ಬೆಂಗಳೂರು : ಅಗರದ ಸ್ವಾನಂದಾಶ್ರಮದಲ್ಲಿ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರಸರಸ್ವತಿ ಮಹಾಸ್ವಾಮಿಗಳು, ಡಾ.ಚಿನ್ಮಯ ರಾವ್ ಗಾಯನದ ಶ್ರೀ ಗಣೇಶ ಸಹಸ್ರನಾಮ ಅಡಕಮುದ್ರಿಕೆಯನ್ನು ಶುಕ್ರವಾರ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಸ್ವಾನಂದಾಶ್ರಾಮದ ಮುಖ್ಯಸ್ಥರಾದ ರಾವೆಲ್ ಸಂತೋಷ್ ಹಾಗೂ ಭಕ್ತಾದಿದಗಳು ಹಾಜರಿದ್ದರು. ಗಣೇಶ ಸಹಸ್ರನಾಮವನ್ನು ಸುಲಭವಾಗಿ ಕಲಿತು ಧ್ಯಾನದ ಶೈಲಿಯಲ್ಲಿ ಪಠಿಸಲು ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಅಗರದ ಸ್ವಾನಂದಶ್ರಮ ಇದನ್ನು ಧ್ವನಿಮುದ್ರಿಸಿ ಬಿಡುಗಡೆಗೊಳಿಸಿದೆ.