ಶಿರಸಿಯ ಪ್ರತಿಷ್ಠಿತ ನೂಪುರ ನೃತ್ಯ ಶಾಲೆಯ ವಿದ್ಯಾರ್ಥಿ ನಿಖಿಲ್ ಹೆಗಡೆ ರಂಗಪ್ರವೇಶ ಕಾರ್ಯಕ್ರಮ ನವೆಂಬರ್ 19 ರಂದು ಸಂಜೆ 5.30 ರಿಂದ ಗೋಳಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಶಿರಸಿ ತಾಲೂಕಿನ ಬಪ್ಪನಹಳ್ಳಿಯ ಶ್ರೀ ಸುರೇಶ್ ಹೆಗಡೆ ಮತ್ತು ಶ್ರೀಮತಿ ಪಾರ್ವತಿ ಹೆಗಡೆ ಇವರ ಪುತ್ರನಾದ ನಿಖಿಲ್ ಬಾಲ್ಯದಿಂದಲೇ ನೃತ್ಯ, ಸಂಗೀತ, ಡ್ರಾಯಿಂಗ್, ಯಕ್ಷಗಾನ ಮುಂತಾದ ಲಲಿತ ಕಲೆಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ತನ್ನ 7ನೇ ವಯಸ್ಸಿನಲ್ಲೇ ನೃತ್ಯಗುರು ವಿದುಷಿ ಶ್ರೀಮತಿ ಅನುರಾಧಾ ಹೆಗಡೆಯವರಲ್ಲಿ ನೃತ್ಯ ಕಲಿಕೆ ಪ್ರಾರಂಭಿಸಿ ಈಗ ವಿದ್ವತ್ ಹಂತವನ್ನು ಅಭ್ಯಾಸಿಸುತ್ತಿದ್ದಾರೆ.
ನೃತ್ಯದ ಜೊತೆಯಲ್ಲೇ ಹಿಂದೂಸ್ತಾನಿ ಸಂಗೀತವನ್ನುವಿದ್ವಾನ್ ಶ್ರೀ ಶ್ರೀಧರ್ ಹೆಗಡೆ ಇವರಲ್ಲಿ ಅಭ್ಯಾಸ ಮಾಡುತ್ತಾ ಜೂನಿಯರ್ ಹಂತವನ್ನು ಪೂರೈಸಿದ್ದಾರೆ. ಹಾಗೂ ಕರ್ನಾಟಕ ಸಂಗೀತವನ್ನು ಡಾ. ಚಿನ್ಮಯ ರಾವ್ ಬೆಂಗಳೂರು ಇವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಗುರು ವಿದುಷಿ ಶ್ರೀಮತಿ ಅನುರಾಧಾ ಹೆಗಡೆ ಹಾಗೂ ವಿದುಷಿ ಕುಮಾರಿ ಕೀರ್ತನಾ ಹೆಗಡೆ ನೃತ್ಯ ತರಬೇತಿ ನೀಡಿ ಮಾರ್ಗದರ್ಶಿಸಿ, ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಪುರುಷ ನರ್ತಕರ ರಂಗಪ್ರವೇಶಕ್ಕೆ ಸಜ್ಜುಗೊಳಿಸಿದ್ದಾರೆ.
ಕುಮಾರ್ ನಿಖಿಲ್ ಭರತನಾಟ್ಯ ರಂಗಪ್ರವೇಶಕ್ಕೆ ಸಜ್ಜಾಗಿ ನಿಂತಿದ್ದು ಕಾರ್ಯಕ್ರಮಕ್ಕೆ ವಿಧಾನಸಭಾಧ್ಯಕ್ಷ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕಾರ್ಮಿಕ ಸಚಿವ ಶ್ರೀ ಶಿವರಾಮ ಹೆಬ್ಬಾರ್ ಮುಖ್ಯ ಅತಿಥಿ ಗಳಾಗಿ ಆಗಮಿಸಲಿದ್ದಾರೆ.
ಸಾಗರದ ನಾಟ್ಯತರಂಗದ ವಿದ್ವಾನ್ ಶ್ರೀ .ಜಿ.ಬಿ. ಜನಾರ್ದನ್, ಹಾಗೂ ಚೈತನ್ಯ ಸಂಗೀತ ವಿದ್ಯಾಲಯದ ವಿದ್ವಾನ್ ಶ್ರೀ ಶ್ರೀಧರ್ ಹೆಗಡೆ ಗೌರವ ಉಪಸ್ಥಿತಿ ನೀಡಲಿದ್ದಾರೆ. ಗುರುವಂದನೆಯಲ್ಲಿ ವಿದುಷಿ.ಶ್ರೀಮತಿ ಅನುರಾಧ ಹೆಗಡೆ ಹಾಗೂ ಶ್ರೀ ರಾಮಚಂದ್ರ ಹೆಗಡೆ ಇವರಿಗೆ ಗೌರವ ಸಮರ್ಪಣೆ ಇರುತ್ತದೆ.