ಗಂಡ ಹೆಂಡತಿಯರ ನಡುವೆ ನಡೆದ ಸಂಭಾಷಣೆ:
ಹೆಂಡತಿ: ನನ್ನ ಕಂಡರೆ ನಿಮಗೆ ನಿಜವಾಗಲೂ ಭಯನಾ
ಗಂಡ: ಛೆ ಛೆ ! ಭಯ ಅಲ್ವೇ ಭಕ್ತಿ !
ಹೆಂಡತಿ: ತಮಾಷೆ ಸಾಕು, ಸೀರಿಯಸ್ಸಾಗಿ ಹೇಳ್ರಿ, ನಿಮಗೆ ನನ್ನ ಕಂಡರೆ ಭಯ ಇದ್ದರೆ, ನೀವು ನನ್ನ ಡೈವೋರ್ಸ್ ಮಾಡಿ ಬೇರೆ ಯಾರನ್ನಾದರು ಯಾಕೆ ಮದುವೆ ಆಗಬಾರದು?
ಗಂಡ: ಎಲ್ಲಾದರೂ ಉಂಟೆ ? ನನ್ನ ಪ್ರಾಣ ಹೋದರು ಸರಿ ಆದರೆ ಇನ್ನೊಬ್ಬಳನ್ನು ಮಾತ್ರಾ ಮದುವೆಯಾಗಲಾರೆ !
ಹೆಂಡತಿ: ಕಾರಣ?
ಗಂಡ: ಮುಂದೆ ಬರೋಳು ನಿನಗಿಂತಾ ಹೆಚ್ಚಿನ ಟೆರರಿಸ್ಟ ಆಗಿರಲ್ಲ ಅಂತ ಏನು ಗ್ಯಾರಂಟಿ. ಅದೂ ಅಲ್ಲದೆ ಗುರುತು ಪರಿಚಯ ಇಲ್ಲದೆ ಇರೋ ದೇವತೆಗಿಂತಾ, ಚೆನ್ನಾಗಿ ಪರಿಚಯ ಇರೋ ದೆವ್ವಾನೆ ಮೇಲಲ್ಲವೇ ?
ಮುಂದೆ ಏನಾಯಿತು ಎಂಬುದನ್ನು ನಿಮ್ಮ ಕಲ್ಪನೆಗೆ ಬಿಟ್ಟಿದ್ದೇನೆ !
ಕೃಪೆ : https://chandana.wordpress.com/category/ಹಾಸ್ಯ-ಹರಟೆ/page/2/