ಸಂಗೀತ

ಯುವಗಾಯಕ ಡಾ.ಚಿನ್ಮಯ ಎಂ.ರಾವ್ ಅವರ ಮೊದಲ ವೀಡಿಯೋ ಗೀತೆ “ಉತ್ತರಾಯಣಮ್” ಅಂತರಜಾಲದಲ್ಲಿ ಬಿಡುಗಡೆ

ವಿಶ್ವನಾಯಕ ಹಾಗೂ ರಾಷ್ಟ್ರದ ಹೆಮ್ಮೆಯ ಪ್ರಧಾನ ಮಂತ್ರಿಗಳಿಗೆ ನನ್ನದೊಂದು ಪುಟ್ಟ ಕೊಡುಗೆ ಇದು : ಡಾ.ಚಿನ್ಮಯ ಎಂ.ರಾವ್

ಬೆಂಗಳೂರು : ಸಂಗೀತ ನಿರ್ದೇಶಕ ಹಾಗೂ ಯುವಗಾಯಕ ಡಾ.ಚಿನ್ಮಯ ಎಂ.ರಾವ್ ಅವರ “ಉತ್ತರಾಯಣಮ್-ದಿ ಮೂವ್ ಮೆಂಟ್” ಎಂಬ ವೀಡಿಯೊ ಗೀತೆ ಅಂತರಜಾಲದಲ್ಲಿ ಬಿಡುಗಡೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಸೂರ್ಯನಿಗೆ ಹೋಲಿಸಿ ಸಂಸ್ಕೃತದಲ್ಲಿ ರಚಿಸಿರುವ ಕವಿತೆಗೆ ಚಿನ್ಮಯ ತಾವೇ ಸಂಗೀತ ನೀಡಿ ಹಾಡಿದ್ದಾರೆ.

 

 

ಗಾಯಕ ಚಿನ್ಮಯ ಅವರ ಪ್ರಪ್ರಥಮ ವೀಡಿಯೊ ಗೀತೆ ಇದಾಗಿದ್ದು ಇದನ್ನು ಅವರು ಪ್ರಧಾನಿ ಅವರಿಗೇ ಅರ್ಪಣೆ ಮಾಡಿದ್ದಾರೆ. ಡಾ.ಗೀತಾ ಬಡಿಕಿಲಾಯ ಅವರ ಪರಿಕಲ್ಪನೆಯ ಈ ಗೀತೆಯನ್ನು ಬೆಂಗಳೂರಿನ ಕೇಶವ ಪ್ರೊಡಕ್ಷನ್ಸ್ ಎಂಬ ಸಂಸ್ಥೆ ವೀಡಿಯೋ ಚಿತ್ರೀಕರಣವನ್ನು ಮಾಡಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಸುಪ್ರಸಿದ್ಧ ಯಾತ್ರಾಸ್ಥಳ ಓಂಕಾರಾಶ್ರಮವನ್ನು ವಿಶೇಷವಾಗಿ ಈ ಚಿತ್ರಿಕೆಯಲ್ಲಿ ತೋರಿಸಲಾಗಿದೆ.

 

 

ಈ ಸಂಸ್ಕೃತ ಗೀತೆಯ ವಿವಿಧ ಸಾಲುಗಳ ವಿವಿಧ ಅಕ್ಷರಗಳಲ್ಲಿ “ನರೇಂದ್ರ ಮೋದಿ ವಿಶ್ವಚೇತನ” ಎಂದು ತೋರಿಸಲಾಗಿದೆ. ಇದರ ಹಿಂದಿ ಹಾಗೂ ಆಂಗ್ಲಭಾಷೆಯ ಭಾವಾನುವಾದವುಳ್ಳ ಸಂಪೂರ್ಣ ಮಾಹಿತಿಯನ್ನು ಕಳೆದ ಯುಗಾದಿಯಂದೇ ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಿಕೊಡಲಾಗಿದೆ. ವಿಶ್ವನಾಯಕ ಹಾಗೂ ರಾಷ್ಟ್ರದ ಹೆಮ್ಮೆಯ ಪ್ರಧಾನ ಮಂತ್ರಿಗಳಿಗೆ ನನ್ನದೊಂದು ಪುಟ್ಟ ಕೊಡುಗೆ ಇದು ಎಂದು ಗಾಯಕ ಡಾ.ಚಿನ್ಮಯ ರಾವ್ ಅಭಿಪ್ರಾಯಪಟ್ಟಿದ್ದಾರೆ.

 

ಇದರ ಯೂಟೂಬ್ ಕೊಂಡಿ :
Uttarayanam : The Movement | Dedicated to World Leader Narendra Modi By Musician Dr.Chinmaya M.Rao

 

Tags

Related Articles

Close

Adblock Detected

Please consider supporting us by disabling your ad blocker