಸ್ಯಾದ್ವೈರಿಭಿರ್ಮಾರಣಾಧಿಕಂ|

ಯತ್ಕರ್ಮ ಕ್ರಿಯತೇ ಕ್ಷುದ್ರೋ ಯತ್ಕೀಲಾದಿನಿಖನ್ಯತೇ ||

ವ್ಯಕ್ತಿಯ ಮಾರಣಕ್ಕಾಗಿ ಕೆಟ್ಟ ದೇವತೆಯನ್ನು ಆವಾಹಿಸಿ ಕೆಟ್ಟ ಪದ್ದತಿಯಲ್ಲಿ ಶಕ್ತಿಯನ್ನು ಆರಾಧಿಸಿ ಕಳುಹಿಸುವ ಮಾರಣ ಪ್ರಕ್ರಿಯೆಗೆ ಮಹಾಭಿಚಾರವೆಂದು ಹಾಗು ವ್ಯಕ್ತಿಗೆ ಕೇವಲ ನಾನಾ ವಿಧವಾಗಿ ಹಿಂಸೆ ಕೊಡಲಿಕ್ಕಾಗಿ ಅಥವಾ ತೊಂದರೆ ಕೊಟ್ಟು ಅವನ/ಳ ಕೇಡಿಗಾಗಿ ಅವರಿಗೆ ಸಂಬಂಧ ಪಟ್ಟ ಅವರ ಬೆವರು ತಾಗಿದ ವಸ್ತ್ರ, ಕೂದಲು, ಉಗುರು ಇತ್ಯಾದಿಗಳನ್ನು ತಂದು ಮಾಂತ್ರಿಕನಿಂದ ಮಂತ್ರಿಸಿ ವಿಕೃತ ಪ್ರತಿಮೆಗಳಿಗೆ, ಎಲುಬು ಭಸ್ಮ ಇತ್ಯಾದಿಗಳೊಂದಿಗೆ ಸೇರಿಸಿ ತಂದು ವ್ಯಕ್ತಿಯ ವ್ಯಾಪಾರಸ್ಥಳ, ಮನೆ ಒಳಗೆ ಅಥವಾ ಮನೆ ಪರಿಸರದಲ್ಲಿ ಹೂತಿಡುವುದು, ನೀರಿಗೆ ಹಾಕುವುದು, ಮರದಮೇಲೆ ಇಡುವುದು ಇತ್ಯಾದಿ ತಂತ್ರ ಕೃತ್ಯಗಳಿಗೆ ಕ್ಷುದ್ರಾಭಿಚಾರ ಎನ್ನುವರು.

     ಇನ್ನು ವಾಮಾಚಾರ ಪ್ರಯೋಗ ಆಗಿರುವ ಬಗ್ಗೆ ಅದರ ಲಕ್ಷಣಗಳಿಂದಲೇ ಸುಲಭವಾಗಿ ತಿಳಿಯಬಹುದು. ಊಟ ಮಾಡುವಾಗ ಅಡಿಗೆಯಲ್ಲಿ ಕೂದಲು  ಸಿಗುವುದು, ಮನೆಯಲ್ಲಿ ಚಿಕ್ಕಪುಟ್ಟ ವಿಚಾರಗಳಿಗೂ ಸಹ ದೊಡ್ಡ ಜಗಳವಾಗುವುದು, ಮಾಡುತ್ತ ಇರುವ ವ್ಯಾಪಾರದಲ್ಲಿ ಆಗಲಿ ಅಥವಾ ಉದ್ಯೋಗದಲ್ಲಿ ಆಗಲೀ ತೊಂದರೆ ಆಗುವುದು, ಎಷ್ಟೇ ಹಣ ಸಂಪಾದನೆ ಮಾಡಿದರು ಅದನ್ನು ಉಳಿಸಿಲಿಕ್ಕಾಗದೇ ಕಷ್ಟಪಡುವುದು, ನಿದ್ರಾಹೀನತೆ, ಕೆಟ್ಟಕನಸ್ಸುಗಳು ಬೀಳುವುದು, ಅನಾರೋಗ್ಯ ಇದ್ದರು ವೈದ್ಯರಬಳಿ ಹೋದಾಗ ಅವರು ಪರೀಕ್ಷಿಸಿ ಏನು ಆಗಿಲ್ಲ ಎಂದು ಹೇಳುವುದು ಹೀಗೆ ಹತ್ತು ಹಲವು. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಸಾಮಾನ್ಯವಾಗಿ ವಾಮಾಚಾರವನ್ನು ವಶೀಕರಣಕ್ಕೆ ಹೆಚ್ಚಾಗಿ ಬಳಸುತ್ತಾರೆ, ಅದರಲ್ಲಿಯೂ ಕ್ಷುದ್ರಾಭಿಚಾರ ಪ್ರಯೋಗದಿಂದ ತಮಗೆ ಬೇಕಾದ ಸ್ತ್ರೀಯರ ಮೇಲೆ ವಾಮಾಚಾರ ಮಾಡಿ ವಶೀಕರಣ ಮಾಡಿಕೊಂಡು ಅವಳ ದಾರಿ  ತಪ್ಪಿಸಿ ಇವರಿಗೆ ಬೇಕಾದಂತೆ ಬಳಸಿಕೊಂಡು ಬಿಡುತ್ತಾರೆ. ಕ್ಷುದ್ರಾಭಿಚಾರದ ಈ ಪ್ರಯೋಗ ವಿಶೇಷವಾಗಿ ವಿವಾಹಿತ ಮಹಿಳೆಯರಿಗೆ ಬಹುಬೇಗ ತೊಂದರೆ ಕೊಡುತ್ತದೆ. ಇದರಿಂದಾಗಿ ಹೊರಗೆ ಹೇಳಿಕೊಳ್ಳಲಾಗದೆ ಒಳಗೆ ಇರಿಸಿಕೊಳ್ಳಲಾಗದೆ ಹಿಂಸೆ ಅನುಭವಿಸುತ್ತಿರುವವರು ಅನೇಕರಿದ್ದಾರೆ.

