ಪಾಕಶಾಲೆ

ಬಿಸಿಬಿಸಿ ಗೋಬಿ ಮಂಚೂರಿ ಸವಿಯಲು ರೆಡಿ

-ಅರ್ಪಿತ ಹರ್ಷ ,ಲಂಡನ್

ಗೋಬಿ ಮಂಚೂರಿ ಎಂದರೆ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರ ಬಾಯಲ್ಲೂ ನೀರು ಬರುವುದು ಖಂಡಿತ . ಇದಕ್ಕಾಗಿ ಹೋಟೆಲ್ ಗಳಿಗೆ ಹೋಗಬೇಕೆಂದಿಲ್ಲ .
ಗೋಬಿಮಂಚುರಿ ಯನ್ನು ರುಚಿಯಾಗಿ ಶುಚಿಯಾಗಿ ಮನೆಯಲ್ಲೇ ಮಾಡಿ ಆನಂದಿಸಬಹುದು .ಒಂದು ವೇಳೆ ಗೋಬಿ (ಹೂಕೋಸು) ಸಿಕ್ಕದಿದ್ದಲ್ಲಿ ಕ್ಯಾಬೇಜ್ (ಎಲೆಕೋಸು) ಕೂಡ ಬಳಸಬಹುದು.

ಗೋಬಿ ಮಂಚೂರಿ ಮಾಡಲು ಬೇಕಾಗುವ ಸಾಮಗ್ರಿಗಳು :

ಗೋಬಿ (ಹೂಕೋಸು) ೧
ಈರುಳ್ಳಿ ೧
ಹಸಿಮೆಣಸಿನಕಾಯಿ ೧
ಗರಂ ಮಸಾಲ ಪುಡಿ ೧/೨ ಚಮಚ
ಮೈದಾ ಹಿಟ್ಟು / ಜೋಳದ ಹಿಟ್ಟು ೧ ಕಪ್
ಬೆಳ್ಳುಳ್ಳಿ ಶುಂಟಿ ಪೇಸ್ಟ್ ೧ ಚಮಚ
ಟೊಮೇಟೊ ಸಾಸ್ ೨ಚಮಚ
ಉಪ್ಪು (ರುಚಿಗೆ ತಕ್ಕಷ್ಟು )
ಕೆಂಪು ಮೆಣಸಿನ ಪುಡಿ ೨ಚಮಚ
ಎಣ್ಣೆ ೧ ಕಪ್ (ಕರಿಯಲು)
ಸಕ್ಕರೆ ೧ ಚಮಚ
ಕೊತ್ತುಂಬರಿ ಸೊಪ್ಪು (ಅಲಂಕಾರಕ್ಕೆ )

ಮಾಡುವ ವಿದಾನ :

೧. ಈರುಳ್ಳಿ , ಗೋಬಿ /ಕ್ಯಾಬೇಜ್ ಮತ್ತು ಕೊತ್ತುಂಬರಿ ಸೊಪ್ಪನ್ನು ತೊಳೆದು ಹೆಚ್ಚಿಟ್ಟುಕೊಳ್ಳಿ .
೨. ಬಾಣಲೆ ಗೆ 2 ಚಮಚ ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ತೆಗೆದು ಪಕ್ಕದಲ್ಲಿಡಿ.
೩. ಪಾತ್ರೆಗೆ ಮೈದಾ ಅಥವಾ ಜೋಳದ ಹಿಟ್ಟು , ಮೆಣಸಿನ ಪುಡಿ, ೧ ಚಮಚ ಸಕ್ಕರೆ ,ಉಪ್ಪು ಹಾಕಿ ನೀರು ಬೆರಸಿ ಅದರಲ್ಲಿ ಹುಕೊಸನ್ನು ಅದ್ದಿ ಎಣ್ಣೆಗೆ ಹಾಕಿ ಕರಿದು ಪಕ್ಕದಲ್ಲಿ ತೆಗೆದಿಟ್ಟುಕೊಳ್ಳಿ .
೪. ಬಾಣಲೆಗೆ ೨ ಎಣ್ಣೆ ಚಮಚ ಹಾಕಿ ಕರಿದ ಗೋಭಿ ಮತ್ತು ಕರಿದಿಟ್ಟ ಈರುಳ್ಳಿ ,ಶುಂಟಿ ಬೆಳ್ಳುಳ್ಳಿ ಪೇಸ್ಟ್ ಗರಂ ಮಸಾಲ ಪುಡಿ,ಟೊಮೇಟೊ ಸಾಸ್ ಹಾಕಿ ಮತ್ತೊಮ್ಮೆ ಚೆನ್ನಾಗಿ ಕರಿಯಿರಿ ಮೇಲಿನಿಂದ ಕೊತ್ತುಂಬರಿ ಸೊಪ್ಪನ್ನು ಉದುರಿಸಿ .
ಈಗ ಬಿಸಿಬಿಸಿ ಗೋಬಿ ಮನ್ಚುರಿಯನ್ ಸವಿಯಲು ರೆಡಿ .

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.