ಸಂಗೀತ ಸಮಯ

ಪಠ್ಯದ ಶಿಕ್ಷಣ ಎಷ್ಟು ಮುಖ್ಯವೋ ಪಠ್ಯೇತರ ಶಿಕ್ಷಣವೂ ಬದುಕಿಗೆ ಅಷ್ಟೇ ಮುಖ್ಯ 

ಜ್ಞಾನಭಾರತಿ ಬಡಾವಣೆಯಲ್ಲಿ ಸಂಗೀತಜ್ಞಾನಪ್ರಸಾರದ ಶುಭಾರಂಭ

ಬೆಂಗಳೂರು : ಇಂದಿನ ಮಕ್ಕಳಿಗೆ ಶಾಲಾಕಾಲೇಜುಗಳಲ್ಲಿ ಬದುಕಿಗೆ ಬೇಕಾದ ವಿದ್ಯೆಯನ್ನು ಮಾತ್ರ ಕಲಿಸಲಾಗುತ್ತಿದೆ, ಆದರೆ ಸಂಗೀತ, ನೃತ್ಯ ಹಾಗೂ ಇನ್ನಿತರ ಕಲಾಪ್ರಕಾರಗಳು ವಿದ್ಯೆಯಿಂದ ಸಮಾಜದಲ್ಲಿ ಹೇಗೆ ಮೌಲ್ಯಾಧಾರಿತವಾಗಿ ಬದುಕಬೇಕೆಂಬ ವಿದ್ಯೆಯನ್ನು ಕಲಿಸಿಕೊಡುತ್ತಿವೆ. ಪಠ್ಯದ ಶಿಕ್ಷಣ ಎಷ್ಟು ಮುಖ್ಯವೋ ಪಠ್ಯೇತರ ಶಿಕ್ಷಣವೂ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಮುಖ್ಯವಾಗುತ್ತದೆ, ಹಾಗಾಗಿ ಜ್ಞಾನಭಾರತಿ ನಗರದ ಜ್ಞಾನಭಾರತಿ ಕಲಾಭವನದಲ್ಲಿ ನಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತದ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಹಿರಿಯ ಸಮಾಜಸೇವಕ ಹಾಗೂ ಜ್ಞಾನಗಣಪತಿ ಕಲಾಭವನದ ಕಾರ್ಯಾಧ್ಯಕ್ಷ ಕೆ.ಶ್ರೀಪತಿ ರಾವ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಲಾಭವನಗಳು ಕೇವಲ ವ್ಯಾಪಾರಕ್ಕೆ ಸೀಮಿತವಾಗುವ ಕಟ್ಟಡಗಳಾಗುವ ಬದಲು ಸಮಾಜಕ್ಕೆ ಕಲಾಶಿಕ್ಷಣದ ಮೂಲಕ ಕಲಾಜಾಗೃತಿಯನ್ನು ಮೂಡಿಸುವಂತಾಗಬೇಕು ಎಂದು ಜ್ಞಾನಗಣಪತಿ ಕಲಾಭವನದ ಕಾರ್ಯದರ್ಶಿ ಒ.ಎಂ ಬಸವರಾಜ್ ಅವರು ಹೇಳಿದರು.

ಕರ್ನಾಟಕದ ಅದೆಷ್ಟೋ ಪ್ರದೇಶಗಳಲ್ಲಿ ಇಂದಿಗೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಶಿಕ್ಷಣ ದುರ್ಲಬವಾಗಿದೆ. ಇದಕ್ಕೆ ಬೆಂಗಳೂರಿನ ಹಲವಾರು ಪ್ರದೇಶಗಳೂ ಹೊರತಲ್ಲ. ಎಲ್ಲೆಡೆ ಎಲ್ಲರಿಗೂ ಕರ್ನಾಟಕ ಶಾಸ್ತ್ರೀಯ ಸಂಗೀತವಿದ್ಯೆ ಸಿಗುವಂತಾಗಬೇಕೆಂಬ ಸದುದ್ದೇಶದಿಂದ ನಮ್ಮ ಸಂಸ್ಥೆ ಶ್ರಮಿಸುತ್ತಿದೆ ಎಂದು ಸ್ವರಮೇಧಾ ವಿಶ್ವಸಂಗೀತ ಪ್ರತಿಷ್ಠಾನದ ಸಂಸ್ಥಾಪಕ ಸಂಗೀತ ಶಿಕ್ಷಕ ಡಾ.ಚಿನ್ಮಯ ರಾವ್ ಹೇಳಿದರು.