     ಇನ್ನು ಪರಿಹಾರ ವಿಚಾರಕ್ಕೆ ಬಂದಾಗ ನಮಗೆ ಸಹಾಯಕ್ಕೆ ಬರುವುದೇ “ಪ್ರಶ್ನಶಾಸ್ತ್ರ” ! ಜಾತಕದಲ್ಲಿ ವಾಮಾಚಾರ ಪ್ರಯೋಗ ಆಗಿರುವ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲಾಗದು, ಅಂಥಃ ಸಮಯದಲ್ಲಿ ಪ್ರಶ್ನಶಾಸ್ತ್ರ ಜ್ಯೋತಿಷಿಗಳ ಬಳಿ ಹೋದಾಗ ಕವಡೆಗಳನ್ನು ಅಭಿಮಂತ್ರಿಸಿ ಭಚಕ್ರವಾಗಿ ವಿಭಾಗಿಸಿ ಆರೂಢಲಗ್ನ ಹಾಗು ತತ್‍ಕಾಲ ಲಗ್ನದ ಆಧಾರದ ಮೇಲೆ ವ್ಯಕ್ತಿಗೆ ವಾಮಾಚಾರ ಆಗಿದೆಯಾ ಇಲ್ಲವಾ ಅಥವಾ ಒಂದು ಪಕ್ಷ ಆಗಿದ್ದಲ್ಲಿ ಯಾವ ರೀತಿಯಲ್ಲಿ ಪರಿಹಾರ ಮಾಡಬೇಕು ಎಂದು ತಿಳಿಯಬಹುದು. ಎನೇ ಆಗಲೀ ವಾಮಾಚಾರ ಆಗಿರುವ ಸಂಶಯ ಬಂದಲ್ಲಿ ಮೊದಲು ನಾವು ನಮ್ಮನ್ನು ಹಾಗು ನಮ್ಮ ಮನೆ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು.  ಗೋಮೂತ್ರವನ್ನು  (ನಾಟಿಹಸುವಿನ ಗಂಜಲ) ತಂದು ದರ್ಭೆಯಲ್ಲಿ ಮನೆಯನ್ನೆಲ್ಲಾ ಪ್ರೋಕ್ಷಣೆ ಮಾಡಬೇಕು. ಟೈಗರ್ ಐ ಎಂಬ ಹೆಸರಿನ ಒಂದು ವಿಶೇಷವಾದ ಕಲ್ಲು ಸಿಗುತ್ತದೆ ಅದನ್ನು ಬೆಳ್ಳಿಯಲ್ಲಿ ಜಪಮಾಲೆಯಂತೆ ಕಟ್ಟಿಸಿಕೊಂಡು ಈಶ್ವರನ ದೇಗುಲದಲ್ಲಿ ಈಶ್ವರ ಲಿಂಗಕ್ಕೆ ಹಾಕಿ ರುದ್ರಾಭಿಷೇಕ ಮಾಡಿಸಿ ನಂತರ ಧಾರಣೆಯಿಂದ ಉತ್ತಮಫಲವಿದೆ. ತಾತ್ಕಲಿಕವಾಗಿ ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸುವುದು, ಪುರಾಣ ಪ್ರಸಿದ್ದ ಕ್ಷೇತ್ರಗಳಲ್ಲಿ ನದೀಸ್ನಾನ ಮಾಡಿ ನಂತರ ದೇವತಾ ದರ್ಶನ ಮಾಡುವುದು ಉತ್ತಮ. ಇನ್ನು ಸರ್ವಾಭಾಧಾಪ್ರಶಮನಂ. . . . ಈ ಸಂಪೂರ್ಣ ಶ್ಲೋಕದಿಂದ ಸಂಪುಟಿ ಚಂಡಿಕಾ ಪಾರಾಯಣ ಮಾಡಿಸಿ ಕುಂಕುಮಾರ್ಚನೆ ಮಾಡಿದ ಕುಂಕುಮವನ್ನು ನಿತ್ಯ ಹಚ್ಚಿಕೊಳ್ಳುವುದು ಹಾಗೂ ಪಾರಾಯಣದ ತರ್ಪಣ ತೀರ್ಥವನ್ನು ಸ್ವೀಕರಿಸುವುದು ಇತ್ಯಾದಿ ಪರಿಹಾರಗಳನ್ನು ಮಾಡಬಹುದು,  ಇನ್ನು ಬಹುಸಮಯದ ತನಕ ರಕ್ಷಣೆ ಕೊಡುವ ಅದ್ಭುತವಾದ ವೇದೋಕ್ತ ಪರಿಹಾರ ಎಂದರೆ ಕೃತ್ರಿಮ ಆಕರ್ಷಣ ಉಚ್ಚಾಟನಾ ಸಹಿತ ರಕ್ಷಾ ಸುದರ್ಶನ ಮಾಡಿಸಿ ಸಮಸ್ಯೆಗೆ ಪರಿಹಾರ ಮಾಡಿಕೊಳ್ಳುವುದು.

VITTAVITTAL BHAT

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :- 9845682380

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.