ಸಂಗೀತ ಸಮಯ

ಲಲಿತಕಲೆಯನ್ನು ದೂರ ಇಟ್ಟರೆ ಮನಸ್ಸು-ಭಾವ ಬರಡಾಗುತ್ತದೆ : ಲೋಕಾಯುಕ್ತದ ಮಾಜಿ ನಿರ್ದೇಶಕರು ಶ್ರೀ ಮುನಿಕೃಷ್ಣ

ಸೃಜನ ಸಾಂಸ್ಕೃತಿಕ ಸಮೂಹದ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ 24ನೇ ವಾರ್ಷಿಕೋತ್ಸವ, ಗುರುವಂದನಾ ಮತ್ತು ಪ್ರತಿಭಾ ಪುರಸ್ಕಾರ

ಸೃಜನ ಸಾಂಸ್ಕೃತಿಕ ಸಮೂಹದ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ 26 ಜುಲೈ 2025ರಂದು ಸಂಜೆ 4:30 ಗಂಟೆಗೆ ಆಯೋಜಿಸಲಾಗಿದ್ದ 24ನೇ ವಾರ್ಷಿಕೋತ್ಸವ, ಗುರುವಂದನಾ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿ ಬಂದು ಎಲ್ಲರನ್ನೂ ಆಕರ್ಷಿಸಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಲೋಕಾಯುಕ್ತದ ಮಾಜಿ ನಿರ್ದೇಶಕರು ಆದ ಶ್ರೀ ಮುನಿಕೃಷ್ಣ ಮತ್ತು ವಿಶೇಷ ಆಹ್ವಾನಿತರಾಗಿ ನಿವೃತ್ತ ಪೊಲೀಸ ಅಧಿಕಾರಿಗಳು ಹಾಗೂ ಜಾನಪದ ಗಾಯಕರಾದ ಶ್ರೀ ವೇಮಗಲ್ ನಾರಾಯಣಸ್ವಾಮಿ ರವರು ಆಗಮಿಸಿದ್ದರು.

2024-25ನೇ ಸಾಲಿನಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 93%ಗೂ ಅಧಿಕ ಅಂಕ ಗಳಿಸಿದ ಸೃಜನದ 16 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.

ಶ್ರೀ ಮುನಿಕೃಷ್ಣ ರವರು ಮಾತನಾಡಿ ಸಂಗೀತದ ವಿಸ್ತಾರವನ್ನು ತಿಳಿಹೇಳುತ್ತಾ ಮಾನವನ ಜೀವನದಲ್ಲಿ ಸಂಗೀತದ ಮಹತ್ವವನ್ನು ಸಾರಿ ಹೇಳಿದರು. ಲಲಿತ ಕಲೆಯನ್ನು ದೂರ ಇಟ್ಟರೆ ಮನಸ್ಸು-ಭಾವ ಬರಡಾಗುತ್ತದೆ. ಸಂಗೀತದಲ್ಲಿ ಅಭಿರುಚಿ ಮೂಡಿಸಿಕೊಂಡರೆ  ಮನುಷ್ಯನ ಒರಟುತನ ಮಾಯವಾಗುತ್ತದೆ ಎಂದು ಕಿವಿಮಾತು ಹೇಳಿದರು.

ಗಾಯಕರಾದ ಡಾ || ವೇಮಗಲ್ ನಾರಾಯಣಸ್ವಾಮಿ ರವರು ಜಾನಪದ ಗೀತೆಯನ್ನು ಹಾಡಿ ನೆರೆದವರ ಮೈ ನವಿರೇಳಿಸಿದರು ಎಂದರು.

ಸೃಜನ‌ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ನರಹರಿ ದೀಕ್ಷಿತ್ ರವರು ಮುಖ್ಯ ಅತಿಥಿಗಳನ್ನು , ವಿಶೇಷ ಆಹ್ವಾನಿತರನ್ನು ಹಾಗೂ ನೆರೆದಿದ್ದ ಪ್ರೇಕ್ಷಕರನ್ನು ಸ್ವಾಗತಿಸಿದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 99.36% ಪಡೆದು ಸಾಧನೆಗೈದ ವಸುಂಧರಾ ವಿ ಹೆಗಡೆ ಪ್ರತಿಭಾ ಪುರಸ್ಕೃತರ ಪರವಾಗಿ ಮತ್ತು ಡಾll ವಿನಾಯಕ ಹೆಗಡೆ ಅವರು ಪುರಸ್ಕೃತರ ಪೋಷಕರ ಪರವಾಗಿ ಮಾತನಾಡಿದರು.

ಸೃಜನದ ವಿದ್ಯಾರ್ಥಿಗಳ ಸಮೂಹ ಗಾಯನ ಮತ್ತು ನೃತ್ಯ ಪ್ರದರ್ಶನಗಳು ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಶ್ರೀಮತಿ ಪಾರ್ವತಿ ನರಹರಿ ದೀಕ್ಷಿತ್ ರವರು ವಂದನಾರ್ಪಣೆಯನ್ನು ನೆರವೇರಿಸಿದರು.

ಯೂಟ್ಯೂಬ್ ನಲ್ಲಿ ನೇರಪ್ರಸಾರಗೊಂಡ ಕಾರ್ಯಕ್ರಮವನ್ನು ದೇಶ ವಿದೇಶಗಳಲ್ಲಿ ನೆಲೆಸಿರುವ ಸೃಜನ ವಿದ್ಯಾರ್ಥಿಗಳು ಮತ್ತು ಪೋಷಕರಾದಿಯಾಗಿ ನೂರಾರು  ಕಲಾಭಿಮಾನಿಗಳು ವೀಕ್ಷಿಸಿದರು.

ಸೃಜನ ಸಂಗೀತ ಶಾಲೆಯ ಸಮಸ್ತ ವಿದ್ಯಾರ್ಥಿ ಮತ್ತು ಪೋಷಕ ವೃಂದ ಉಪಸ್ಥಿತರಿದ್ದರು.

Related Articles

Back to top button