ಪ್ರಾರಂಭಿಕ ಪಾಠವಾಗಿ ಕಲಿತ ಗಣಪತಿಯ ಕೃತಿಯನ್ನು ಸ್ವರಮೇಧಾ ವಿದ್ಯಾರ್ಥಿಗಳು ಆರಂಭಿಕ ಪ್ರಾರ್ಥನಾಗೀತೆಯಾಗಿ ಹಾಡಿದರು.  ಈ ಸಂದರ್ಭದಲ್ಲಿ ಜ್ಞಾನಗಣಪತಿ ಕಲಾಭವನದ ಕೋಶಾಧಿಕಾರಿ ಈಶ್ವರ ಭಟ್ ಹಾಗೂ ಸಂಗೀತಾಭಿಮಾನಿಗಳು ಹಾಜರಿದ್ದರು. ವಿನುತಾ ಥಾಮಸ್ ಕಾರ್ಯಕ್ರಮವನ್ನು ನಿರೂಪಿಸಿದರು.

ಚಿತ್ರ : ಬೆಂಗಳೂರಿನ ಜ್ಞಾನಗಣಪತಿ ಕಲಾಭವನದಲ್ಲಿ ಸ್ವರಮೇಧಾ ವಿದ್ಯಾರ್ಥಿಗಳು ಪಾಲಕರೊಂದಿಗೆ ಜ್ಞಾನಗಣಪತಿ ಕಲಾಭವನದ ಕಾರ್ಯಾಧ್ಯಕ್ಷ ಕೆ.ಶ್ರೀಪತಿ ರಾವ್, ಸಂಗೀತ ಶಿಕ್ಷಕ ಡಾ.ಚಿನ್ಮಯ ರಾವ್, ಕಾರ್ಯದರ್ಶಿ ಒ.ಎಂ ಬಸವರಾಜ್, ಕೋಶಾಧಿಕಾರಿ ಈಶ್ವರ ಭಟ್ ಹಾಗೂ ಸಮಾಜಸೇವಕಿ ವಿನುತಾ ಥಾಮಸ್.

Most memorable moments of Swaramedha Jnanabharati Layout Branch Inauguration Event

ಸ್ವರಮೇಧ ಜ್ಞಾನಭಾರತಿ ಬಡಾವಣೆಯ ಶಾಖೆಯ ಉದ್ಘಾಟನಾ ಸಮಾರಂಭದ ಅವಿಸ್ಮರಣೀಯ ಕ್ಷಣಗಳು

Admissions Open for the Offline Music Classes

in Jnanabharati Layout, Bengaluru

Near Bengaluru University

CARNATIC CLASSICAL VOCAL OFFLINE MUSIC CLASSES

FOR JUNIOR / SENIOR / VIDWAT / B.MUSIC & M.MUSIC COURSES

By the Academy of World Record Holder, Classical Musician

Music Director & Playback Singer

DR.CHINMAYA M.RAO

Founder & Principal of Swaramedha International Music Academy (R.)

https://www.youtube.com/@swaramedha

https://www.facebook.com/swaramedha

If you want to join, please text me.

9449911590 (WhatsApp)

9535585270 (For Calls)

Regards,

Dr Chinmaya Rao

Founder

Swaramedha Vishva Sangeeta Pratishthanam

#carnaticmusic #carnatic #carnaticclassical #carnaticclassical #carnaticmusician #carnaticvocal #carnaticconcert

#offline #music #sangeeta #classes #Banashankari #stage3  #Bengaluru  #JnanabharatiLayout

#Crash #Course #CrashCourse #BengaluruUniversity

#DrChinmayaRao #Junior #Senior #Grade #Vocal #Exam

#Karnataka #SecondaryEducation #Examination #Board

#Mentor #Appreciate #Efforts

#Progress #Career #Singing #Right #Place #RightPlace

#Swaramedha #International #Music #Academy #SwaramedhaInternationalMusicAcademy

#SwaramedhaMusicAcademy #InternationalMusicAcademy

#InternationalAcademy #MusicAcademy

#SwaramedhaMusicFestival #MusicFestival

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.