ಕವಿಸಮಯ

ತಾಮ್ರಪರ್ಣೆ

naveen-r-hegde-22ನವೀನ್ ಆರ್.ಹೆಗಡೆ

ಯುವ ಭರತನಾಟ್ಯ ಕಲಾವಿದ, ಬೆಂಗಳೂರು

[email protected]
ಗಾಳಿಯಲಿ ಹಾರುತಲಿ ಬಂದಿಹುದು ಕಾಗದವು
ನೀರಿನಲಿ ತೇಲುತಲಿ ಬಂದಿಹುದು ಕಾಗದವು
ರಸ್ತೆಯಲಿ ಬಳುಕುತ್ತ ಓಡಿಹುದು ಕಾಗದವು
ಏನ ಹೇಳಲಿ ನಾನು ಹೊಗೆಯ ಬಿಡುತಿಹುದು !

ಮತಿಗೆಟ್ಟು ಮಂಕಾಗಿ ಭಾವವಿಲ್ಲದೆ ಹೋಗಿ !
ಚಕ್ರದಾಸರೆಯಲ್ಲಿ ಹಿಂದೆ ಮುಂದಕೆ ಸಾಗಿ
ಚಕ್ರದರಸನಿಗೆ ದಿನ ನಿತ್ಯ ಆಳಾಗಿ !
ಆಳಾಗಿ ಹಾಳಾಗಿ ಬೆಂಕಿಯಲಿ ಬೇಯುತಲಿ !

ಗಾಳಿಯಲಿ ಮೋಡಾಗಿ ನೀರಿನಲಿ ಮೀನಾಗಿ
ರಸ್ತೆಯಲಿ ಠೀವಿಯಲಿ ಪಥದಲ್ಲಿ ಶಿಸ್ತಾಗಿ
ತನ್ನ ಪಾಡಿಗೆ ತಾನು ಸಮಯ ಬಂದರೆ ಪರರ
ಕತ್ತನ್ನು ಕೊಯ್ಯುತಲಿ ರಕ್ತವನು ಹೀರುತಲಿ !

ಸಾಕಾರ ರೂಪದಲಿ ಕಾಲರುದ್ರರ ಮೀರಿ
ಅತಿ ಸೌಮ್ಯ ರೂಪದಲಿ ಮುದ್ದು ಮುದ್ದಾಗಿ
ರಂಗು ರಂಗಲಿ ನಿಂತು ಕಣ್ಣು ಮನಗಳ ತುಂಬಿ
ವಾಯುವೇ ತಾನಾಗಿ ಹಿಗ್ಗಿ ಮೀರುತಲಿ
ಬಂದಳು ನೋಡು ತಾಮ್ರಪರ್ಣೆ….ತಾಮ್ರಪರ್ಣೆ….

********

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.