ಸಾಗರ : ಪರಿಣಿತಿ ಕಲಾಕೇಂದ್ರ ತನ್ನ ಈ ವರ್ಷದ ವಷೋತ್ಸವ ಕಾರ‍್ಯಕ್ರಮವನ್ನು 2023ರ ಎಪ್ರಿಲ್ ತಿಂಗಳ 16ನೇ ತಾರೀಖಿನಂದು ಸಾಗರದ ಗಾಂಧಿ ಮೈದಾನದಲ್ಲಿ ಏರ್ಪಡಿಸಿತ್ತು. ಭರತನಾಟ್ಯ ಮತ್ತು ವಿವಿದ ರಾಜ್ಯದ ಜಾನಪದ ನೃತ್ಯಗಳು ಪ್ರೇಕ್ಷಕರ ಮನಸೂರೆಗೊಂಡಿತು. ಕಾರ‍್ಯಕ್ರಮವನ್ನು ಭಾರತಿ ಬಾಯಿ ಪುರೋಹಿತ್ ಉದ್ಘಾಟಿಸಿದರು.
ಪರಿಣಿತಿ ಕಲಾಕೇಂದ್ರದ ಅಧ್ಯಕ್ಷರಾದ ಶ್ರೀ ಸೋಮಶೇಖರ ನಾಯ್ಕ್ ಮಾತನಾಡಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಸಂಸ್ಥೆಯ ಸಂಸ್ಥಾಪಕರಾದ ವಿದ್ವಾನ್ ಗೋಪಾಲ್ ಅವರು ಮಾತನಾಡಿ ಪರಿಣಿತಿ ಕಲಾಕೇಂದ್ರದ ಕರ‍್ಯವೈಖರಿಯನ್ನು ಶ್ಲಾಘಿಸದರು. ವೇದಿಕೆಯಲ್ಲಿ ಶ್ರೀಮತಿ ಶ್ವೇತಾಗೋಪಾಲ ಉಪಸ್ಥಿತರಿದ್ದರು.
ಕಾರ‍್ಯಕ್ರಮದಲ್ಲಿ ಭರತನಾಟ್ಯವನ್ನು ಬೆಂಗಳೂರಿನ ವಿದ್ವಾನ್ ಮಧುಚಂದ್ರ ಮತ್ತು ತಂಡ ಮತ್ತು ಪರಿಣಿತಿ ಕಲಾಕೇಂದ್ರದ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಗುಜರಾತಿನ ಜಾನಪದ ಹೋಲಿ ನೃತ್ಯ ರೋಮಾಂಚದಿಂದ ಮೂಡಿಬಂತು. ಕಾರ‍್ಯಕ್ರಮದ ನಿರೂಪಣೆಯನ್ನು ಎಸ್.ಆರ್.ರಕ್ಷಿತ್ ನಡೆಸಿಕೊಟ್ಟರು.