ಸತ್ತ ನಿನ್ನೆಗಳ ನೆನಪ
ಹೆಕ್ಕಿ ತೆಗೆಯುವ ನೆಪದಲ್ಲಿ
ಎದುರಿರುವ ದಿನಗಳ ಕಳೆಯಬೇಕೇ?
ಭೂತವಾಗಿ ಭೂತಕಾಲವ
ಕೆದಕುತ್ತಾ ದುಃಖದಲ್ಲಿ
ಕೊತಕೊತ ಕೊಳೆಯಬೇಕೇ?
ಮುಂದಿನ ಚಿಂತೆಯು
ಮನದಲ್ಲಿ ಕಾಡಲು
ಜೊತೆಯಿರುವ ಸಂತಸವ ಮರೆಯಬೇಕೇ?
ನಿನ್ನೆ ನಾಳೆಗಳೆಂಬ
ಭಾವನೆಗಳೊಕ್ಕೂಟದಿ
ಸಂತಸದ ಕ್ಷಣ ಬಿಟ್ಟು ತಲೆ ಮೇಲೆ ಕೈಯಿಟ್ಟು ಕೂರಬೇಕೇ?
-ರಶ್ಮಿ ಹೆಜ್ಜಾಜಿ