ಸ್ಯಾಂಡಲ್ ವುಡ್

ಕನ್ನಡಕೊಬ್ಬ ಪ್ರತಿಭಾವಂತ ಭರವಸೆಯ ನಾಯಕಿ, ಲೇಖಕಿ ಹಾಗೂ ನಿರ್ದೇಶಕಿ

ಚನ್ನಪಟ್ಟಣದ ಜಗದೀಶ್ ರವರ ಪುತ್ರಿಯಾದ ರಶ್ಮಿರವರು ಬೆಂಗಳೂರಿನಲ್ಲಿ ಜನಿಸಿದರು. ಚಿಕ್ಕಂದಿನಲ್ಲೇ ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದ ಇವರು, ಶಾಲಾ ಕಾಲೇಜುಗಳಲ್ಲಿ ನ್ಯತ್ಯ ಹಾಗೂ ಕಲಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ನಂತರ ಪತ್ರಿಕೋದ್ಯಮದಲ್ಲಿ ತಮ್ಮ ಪದವಿ ಶಿಕ್ಷಣವನ್ನು ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಕಾನೂನು ಪದವಿಯನ್ನು ಪಡೆದು, ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿದರು.

ಪುನೀತ್ ರಾಜಕುಮಾರ್ ರವರ ಅಪ್ಪಟ ಅಭಿಮಾನಿಯಾದ ಇವರು ನೃತ್ಯದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಕ್ಷರದಿಂದ ನಾವು ಬೆಳೆದು ಬಂದಿದ್ದೇವೆ. ವಿದ್ಯಾವಂತರಾದ ನಾವು ಸಮಾಜಕ್ಕೆ ನೀಡುವ ಕೊಡುಗೆ ಹಾಗೂ ಅಕ್ಷರದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇವರು ೨೦೧೮ ರಲ್ಲಿ ಅಕ್ಷರ ಬೆಳಕು ಎಂಬ ಚಿತ್ರಕ್ಕೆ ನಿರ್ಮಾಪಕರಾಗಿ ಬಂಡವಾಳ ಹೂಡುವ ಮೂಲಕ ನಿರ್ಮಾಪಕರು ಕೂಡ ಎನಿಸಿಕೊಂಡರು.

ಈಗ ದಾಪುಗಾಲು ಎಂಬ ಪುಸ್ತಕವನ್ನು ಬರೆದು ಲೇಖಕಿಯೂ ಆಗಿದ್ದಾರೆ. ಇದೇ ಪುಸ್ತಕವನ್ನು ಚಲನಚಿತ್ರ ಮಾಡುವ ಮುಖಾಂತರ ನಿರ್ದೇಶನವನ್ನು ಮಾಡಲು ಹೊರಟಿದ್ದಾರೆ. ಹಾಗೇಯೇ ನಟನೆಯಲ್ಲೂ ಆಸಕ್ತಿ ಹೊಂದಿರುವ ಇವರಿಗೆ ಕನ್ನಡ, ತಮಿಳು, ತೆಲುಗು ಚಿತ್ರರಂಗದಿಂದ ಅವಕಾಶಗಳು ಬರುತ್ತಿದೆ. ನಮ್ಮ ಕನ್ನಡದ ಹುಡುಗಿಯ ಸಾಧನೆಗಳು ಇನ್ನಷ್ಟು ಹೆಚ್ಚಾಗಲಿ ಎಂದು ಹಾರೈಸೋಣ.

Back to top button

Adblock Detected

Please consider supporting us by disabling your ad blocker