– ಶಾರದಾ ಕಾರಂತ್
ಹುಟ್ಟಿಸಿದೆ ನೀ ಅಂದು ಈ ಜಗಕೆ ನನ್ನ
ದೇವನಲಿ ಬೇಡುತ ಕಾಪಾಡು ಕಂದನನ್ನ||
ರೆಕ್ಕೆ ಪುಕ್ಕ ವ ಕೊಟ್ಟೆ ಹಾರಾಡಲು ಬಿಟ್ಟೆ
ಅಕ್ಕರೆಯ ಮುತ್ತಿಟ್ಟೆ ಆಸರೆಯ ಕೊಟ್ಟೆ
ನೋವು ತನ್ನೊಳಗಿಟ್ಟೆ
ಸಂತಸವ ಕೊಟ್ಟೆ
ವಾತ್ಸಲ್ಯವ ಕೊಟ್ಟೆ ಎಣಿಕೆ ಇಲ್ಲದಷ್ಟೆ||
ಹಸಿವು ಬಾಯಾರಿಕೆ ಸಹಿಸಿ ತನ್ನ ಸುಖವ ಪರಿತ್ಯಜಿಸಿ
ಬಡತನವ ಹುದುಗಿಸಿ ನಗುನಗುತ ನಲಿಸಿ
ಕೈ ಹಿಡಿದು ನಡೆಸಿ ಅತ್ತರೆ ಸಂತೈಸಿ
ಅಗಾಧ ಪ್ರೀತಿಯ ಹರಿಸಿ ಆಸರೆ ಇತ್ತು ಹರಸಿ||
ನನ್ನ ಕಂದನೇ ನೀ ಬೆಳಕಾಗಿ ನಿಲ್ಲು
ಜಗದ ಅಂಧಕಾರವ ಓಡಿಸುತ ಎಲ್ಲೂ
ಜ್ಯೋತಿರ್ಮಯಿಯಾಗು ಮೂರು ಲೋಕದಲ್ಲೂ
ನೀಚ ದುಷ್ಟರ ಕಪಟ ಮೆಟ್ಟಿ ನಿಲ್ಲು||
ಉಣಿಸಿ ಪೋಷಿಸಿ ಹರಸಿ ಮುತ್ತನಿಡುವಳು
ಎಂದೆಂದಿಗೂ ಕಂದನೆ ಕಣ್ಮಣಿ ಎನುವಳು
ಮಾತೃ ಭಾಗ್ಯದಿಂದ ತಾನೇ
ಧನ್ಯ ಎನುವಳು
ಜಗದ ಧ್ರುವತಾರೆ ಎಂದೆನುತ ಬೀಗುವಳು||
ಸ್ವಾರ್ಥ ಕಪಟ ದ್ವೇಷ ರಹಿತ ನಿನ್ನ ಸಹೃದಯ ಪ್ರೇಮ
ಶಾಂತಿ ಸಹನೆ ಸ್ಪೂರ್ತಿಯ ಚಿಲುಮೆ ಅದಮ್ಯ
ಬಯಸುವೆವು ಎಂದೂ
ನಿನ್ನೊಡಲಲಿ ಪುನರ್ಜನ್ಮ
ನಿನ್ನ ಅಂತರಾಳದಲ್ಲಿ ಇದೋ ನನಗಿರಲಿ ಸದಾ ಸ್ಥಾನ||
********