ಕವಿಸಮಯ

ಇದುವೇ ಮೌನ

– ಶಾರದಾ ಕಾರಂತ್

ಮಾತು ಹೊರಡದಾಗಿದೆ
ಮನವು ಭಾರವಾಗಿದೆ
ಇದುವೇ ಮೌನ||

ಬಡತನದ ಬೇಗೆಯಲಿ ಬೆಂದುಳಿದ ಅನ್ನವನು
ಅರೆಹೊಟ್ಟೆಯಲಿ ತುಂಬಿ ತೃಪ್ತನಾಗಿರುವುದು
ಇದುವೇ ಮೌನ?

Related Articles

ಅಸಹಾಯಕನಾಗಿ ಮುಂದೊಂದು ದಿನ

ಗೆಲುವು ಎಂಬ ಆಶಯದಿಂದ ನಿಲ್ಲದೇ ಸಾಗುವುದು
ಇದುವೇ ಮೌನ?

ಸದ್ವಿಚಾರವ ಹೊಂದಿ ಮನದ ಮಂಥನದಲ್ಲಿಟ್ಟು
ಅವಿವೇಕಿಗಳ ಒಡನೆ ವ್ಯರ್ಥ ಹಂಚಲು
ಬಯಸದಿರುವುದು
ಇದುವೇ ಮೌನ ?

ಕಾಣದಿರುವುದೆಲ್ಲವ ಕಂಡು ಅರಿಯುವಂತೆ ಅರಿತು
ಮನವ ಶೋಧಿಸಿ
ನಿರ್ಲಿಪ್ತನಂತೆ ಇರುವುದು
ಇದುವೇ ಮೌನ ?

ದಾರಿಯುದ್ದಕ್ಕೂ ಬಾಳಲಿ ಸೋಲು ಗೆಲುವುಗಳನ್ನುಂಡು
ಇದುವೇ ಜೀವನವೆಂದರಿತು
ಶಾಂತನಾಗಿರುವುದು
ಇದುವೇ ಮೌನ ?

ಏನಿದು ‘ಮೌ’ಖಿಕವಾಗಿ

‘ನ’ಗ್ನವಾಗಿರುವುದು ಮೌನ?

 

********

Related Articles

Back to top button

Adblock Detected

Please consider supporting us by disabling your ad blocker