ನೀಲಿ ಬಾನಿನಲ್ಲಿ ಸೂರ್ಯ ಉಯ್ಯಾಲೆಯಾಡುತ್ತಾ
ತಾನು ಬೆಂಕಿಯಾಗಿ ಜಗಕ್ಕೆ ಪ್ರೀತಿ ಬೆಳಕ ನೀಡುತ್ತಾ
ಹಗಲಿನಲ್ಲಿ ಬೆಳಕು ನೀಡಿ ಇರುಳಿನಲ್ಲಿ ಇಣುಕಿ ನೋಡಿ
ಎಷ್ಟು ಜನ್ಮ ಕಳೆದರೂ ಭೂಮಿ ಮೇಲೆ ಪ್ರೀತಿ
ಎಂದೆಂದಿಗೂ ಕಳೆಗು0ದದು ಪ್ರೀತಿಯ ರೀತಿ
ಇಳೆ ಮೇಲೆ ಸೂರ್ಯ ಮೋಡ ಚುಕ್ಕಿಯರಿಗೆ
ಅದು ಎಂತಹದೋ ಬೆಡಗು
ಬೆಳಕು ಗುಡುಗು ಮಿಂಚು ಮಳೆ ಗಾಳಿಯ ಮಿನುಗು
ಪ್ರತಿ ಹಗಲಿರುಳು ಕಾಡುವ ವಿಸ್ಮಯವೇ ಪ್ರೀತಿ
ಕೋಪದಲ್ಲಿ ಸುನಾಮಿ ಭೂಕಂಪದ ಭೀತಿ
ಎಷ್ಟೋ ವರ್ಷಗಳಿಂದ ಸೂರ್ಯನಿಗೆ ಭೂಮಿ ಮೇಲೆ ಮೋಹ
ಪ್ರತಿದಿನ ಕಣ್ತುಂಬಿಕೊಂಡರೂ ತೀರದಾ ದಾಹ
ಹೊತ್ತು ಮೂಡುವ ಹೊಸ್ತಿಲಲ್ಲಿ ನಿಂತು ಪ್ರೀತಿ ಬೆಳಕು
ಬಾನಿನಲ್ಲಿ ಹೊಸದೊಂದು ದಿನದ ಕನಸ ಹೊತ್ತು
ನಗುತ ಬೆಳಕ ನೀಡಿ ಸೂರ್ಯ ಕಿರಣದಿ
ಭೂಮಿಗೆ ಕೊಡುತ್ತಾನೆ ಹೂ ಮುತ್ತು
ಭಾನು ರಸಿಕರು ಬಾನಿನಲ್ಲಿ ಬೆಳಕು ತುಂಟಾಟ
ಕತ್ತಲು-ಬೆಳಕ ಪರಿದೆಯ ಸರಿಸಿ ರಸದೂಟ
ಯುಗಗಳು ಗತಿಸಿದರು ತಲೆಗಳುರುಳಿದರು
ಕಡಿಮೆಯಾಗಲಿಲ್ಲ ಭಾನಿಗೆ ಭುವಿಯ ಆರಾಧನೆ
ದೀಪಾರಾಧನೆಯೊಂದಿಗೆ ಭುವಿಯ ಬೆಳಗುವನೆ
ನನಗೆ ಪ್ರೀತಿಯಲ್ಲಿ ಸೂರ್ಯನೇ ಎಂದೆಂದಿಗೂ ಸ್ಫೂರ್ತಿ
ಮಾಸಲಾರದ ನಿಷ್ಕಲ್ಮಶ ಪ್ರೇಮದ ಭಕ್ತಿ
ಸೂರ್ಯ-ಭೂಮಿಯ ಅಜನ್ಮ ಪ್ರೀತಿ
ಇರಲಿ ಪ್ರತಿ ಜನ್ಮ ಪೂರ್ತಿ
ಎಷ್ಟು ಚೆಂದ ನೋಡಲು ಸೂರ್ಯೋದಯ
ಆಗಬಹುದೇನೋ ನಿತ್ಯ ಸೂರ್ಯನಲ್ಲಿ ಚಿರ ಪ್ರೀತಿಯ ಉದಯ
-ರಶ್ಮಿ ಹೆಜ್ಜಾಜಿ
ನಾನು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರದ ಹೆಜ್ಜಾಜಿ ಎಂಬ ಸುಗ್ರಾಮದಲ್ಲಿ ೧೫ ಆಗಸ್ಟ್ ೧೯೯೪ರಂದು (23 ವರ್ಷಗಳು) ಒಂದು ಬೇಸಾಯದ ಕುಟುಂಬದಲ್ಲಿ ಜನಿಸಿದ ನನಗೆ ಸಂಗೀತದಲ್ಲಿ ಸಾಹಿತ್ಯದಲ್ಲಿ ಚಿಕ್ಕಂದಿನಿಂದಲೂ ಆಸಕ್ತಿಯಿತ್ತು. ನಾನು ಚಿಕ್ಕವಳಿರುವಾಗ ಮನೆಯಲ್ಲಿ ಅಮ್ಮ ಹೇಳಿಕೊಡುತ್ತಿದ್ದ ದೇವರ ನಾಮಗಳು, ಪದ್ಯದ ಸಾಲುಗಳು ಮನಸ್ಸಿಗೆ ನಾಟುತ್ತಿದ್ದವು. ನಾನು ಹಾಡು ಬರೆಯಬೇಕು, ಕವನಗಳನ್ನು ಬರೆಯಬೇಕೆಂಬ ನವಿರಾದ ಭಾವನೆಯೊಂದು ಮೂಡಿದ್ದು ಆಗಲೇ.
ನವಿರಾದ ಭಾವನೆಯೊಂದು ಮೂಡಿದ್ದು ಆಗಲೇ