ಕವಿಸಮಯ

ವೃಕ್ಷದ ಮೇಲೆ ಏರಿದ ವ್ಯಕ್ತಿ

ಭಾರತ ರತ್ನ ಮಾನ್ಯಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪೇಡ್ ಕೆ ಊಪರ್ ಚಡಾ ಆದ್ಮಿ ಎಂಬ ಕವನದ ಭಾವಾನುವಾದ

ಭಾವಾನುವಾದ – ನೃತ್ಯಗುರು ಸಹನಾ ಚೇತನ್

ವೃಕ್ಷದ ಮೇಲೆ ಏರಿದ ವ್ಯಕ್ತಿ
ಹಿರಿಯನಂತೆಯೇ ಕಾಣುವನು
ಕೆಳಗೆ ನಿಂತ ವ್ಯಕ್ತಿಯೂ ಹಾಗೆ
ಕಿರಿಯನಂತೆಯೇ ತೋರುವನು |

ಹಿರಿಯ ಕಿರಿಯ ವ್ಯಕ್ತಿಯೇ ಇಲ್ಲ,
ದೊಡ್ಡವ ಸಣ್ಣವರಂತೂ ಇಲ್ಲ,
ವ್ಯಕ್ತಿಯು ಕೇವಲ ವ್ಯಕ್ತಿಯೇ ಅಹುದು,
ನೇರಾ ತಲಸಮ ಸತ್ಯವ ಮನುಜ-
ಎಂತೋ ಏಕೋ ತಿಳಿದಿಲ್ಲ |
ತಿಳಿದಿದೆಯಾದರೆ ಸಕಲವ ತನಗೆ
ಮನಸಿನಾಳದಿ ಏಕೆ ಒಪ್ಪುತ್ತಿಲ್ಲ ?

ಮಾನವನೆಲ್ಲಿ ನಿಂತಿಹನೆಂಬುದು
ಯಾವುದೇ ವ್ಯತ್ಯಯಕೆ ಕಾರಣವಲ್ಲ
ಪಥವಾದರೇನು? ರಥವಾದರೇನು ?
ತೀರದಲ್ಲೋ ? ಪ್ರಾಚೀರದಲ್ಲೋ ?
ಎಲ್ಲೇ ನಿಲ್ಲಲಿ ಅಥವಾ ನಿಲ್ಲುವಂತಾಗಿರಲಿ
ಆ ಜಾಗವೆಂತಹುದು ಎಂಬುದೊದೊಂದೇ ಮುಖ್ಯವಹುದು.

