ಕರ್ನಾಟಕ ಚಲನಚಿತ್ರ ನಿರ್ಮಾಣ ನಿರ್ವಾಹಕ ಸಂಘದ 2022 ಹಾಗೂ 2023ರ ಸಾಲಿನ ಚುನಾವಣೆ ಇದೇ ತಿಂಗಳ 12ರಂದು ನಡೆದಿತ್ತು. ಇದೀಗ ವಿಜೇತರಾದ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಅಧ್ಯಕ್ಷರು-ಸೋಮಶೇಖರ್.ಎಸ್
ಉಪಾಧ್ಯಕ್ಷ-ಚಲುವರಾಜು.ಎಸ್, ರಮೇಶ್ ಬಿ.ಜಿ
ಪ್ರಧಾನ ಕಾರ್ಯದರ್ಶಿ-ನರಸಿಂಹಮೂರ್ತಿ ಬಿ.ಜಿ
ಸಹಕಾರ್ಯದರ್ಶಿ-ನರಸಿಂಹ ಹೆಚ್, ನರೇಶ್ ಕುಮಾರ್ ಆರ್, ಶಶಿಧರ್ ಜಿ
ಖಂಜಾಚಿ-ಸುನಿಲ್ ಕುಮಾರ್ ಬಿ.ಕೆ
ಗೆಲುವು ಪಡೆದ ಎಲ್ಲಾ ಪದಾಧಿಕಾರಿಗಳಿಗೆ ಸಂಘದ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಪ್ರಕಾಶ್ ಮಧುಗಿರಿ, ಸುಧೀಂದ್ರ, ರವಿಶಂಕರ್ ಸಹಕಾರ ಜೊತೆಗಿರುತ್ತದೆ. ನೂತನ ಪದಾಧಿಕಾರಿಗಳು ವಾಣಿಜ್ಯ ಚಲನಚಿತ್ರ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ ಅವರನ್ನು ಭೇಟಿ ಮಾಡಿ ಸಹಕಾರ ಕೋರಿದ್ದಾರೆ.