ನಾಟ್ಯಕಲಾ ತರಂಗ, ನಾಟ್ಯಶಾಸ್ತ್ರ ನೃತ್ಯ ಅಕಾಡೆಮಿಯು ಗುರು ವಿದುಷಿ ಮಂಜುಳಾ ರಾವ್ ಎಸ್ ಕೆ ಅವರ ಶಿಷ್ಯೆ ಅಕ್ಷಯಶ್ರೀ ಅವರ ಭರತನಾಟ್ಯ ರಂಗಪ್ರವೇಶವನ್ನು ಮಾರ್ಚ್ 31 ರಂದು “ಕಲಾಗ್ರಾಮ ಆಡಿಟೋರಿಯಂ, ಮಲ್ಲತ್ತಹಳ್ಳಿ” ಯಲ್ಲಿ ಸಂಜೆ 5.30 ಕ್ಕೆ ಆಯೋಜಿಸಿದೆ.
ಆ ದಿನದ ಮುಖ್ಯ ಅತಿಥಿಗಳಾಗಿ ಗುರು ಶ್ರೀಮತಿ. ಶಾಂತಾ ಪದ್ಮನಾಭನ್ – ನಿವೃತ್ತ ಮುಖ್ಯ ಶಿಕ್ಷಕಿ ಮತ್ತು ನೃತ್ಯ ಶಿಕ್ಷಕಿ, ಜಗಜ್ಯೋತಿ ಬಸವೇಶ್ವರ ಬಾಲಕಿಯರ ಪ್ರೌಢಶಾಲೆ ಹಾಗೂ ವಿದುಷಿ ಶ್ರೀಮತಿ. ವಸುಂಧರಾ ಸಂಪತ್ ಕುಮಾರ್ – ಕಲಾತ್ಮಕ ನಿರ್ದೇಶಕರು, ನಟರಾಜ ನೃತ್ಯ ಶಾಲೆ ಹಾಗೂ ಡಾ. ಚಿನ್ಮಯ ಎಂ. ರಾವ್ – ಸಂಸ್ಥಾಪಕರು ಮತ್ತು ಪ್ರಾಂಶುಪಾಲರು, ಸ್ವರಮೇಧಾ ಇಂಟರ್‌ನ್ಯಾಶನಲ್ ಮ್ಯೂಸಿಕ್ ಅಕಾಡೆಮಿ ಇವರುಗಳ ಉಪಸ್ಥಿತಿ ಇರುತ್ತದೆ.
ಕುಮಾರಿ ಅಕ್ಷಯಶ್ರೀ ಪ್ರಸ್ತುತ ರಾಜರಾಜೇಶ್ವರಿ ನಗರದ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನದಲ್ಲಿ 10ನೇ ತರಗತಿ ಓದುತ್ತಿದ್ದಾಳೆ.
ಬಾಲ್ಯದಿಂದಲೂ, ಅವರು ಸಂಗೀತ ಮತ್ತು ನೃತ್ಯ ಎರಡರಲ್ಲೂ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡು ಸಾಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಭಾಗವಹಿಸಿದ ವಿವಿಧ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಗೆದ್ದಿದ್ದಾರೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಶಿಷ್ಯೆಯನ್ನು ಪ್ರೋತ್ಸಾಹಿಸಬೇಕೆಂದು ನೃತ್ಯಗುರು ವಿದುಷಿ ಮಂಜುಳಾ ರಾವ್ ಎಸ್ ಕೆ ಅವರು ಮನವಿಮಾಡಿಕೊಂಡಿದ್ದಾರೆ.