ಡಾ.ಚಿನ್ಮಯ ಎಂ.ರಾವ್
ಸಮಗ್ರ ಕವನ ಸಂಕಲನ
ಕವಿತೆ-4
ಅವಳು ಹೂವು ದೇವಿ
– ಡಾ.ಚಿನ್ಮಯ ಎಂ.ರಾವ್
(೭೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ಚಿನ್ಮಯ ಎಂ.ರಾವ್ ಅವರ ವಿಶ್ವಚೇತನ ಕವನ ಸಂಕಲನದಿಂದ ಆಯ್ದ ಕವಿತೆ)
ಅವಳು ಹೂವು ದೇವಿ ಒಂದೇ ಎನಗೆ
ಮೂರರ ನಿತ್ಯ ಸೌಂದರ್ಯೋಪಾಸನೆಯಲ್ಲೂ
ನನಗೆ ಹುಟ್ಟುವುದು ಒಂದೇ ನಗೆ
ಹೂವಂತವಳು ನೀ ದೇವಿ ಕಾವ್ಯವೇ ನಿನಗೆ
ನಿನ್ನ ಔಪಾಸಕನಿಗೆ ಒಮ್ಮೆ ಚೆಲ್ಲೆ ಪ್ರೇಮದ ನಗೆ
ನೀನಾಗೇ ನಗೆ ನೀ ನಗೆ ಪ್ರೇಮದಿ ನಗೆ
ನೀ ನಗದಿದ್ದರೂ ನಿನಗಾಗದಿದ್ದರೂ ನಾನಾಗೇ
ನಕ್ಕರೆ ಹೂ ನಗುವಂತವಳು ದೇವಿ ಎನ್ನ ಪಾಲಿಗೆ
ಎನ್ನ ನಾಲಿಗೆಯಲಿ ನಲಿದಾಡೆ ಕೊಡೆನಗೆ ಸಲಿಗೆ
ಅಸಲಿಗೆ ನಿನ್ನವನಾಲಂಗಿಸೆ ಆ ನಿನ್ನ ಸಾಲಿಗೆ
ಸಾರಿ ಸಾರಿಗೂ ಹೇಳದಿರುವಂತಾಗಲಿ ನಾ ನಿನಗೆ
ನೀ ನಗೆಯವಳು ದೇವಿ ಹೂ ಹೂವೇಕೆ ನಿನಗೆ?
ಹೂವೇ ನಗೆ ನಗೆಯೇ ಹೂವು ನೀ ಹೂವೆನಗೆ
ನಗೆಯೇ ದೇವಿ ದೇವಿಯೇ ಹೂವು ಅವಳೆನಗೆ
ನಗದಾಗಿ ನಗೆ ಸೂಸಿದರೆ
ಧ್ಯಾನಸ್ಥನಾಗಿ ನೋಡುವೆ ಅವಳ ನಗೆ
ಹೂನಗೆಯ ದೇವಿಯವಳೇ ನಗಲಾರೆಯಾ? ನಿನ್ನವಗೆ
ನಗದು ನೀ ನಕ್ಕರೆ ನಗೆ ಆ ನಗೆ ದೇವಿಯದೇ..
ನೀ ನಗಲಾರೆ ನನಗೆ ನಾ ನಗಲಾರೆ ಹೂ ನಗದೆ
ನಿನ್ನನಗಲಲಾರೆ ಹಾಗೆಲ್ಲಾ ಹೇಗೆ? ನೋಡಿಕೊ ಹಾಗಾಗದೆ
ಹೋದರೆ ಹಾಗಾಗಿ ಹೋದರೆ ಎನಗದೇ ನಿನ್ನದೇ
ಆರಾಧನೆಗೆ ನೀನೆನಗೆ ಕೊಡುವ ಬೆಲೆಯಿದೆ?
ಚಿನ್ಮಯ ಎಂ ರಾವ್
೨೦೦೫
*******************