ಕವಿಸಮಯ

ತಪ್ಪು-ಒಪ್ಪು

ತಪ್ಪುಗಳ ಅರಿವು
ಮೂಡದೇ ಮನದಲಿ
ಸರಿಯೆನಿಸದು
ತಪ್ಪುಗಳ ಒಪ್ಪು||

ಒಪ್ಪಲು ಮನ
ಕೇಳದೇ ಇರಲು
ತಪ್ಪೆಂದಿಗೂ ತಪ್ಪಲ್ಲ
ಸರಿಯಾದುದೆ ಎಲ್ಲ||

ತಪ್ಪು ಮಾಡಲು
ಒಪ್ಪುವಂತಹ ಮನ
ತಪ್ಪು ಒಪ್ಪದಿರಲು
ನಿಶ್ಚಲ ಮನ||

ಅವರಿವರ ತಪ್ಪು
ಕೇಳಲು ಹುರುಪು
ಅರಿವಾಗದು ಸ್ವತಹ
ರೂಪಿಸಿದ ತಪ್ಪು||

ಬರದು ಮುಪ್ಪು
ಮಾಡದೆ ತಪ್ಪು
ಸರಿ ಮಾಡಲು
ಒಂದೇ ದಾರಿ ನೀ ಒಪ್ಪು||

– ಶಾರದಾ ಕಾರಂತ್

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.