ಹಿಮಾಲಯದ ಶಿರವನೇರಿದ,
ಎವರೆಸ್ಟ್ ಮೇಲೆ ವಿಜಯದ ಪತಾಕೆ ಸಾರಿದ,
ಆದರೆನಿತು ಈ ಈರ್ಷೆಯ ಒಳಸುಳಿಯಲ್ಲಿ
ಗೆಳೆಯನಿಗೆ ವಿಶ್ವಾಸಘಾತವೆಸಗಿದ ಘೋರ ಅಪರಾಧ
ಕ್ಷಮ್ಯವಾಗುವುದೇ ಎವರೆಸ್ಟ್‍ನ ತುತ್ತತುದಿ ತಲುಪಿದೊಡನೆ?
ಇಲ್ಲ. ಅಪರಾಧವೆಂದಿದ್ದರೂ ಅಪರಾಧವೇ !
ಹಿಮಾಲಯದ ಸಂಪೂರ್ಣ ಧÀವಲತೆ
ಆತನ ಸರ್ವ ಅಪರಾಧಗಳನ್ನೂ ಮನ್ನಿಸಲಾರದು,
ಧರಿಸಿದ ಸ್ವಚ್ಛ ಸುಂದರ ಉಡುಪು
ಮನದ ಮಲಿನತೆಯನ್ನೆಂದಿಗೂ ಮರೆಮಾಚದು !
ಯಾರೋ ಸಂತರು ಹೇಳಿದರಂತೆ ಮನುಷ್ಯನಿಗಿಂತ ಮಿಗಿಲು ಬೇರ್ಯಾವುದೂ ಇಲ್ಲ
ಆದರೆ ನನಗನ್ನಿಸಿದೆ,
ಮನುಷ್ಯನಿಗಿಂತ ಮಿಗಿಲು ಆತನ ಮನಸ್ಸಿದೆ.
ಸಂಕುಚಿತ ಮನಸ್ಸಿನಿಂದ ವ್ಯಕ್ತಿ ಹಿರಿಯನಾಗಲಾರ,
ಛಿದ್ರ ಮನಸ್ಸಿನಿಂದ ಯಾವ ನಿಲುವೂ ತಳೆಯಲಾರ !
ಇದಕ್ಕಾಗಿಯೇ ಶ್ರೀಕೃಷ್ಣ ಪರಮಾತ್ಮ ಶಸ್ತ್ರ ಸನ್ನದ್ಧನಾಗಿ ರಥವನೇರಿದ
ಕುರುಕ್ಷೇತ್ರದ ಮೈದಾನದಿ ನಿಂತು
ಅರ್ಜುನಗೆ ಗೀತೆಯ ಪ್ರವಚನ ನೀಡಿದ.
ಮನಸ್ಸನ್ನೇ ಸೋತು, ಮೈದಾನವ ಗೆಲ್ಲಲಾರೆವು !
ಅಥವಾ ಮೈದಾನವ ಗೆದ್ದು ಮನಸ್ಸನ್ನು ಹೇಗೆ ಗೆಲ್ಲಲಾದೀತು !
ಎತ್ತರದಿಂದ ಬಿದ್ದರೆ ಅಧಿಕ ಗಾಯಗಳಾಗುವವು,
ಎಲುಬುಗಳು ಜೋಡಣೆಯಾದರೂ ನೋವಿನ ಅಂಶ ಉಳಿಯುವವು,
ಇದರರ್ಥ ಶಿಖರವ ತಲುಪುವ ಸವಾಲನ್ನೇ ಸ್ವೀಕರಿಸಬಾರದೆಂದಲ್ಲ,
ಪರಿಸ್ಥಿಯ ಮೇಲೆ ವಿಜಯವ ಸಾಧಿಸಲೇಬಾರದೆಂಬ ಅರ್ಥವೂ ಅಲ್ಲ|
ಹಾಗಾದರೆ ವ್ಯಕ್ತಿ ಎಲ್ಲಿರುವನೋ ಅಲ್ಲೇ ನಿಲ್ಲಬೇಕೆ ?
ಪರರ ದಯೆಯ ಭರವಸೆಯಡಿಯಲ್ಲಿ ಕಾಲ ಕಳೆಯಬೇಕೇ ?
ಜಡತೆಯ ಹೆಸರೇ ಜೀವನವಲ್ಲ,
ಪಲಾಯನವಾಗುವುದು ಪುರುಷಾರ್ಥವಲ್ಲ್ಲ !
ವ್ಯಕ್ತಿಯು ಪರಿಸ್ಥಿತಿಯ ಮೇಲೆ ವಿಜಯ ಸಾಧಿಸಲು ಪ್ರಯತ್ನಿಸಲಿ
ಪರಿಸ್ಥಿಯೊಡನೆ ಹೋರಾಡಲಿ |
ಒಂದು ಸುಂದರ ಕನಸು ಭಗ್ನವಾಯಿತೋ ಮತ್ತೊಂದನ್ನು ನೆಡಲಿ |
ಆದರೆ ಎಷ್ಟೇ ಎತ್ತರಕ್ಕೇರಲಿ
ಮಾನವೀಯತೆಯ ಮೌಲ್ಯದಿ ಕೆಳಗುರುಳದಿರಲಿ,
ತನ್ನ ನೆ¯ದ ಅಸ್ಥಿತ್ವವನ್ನು ಬಿಡದಿರಲಿ
ಅಂತರಾತ್ಮದ ಮೋಹಕೆ ಬೀಳದಿರಲಿ |

ಒಂದು ಕಾಲನ್ನು ಭೂಮಿಯ ಮೇಲೆ ಊರಿಯೇ
ಭಗವಂತ ವಾಮನ ಆಕಾಶ ಪಾತಾಳವನ್ನು ಸಂಧಿಸಿದನು |
ಭೂಮಾತೆಯೇ ಸಕಲವನ್ನೂ ಧರಿಸಿಹಳು,
ಯಾರೂ ಆಕೆಯ ಮೇಲೆ ವೃಥಾ ಭಾರವಾಗದಿರಿ,
ಮಿಥ್ಯತೆಗಳ ವ್ಯಾಮೋಹÀ ಹೊಂದದಿರಿ |

