ಸ್ಯಾಂಡಲ್ ವುಡ್

ಡೇಟಿಂಗ್ ಆಪ್ ಜಾಲದ ಸುತ್ತ ಲಿಪ್ ಸ್ಟಿಕ್ ಮರ್ಡರ್ !

ಈ ಹಿಂದೆ ಸೈಕಲಾಜಿಕಲ್ ಥ್ರಿಲ್ಲರ್ ಕಥೆಯಿರುವ ಬ್ಲೂ ಐಸ್, ಎರೋಟಿಕ್ ಥ್ರಿಲ್ಲರ್ ಸ್ಟೋರಿ ಇದ್ದ ರೆಡ್ ನಂಥ ಚಿತ್ರಗಳನ್ನು ನಿರ್ದೇಶಿಸಿದ ರಾಜೇಶ್ ಮೂರ್ತಿ ಅವರು ಬಹಳ ದಿನಗಳ ನಂತರ ಮತ್ತೊಂದು ಚಿತ್ರದ ಮೂಲಕ ಹಾಜರಾಗಿದ್ದಾರೆ. ಈಸಲ ಅವರು ಇನ್ವೆಸ್ಟಿಗೇಶನ್ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿದ ‘ಲಿಪ್ ಸ್ಟಿಕ್ ಮರ್ಡರ್’ ಎಂಬ ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಸಿನಿವ್ಯಾಲಿ ಕ್ರಿಯೇಶನ್ಸ್ ಮೂಲಕ ಬಿ.ಎಸ್. ಮಂಜುನಾಥ್ ಹಾಗೂ ರಾಜೇಶ್ ಮೂರ್ತಿ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಆನ್ ಲೈನ್ ಡೇಟಿಂಗ್ ಆಪ್ ಮೂಲಕ ಯುವಕರು ಯಾವರೀತಿ ಮೋಸ ಹೋಗುತ್ತಾರೆ ಎಂದು ಈ ಚಿತ್ರದ ಮೂಲಕ ಹೇಳಿದ್ದಾರೆ. ಹಿಂದೆ ಪತ್ರಿಕೆಗಳಲ್ಲಿ ಯುವಕ, ಯುವತಿಯರನ್ನು ಪ್ರಚೋದಿಸುವಂಥ ಈ ರೀತಿಯ ವರ್ಗೀಕೃತ ಜಾಹೀರಾತುಗಳು ಪ್ರಕಟವಾಗುತ್ತಿದ್ದವು, ಅದನ್ನು ನಂಬಿ ಸಾಕಷ್ಟು ಜನ ಯೂಥ್ಸ್ ಮೋಸ ಹೋಗುತ್ತಿದ್ದರು. ಈಗ ಸೋಷಿಯಲ್ ಮೀಡಿಯಾ ತುಂಬಾ ಪ್ರಬಲವಾಗಿದ್ದು, ಅದೇ ಕೆಲಸವನ್ನು ಡೇಟಿಂಗ್ ಆಪ್ ಗಳು ಮಾಡುತ್ತಿವೆ. ಈ ಚಿತ್ರದ ಕಥೆಯಲ್ಲಿ ಡೇಟಿಂಗ್ ಆಪ್ ನಂಬಿ ಮಹಿಳೆಯರು ಕರೆದಲ್ಲಿಗೆ ಹೋಗುವ ಯುವಕರು ಮರ್ಡರ್ ಆಗುವ ಕಥೆಯಿದೆ. ಈ ರೀತಿ ಆಡ್ ಹಾಕುವ ಯುವಕರನ್ನು ಟಾರ್ಗೆಟ್ ಮಾಡುವ ಹೆಂಗಸೊಬ್ಬಳು ಅವರನ್ನು ಒಂದು ಗುಪ್ತಜಾಗಕ್ಕೆ ಕರೆಸಿಕೊಂಡು ಅನಾಯಾಸವಾಗಿ ಮರ್ಡರ್ ಮಾಡುತ್ತಿರುತ್ತಾಳೆ.

ಈ ಸರಣಿ ಕೊಲೆಗಳ ಹಿಂದಿರುವ ರಹಸ್ಯವನ್ನು ಬಯಲಿಗೆಳೆಯಲು ಒಬ್ಬ ಇನ್ವೆಸ್ಟಿಗೇಶನ್ ಆಫೀಸರ್ ಕಥೆಯಲ್ಲಿ ಎಂಟ್ರಿ ಕೊಡುತ್ತಾನೆ. ಆ ಕೊಲೆಗಾರ್ತಿ ಯಾರು, ಕೊಲೆಯಾದವರಿಗೂ ಆಕೆಗೂ ಏನಾದರೂ ಸಂಬಂಧವಿತ್ತೇ, ಆಕೆಯೇನು ಕಿಲ್ಲರಾ, ಒಬ್ಬ ಸೈಕೋನಾ?, ಹೀಗೆ ಏಳುವ ಹಲವಾರು ಪ್ರಶ್ನೆಗಳಿಗೆ ಉತ್ತರ ಆ ಇನ್ಸ್ ಪೆಕ್ಟರ್ ನಡೆಸುವ ತನಿಖೆಯಿಂದ ಸಿಗುತ್ತದೆ.

ಇದುವರೆಗೆ ಕನ್ನಡದಲ್ಲಿ ಈ ಥರದ ಕಂಟೆಂಟ್ ಯಾರೂ ಟ್ರೈ ಮಾಡಿಲ್ಲವೆಂದೇ ಹೇಳಬಹುದು. ಈ ಹಿಂದೆ ಹರಹರ ಮಹಾದೇವ, ಉಘೇ ಉಘೇ ಮಾದೇಶ್ವರ ಧಾರಾವಾಹಿಗಳಲ್ಲಿ ನಟಿಸಿದ್ದ ಆರ್ಯನ್ ರಾಜ್ ನಾಯಕನಾಗಿ ನಟಿಸಿದ್ದ ಆರ್ಯನ್ ರಾಜ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಹೈದರಾಬಾದ್ ಮೂಲದ ಅಲೆಕಾ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿತೆ ರಾಜೇಶ್ ಮಿಶ್ರಾ ಈ ಚಿತ್ರದಲ್ಲಿದ್ದಾರೆ. ನಿತೀಶ್ ಕುಮಾರ್ ಅವರ ಸಂಗೀತ ಸಂಯೋಜನೆ, ಆರ್.ವಿನೋದ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಈಗಾಗಲೇ ಚಿತ್ರದ ಚಿತ್ರೀಕರಣ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು ಈಗ ಸೆನ್ಸಾರ್ ಹಂತದಲ್ಲಿದೆ.

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.