ಕವಿಸಮಯ

ಜೀವನದ ನೌಕೆಯಲಿ ನೂರಾರು ನೆನಪು

– ಶಾರದಾ ಕಾರಂತ್

 

ಜೀವನದ ನೌಕೆಯಲಿ
ನೂರಾರು ನೆನಪು ||

ಹಚ್ಚ ಹಸುರಾದ ನೆನಪು
ಬಿಚ್ಚಿ ಹೇಳಲರಿಯದ ನೆನಪು
ಅಚ್ಚು ಮೆಚ್ಚಿನ ನೆನಪು
ಮರೆಯಾಗದಿಹ ನೆನಪು
ಮಾಸದಿಹ ನೆನಪು||

ಜನ್ಮದಿಂ ಕಾಡುತಿದೆ ಬಂಧಗಳ ನೆನಪು
ಸಂಬಂಧಗಳ ನೆನಪು ಸವಿನೆನಪು
ಅಲ್ಲಿ ಇಲ್ಲಿ ಎಡವಿ ತೊಡವಿದ ನೆನಪು
ಮರೆಯಾಗದಿಹ ಮಾಸದಿಹ ನೆನಪು||

ಪ್ರಕೃತಿಯ ಮಡಿಲಲಿ ನಿನ್ನ ಕಂಡ ನೆನಪು
ಆಶಾ ಕಿರಣಗಳ ಹೊತ್ತ ನಿನ್ನ ಕಣ್ಗಳ ನೆನಪು
ಮಿಲನದ ಸವಿನೆನಪು ವಿರಹದ ಕಹಿ ನೆನಪು

ಮರೆಯಾಗದಿಹ ನೆನಪು ಮಾಸದಿಹ ನೆನಪು||

ಸಾಗುತ್ತಾ ಸಾಗುತ್ತಾ ಜೀವನದ ಪಾಠ ಕಲಿತ ನೆನಪು
ಮರೆತರೆ ಮರೆಯಾಗುವುದೇ
ಈ ನೆನಪು ಆ ನೆನಪು
ಮತ್ತೆ ಎಡವದೇ
ಇರಲು ಬೇಕು
ನೆನಪುಗಳ ನೆನಪು
ಮರೆಯಾಗದಿರಲಿ ನೆನಪು
ಮಾಸದಿರಲಿ ನೆನಪು

*******

Related Articles

Check Also
Close
Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.