ವ್ಯಕ್ತಿಯ ವ್ಯಕ್ತಿತ್ವದ ಪರಿಚಯ
ಆತನ ಧನ ಹಾಗೂ ದೊರೆತನದಲ್ಲಲ್ಲ
ಆತನ ಮನಸ್ಸಿನಿಂದುಂಟಾಗುತ್ತದೆ |

ಮನಸ್ಸಿನ ಭಿಕ್ಷಾಟನೆಯ ಮುಂದೆ
ಕುಬೇರನ ಸಂಪತ್ತೂ ರೋಧಿಸುತ್ತದೆ |

2) पेड़ के ऊपर चढ़ा आदमी
ऊंचा दिखाई देता है।
जड़ में खड़ा आदमी
नीचा दिखाई देता है।
आदमी न ऊंचा होता है, न नीचा होता है,
न बड़ा होता है, न छोटा होता है।
आदमी सिर्फ आदमी होता है।
पता नहीं, इस सीधे-सपाट सत्य को
दुनिया क्यों नहीं जानती है?
और अगर जानती है,
तो मन से क्यों नहीं मानती
इससे फर्क नहीं पड़ता
कि आदमी कहां खड़ा है?
पथ पर या रथ पर?
तीर पर या प्राचीर पर?
फर्क इससे पड़ता है कि जहां खड़ा है,
या जहां उसे खड़ा होना पड़ा है,
वहां उसका धरातल क्या है?
हिमालय की चोटी पर पहुंच,
एवरेस्ट-विजय की पताका फहरा,
कोई विजेता यदि ईर्ष्या से दग्ध
अपने साथी से विश्वासघात करे,
तो उसका क्या अपराध
इसलिए क्षम्य हो जाएगा कि
वह एवरेस्ट की ऊंचाई पर हुआ था?
नहीं, अपराध अपराध ही रहेगा,
हिमालय की सारी धवलता
उस कालिमा को नहीं ढ़क सकती।
कपड़ों की दुधिया सफेदी जैसे
मन की मलिनता को नहीं छिपा सकती।
किसी संत कवि ने कहा है कि
मनुष्य के ऊपर कोई नहीं होता,
मुझे लगता है कि मनुष्य के ऊपर
उसका मन होता है।
छोटे मन से कोई बड़ा नहीं होता,
टूटे मन से कोई खड़ा नहीं होता।
इसीलिए तो भगवान कृष्ण को
शस्त्रों से सज्ज, रथ पर चढ़े,
कुरुक्षेत्र के मैदान में खड़े,
अर्जुन को गीता सुनानी पड़ी थी।
मन हारकर, मैदान नहीं जीते जाते,
न मैदान जीतने से मन ही जीते जाते हैं।
चोटी से गिरने से
अधिक चोट लगती है।
अस्थि जुड़ जाती,
पीड़ा मन में सुलगती है।
इसका अर्थ यह नहीं कि
चोटी पर चढ़ने की चुनौती ही न माने,
इसका अर्थ यह भी नहीं कि
परिस्थिति पर विजय पाने की न ठानें।
आदमी जहां है, वही खड़ा रहे?
दूसरों की दया के भरोसे पर पड़ा रहे?
जड़ता का नाम जीवन नहीं है,
पलायन पुरोगमन नहीं है।
आदमी को चाहिए कि वह जूझे
परिस्थितियों से लड़े,
एक स्वप्न टूटे तो दूसरा गढ़े।
किंतु कितना भी ऊंचा उठे,
मनुष्यता के स्तर से न गिरे,
अपने धरातल को न छोड़े,
अंतर्यामी से मुंह न मोड़े।
एक पांव धरती पर रखकर ही
वामन भगवान ने आकाश-पाताल को जीता था।
धरती ही धारण करती है,
कोई इस पर भार न बने,
मिथ्या अभियान से न तने।
आदमी की पहचान,
उसके धन या आसन से नहीं होती,
उसके मन से होती है।
मन की फकीरी पर
कुबेर की संपदा भी रोती है।
– अटल बिहारी वाजपेयी

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.