ದೇಶ-ವಿದೇಶ

ಮೋದಿ ಯುಗ….ನಾಸ್ಟ್ರಡ್ಯಾಮಸ್ ಭವಿಷ್ಯ..!

ಭಾರತದಲ್ಲಿ 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವುದು ಮತ್ತು ಅವರ ನಾಯಕತ್ವದಿಂದಾಗಿ ಭಾರತವು ವಿಶ್ವದ ಮಹೋನ್ನತ ಶಕ್ತಿಯಾಗುವುದನ್ನು ಹದಿನಾರನೇ ಶತಮಾನದ ವಿಶ್ವ ವಿಖ್ಯಾತ ಭವಿಷ್ಯಕಾರ, ಫ್ರೆಂಚ್ ಪ್ರವಾದಿ ನಾಸ್ಟ್ರಡ್ಯಾಮಸ್ 1555ರಷ್ಟು ಹಿಂದೆಯೇ ಭವಿಷ್ಯ ನುಡಿದಿದ್ದರು ಎಂಬ ಬಗ್ಗೆ ಕೇಂದ್ರ ಗೃಹ ಸಹಾಯಕ ಸಚಿವ ಕಿರಣ್ ರಿಜಿಜು ಎಲ್ಲರ ಗಮನ ಸೆಳೆದಿದ್ದಾರೆ.

ಸಚಿವ ರಿಜಿಜು ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ Amazing Facts ಎಂಬ ಶೀರ್ಷಿಕೆಯಡಿ ಕೊಟ್ಟಿರುವ ಈ ಕೆಳಗಿನ ಲೆಕ್ಕಾಚಾರಗಳನ್ನು ಗಮನಿಸಿದರೆ 2014ರ ಮೇ ತಿಂಗಳಲ್ಲಿ ಬಿಜೆಪಿ ದಾಖಲಿಸಿದ ಪ್ರಚಂಡ ವಿಜಯದ ಹಿಂದಿರುವ ಅಂಕಿ ಅಂಶಗಳ ಮಹತ್ವವು ಒಂದು ಅದ್ಭುತ ನಿಗೂಢತೆಯನ್ನು ಬಯಲು ಮಾಡುತ್ತದೆ.

nostradamus-predicted-modis-rule-450-years-ago-1ರಿಜಿಜು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದಂತೆ ಈಗಿನ ಲೋಕಸಭೆಯಲ್ಲಿ :

ಬಿಜೆಪಿ – 283 ಸ್ಥಾನ : 2 + 8 + 3 = 13
ಎನ್‍ಡಿಎ – 337 ಸ್ಥಾನ : 3 + 3 +7 = 13
ಯುಪಿಎ – 58 : 5 + 8 = 13
ಇತರರು – 148 : 1 + 4 + 8 = 13

ನಾಸ್ಟ್ರಡ್ಯಾಮಸ್ 450 ವರ್ಷಗಳ ಹಿಂದೆ ನುಡಿದಿದ್ದ ಭವಿಷ್ಯದ ಪ್ರಕಾರ ಭಾರತದಲ್ಲಿ ಮೋದಿ ಯುಗ ಆರಂಭವಾಗುವುದಕ್ಕೆ ಸಂಖ್ಯಾಶಾಸ್ತ್ರದ ಪ್ರಕಾರ ಈ 13ರ ಸಂಗಮವು ಮಹತ್ವದ್ದಾಗಿದೆ.

ಫ್ರೆಂಚ್ ಪ್ರವಾದಿ ನಾಸ್ಟ್ರಡ್ಯಾಮಸ್ ಬರೆದಿದ್ದ ಭವಿಷ್ಯ ಹೀಗಿದೆ :

2014ರಿಂದ 2026ರ ಅವಧಿಯಲ್ಲಿ ಭಾರತಕ್ಕೆ ಒಬ್ಬ ಮೇಧಾವಿ ಪುರುಷನ ನಾಯಕತ್ವ ಸಿಗಲಿದೆ. ಆರಂಭದಲ್ಲಿ ಜನರು ಆತನನ್ನು ದ್ವೇಷಿಸುತ್ತಾರೆ; ಆದರೆ ಕ್ರಮೇಣ ಆತನನ್ನು ಪ್ರೀತಿಸುತ್ತಾರೆ; ಆತ ದೇಶದ ದಿಕ್ಕು – ದೆಸೆಯನ್ನೇ ಬದಲಾಯಿಸುತ್ತಾರೆ.

ನಾಸ್ಟ್ರಡ್ಯಾಮಸ್ ಬರೆದಿರುವ ಪ್ರಕಾರ “ಮಧ್ಯ ವಯಸ್ಸಿನ ಸೂಪರ್‍ಪವರ್ ಆಡಳಿತಗಾರನೊಬ್ಬ ಭಾರತಕ್ಕೆ ಮಾತ್ರವಲ್ಲ ಇಡಿಯ ವಿಶ್ವಕ್ಕೇ ಸುವರ್ಣ ಯುಗವನ್ನು ತರುತ್ತಾರೆ. ಆತನ ನಾಯಕತ್ವದಲ್ಲಿ ಭಾರತವು ವಿಶ್ವದ ಯಜಮಾನ ಎನಿಸಕೊಳ್ಳುತ್ತದೆ ಮಾತ್ರವಲ್ಲ ಅನೇಕ ದೇಶಗಳು ಭಾರತದಡಿ ಆಸರೆ ಪಡೆಯುತ್ತವೆ !”.

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.