ಕನ್ನಡಭಕ್ತಿಗೀತೆಗಳು

ಪೂರ್ಣದಾರತಿ : ಜಯ ದೇವ ಜಯ ದೇವ ಜಯ ಶ್ರೀಗುರುವರಗೆ ಜಯ ಸದ್ಗುರುವರಗೆ ಜಯ ಜಯ ನಿತ್ಯನಿರಂಜನ ನಿರುತಾನಂದನಿಗೆ ಜಯದೇವ

ಆತ್ಮೀಯರೇ,
ಅನೇಕ ಶ್ರೀಧರ ಭಕ್ತರು ವರದಪುರ ಮತ್ತು ಬೆಂಗಳೂರಿನ ಶ್ರೀಧರಾಶ್ರಮಗಳಲ್ಲಿ ಪೂಜಾಸಮಯದಲ್ಲಿ ಹಾಡುವ ಈ ಕೆಳಗಿನ ಭಜನೆಯನ್ನು ಒಮ್ಮೆ ಈ ಮಾಧ್ಯಮದಲ್ಲಿಯೂ ಬರೆಯಲು ಕೇಳಿಕೊಂಡಿದ್ದಾರೆ. ಇದು ಅಂಥವರ ಅನುಕೂಲಕ್ಕಾಗಿ, ಅಭ್ಯಾಸ ಮಾಡಿ ನಿತ್ಯವೂ ರಾಗವಾಗಿ ಹಾಡುತ್ತಾ ಗುರುಕ್ರಪೆಗೆ ಪಾತ್ರರಾಗುತ್ತೀರೆಂದು,

ಪೂರ್ಣದಾರತಿ

ಜಯ ದೇವ ಜಯ ದೇವ ಜಯ ಶ್ರೀಗುರುವರಗೆ
ಜಯ ಸದ್ಗುರುವರಗೆ
ಜಯ ಜಯ ನಿತ್ಯನಿರಂಜನ ನಿರುತಾನಂದನಿಗೆ ಜಯದೇವ || || ಪ||

ಮೂರು ಗುಣಗಳ ಕಾರ್ಯದಿ ಸೇರದಿರುವವಗೆ
ತೋರುವ ಈ ವಿಶ್ವಕೆ ಆಧಾರವೆನಿಸಿಹಗೆ
ಧೀರನಾಗಿಹ ಚಿತ್ಸುಖ ಸಾರರೂಪನಿಗೆ
ನಾರೀನರ ಭೇದದಮತಿ ತೋರದ ಪ್ರಭುವರಗೆ|| ||1||

ಗಣನೆಗೆ ಸಿಗದಿಹನಗಣಿತ ಘನಚಿದ್ರೂಪನಿಗೆ
ದಿನಮಣಿಶಶಿವಹ್ನಿಗಳನು ಅನುದಿನ ಬೆಳಗಿಪಗೆ
ಜನಿಮ್ರತಿ ಇರದಿಹನದ್ವಯ ಚಿನುಮಯನೆನಿಸಿಹಗೆ
ಮುನಿಜನ ಹ್ರದಯ ವಿಹಾರಿಗೆ ಘನಗುರು ಮೂರುತಿಗೆ || ||2||

ರಜತಮಸಾತ್ವಿಕವಿರಹಿತ ಅಜನೆನಿಸಿರುವವಗೆ
ನಿಜ ಜೀವೇಶರಿಗಾಶ್ರಯ ತ್ರಿಜಗವ್ಯಾಪಕಗೆ
ಅಜ ಹರಿಹರ ಜಗವಂದಿತ ಭಜಕರ ಸಲಹುವಗೆ
ಸುಜನರ ನಿಜಮ್ರದು ಹ್ರದಯದಿ ವಿಜಯದಿ ನಲಿಯುವಗೆ || ||3||

ಸಾಧನೆಯಿಂ ಪರಿಪಕ್ವದ ಸಾಧಕೆ ಜನಮನಕೆ
ಮೋದದಿ ತನ್ನಯ ತತ್ವದ ಬೋಧವನರುಹಲಿಕೆ
ಆದಿಮೂರುತಿ ಶ್ರೀ ಪ್ರಭು ತಾ ದಯಗೊಳ್ಳುತಲಿ
ಮೇದಿನಿಯೊಳಗವತರಿಸಿಹ ಶ್ರೀಧರ ನಾಮದಲಿ || ||4||

ಶ್ರೀಧರನಾಮದಿ ಬಂದಿಹ ಶ್ರೀಗುರುಚರಣದಲಿ
ಆದರದಿಂ ಅರ್ಪಿಸುವೆನು
ಸಾಧನಕ್ರತಿಸುಮವಾ
ಜಯದೇವ ಜಯದೇವ|| ||5||

ಸಂಪಾದನೆ: ಜಿ.ಟಿ. ಶ್ರೀಧರ ಶರ್ಮಾ.”ಅಥರ್ವ”,ವಿಜಯನಗರ, ಸಾಗರ.
ಚಿತ್ರ ಪರಿಕಲ್ಪನೆ-ವಿನ್ಯಾಸ-ಪಲ್ಗುಣ ಕೆ.ಜಿ

4-8-2013

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.