ಸಂಗೀತ ಸಮಯ

ಹಾರ್ಮೋನಿಯಂ ಜಗತ್ತು ಮತ್ತೊಮ್ಮೆ ವಿಶ್ವಮನ್ನಣೆಗಳಿಸಿ ಜಗತ್ತಿನಲ್ಲೇ ಸಂಭ್ರಮಿಸುವಂತಾಯಿತು !

ವಿಶಿಷ್ಟ ಚಿಂತನೆಗಳನ್ನೊಳಗೊಂಡ "ವಿಶ್ವ ಸಂವಾದಿನಿ ಶೃಂಗ" ಎಂಬ ಯಶಸ್ವಿ ಕಾರ್ಯಕ್ರಮ

-ನೀತಾ ಬೆಳೆಯೂರು

 

ಕಳೆದ ಜನವರಿ 5,6 ಮತ್ತು 7ರಂದು ಬೆಂಗಳೂರಿನಲ್ಲಿ ಸತತವಾಗಿ ಮೂರು ದಿನಗಳ ಕಾಲ ನಡೆದ ಹಾರ್ಮೋನಿಯಂ ಸೋಲೋ-ಯುಗಳ ವಾದನ, ಬೇರೆ ವಾದ್ಯಗಳ ಜೊತೆ ಹಾರ್ಮೋನಿಯಂ ಜುಗಲ್‍ಬಂದಿ, ವಿವಿಧ ಶೈಲಿಯ ಸಂಗೀತ ಪ್ರಕಾರಗಳನ್ನು ಹಾರ್ಮೋನಿಯಂನಲ್ಲಿ ಪ್ರಸ್ತುತಿ, ವಾದ್ಯ ಒಂದೇ ಆದರೂ ವಿಭಿನ್ನ ಆಯಾಮ,ವಿಷಯ,ವಿಚಾರ ಹಾಗೂ ನುಡಿಸಾಣಿಕೆಯ ಪ್ರದರ್ಶನ ಇಂತಹ ವಿಶಿಷ್ಟ ಚಿಂತನೆಗಳನ್ನೊಳಗೊಂಡ ಹಾರ್ಮೋನಿಯಂ ಸಮ್ಮೇಳನ ನಡೆಯಿತು. ದೇಶ ವಿದೇಶಗಳ ಕಲಾವಿದರ ಉಪಸ್ಥಿತಿಯಲ್ಲಿ “ವಿಶ್ವ ಸಂವಾದಿನಿ ಶೃಂಗ” ಎಂಬ ಹೆಸರಿನ ಈ ಯಶಸ್ವಿ ಕಾರ್ಯಕ್ರಮ ಒಂದು ಜಾಗತಿಕ ಹಬ್ಬವಾಗಿ ಹಾರ್ಮೋನಿಯಂ ಜಗತ್ತು ಮತ್ತೊಮ್ಮೆ ವಿಶ್ವಮನ್ನಣೆಗಳಿಸಿ ಜಗತ್ತಿನಲ್ಲೇ ಸಂಭ್ರಮಿಸುವಂತಾಯಿತು !

 

“ಅರಿವೇ ಗುರುವು, ಗುರುವೇ ಅರಿವು, ಅರಿವು ಮೂಡಿಸುವವನೇ ಸದ್ಗುರುವು”. ಸಂಗೀತ ಕ್ಷೇತ್ರದಲ್ಲಿ ಗುರು-ಶಿಷ್ಯ ಪರಂಪರೆಗೆ ಮಹತ್ವದ ಸ್ಥಾನವಿದೆ. ಹೀಗೆ ಅತ್ಯಂತ ಶ್ರೇಷ್ಠ ಗುರು-ಶಿಷ್ಯ ಪರಂಪರೆಯಲ್ಲಿ ಹಾರ್ಮೋನಿಯಂ ಸಂತ ಪಂಡಿತ್ ರಾಮಭಾವು ಬಿಜಾಪುರೆ ಅವರ ಶಿಷ್ಯರಾಗಿ ಸಂಗೀತಕ್ಕಾಗಿ, ಹಾರ್ಮೋನಿಯಂ ವಾದ್ಯಕ್ಕಾಗಿ ತಮ್ಮನ್ನು ತಾವೇ ಅರ್ಪಿಸಿಕೊಂಡವರಾಗಿ ಸುಪ್ರಸಿದ್ಧ ಹಾರ್ಮೋನಿಯಂ ವಾದಕ ಡಾ.ರವೀಂದ್ರ ಕಾಟೋಟಿಯವರು ತಮ್ಮ ಗುರುಗಳ ಜನ್ಮಶತಮಾನೋತ್ಸವವನ್ನು ವರ್ಷವಿಡೀ ಆಚರಿಸಿ ಸಂಭ್ರಮಿಸಿದರು.

 

ಇದಕ್ಕೆ ಕಿರೀಟಪ್ರಾಯವೆಂಬಂತೆ ‘ವಿಶ್ವ ಸಂವಾದಿನಿ ಶೃಂಗ’ ಎಂಬ ಜಾಗತಿಕ ಮಟ್ಟದ ಹಾರ್ಮೋನಿಯಂ ಮಹಾಪರ್ವವನ್ನು ಆಯೋಜಿಸಿ, ತನ್ಮೂಲಕ ಗುರುವಿಗೆ 100ನೇ ವರ್ಷದ ಹುಟ್ಟು ಹಬ್ಬದಲ್ಲಿ ಗುರು ನಮನವನ್ನು ಸಲ್ಲಿಸಿದ ಧನ್ಯತೆ ಡಾ.ರವೀಂದ್ರ ಕಾಟೋಟಿಯವರದು.

 

ಡಾ.ರವೀಂದ್ರ ಕಾಟೋಟಿಯವರ ಗುರು ಈ ನಾದ ತಪಸ್ವಿ :

 

ಹಾರ್ಮೋನಿಯಂ ಎಂದಾಕ್ಷಣ ನೆನಪಾಗುವ ಹೆಸರು ಪಂಡಿತ್ ರಾಮಭಾವು ಬಿಜಾಪುರೆ, ಹಾರ್ಮೋನಿಯಂ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ. ತಮ್ಮ ಇಡೀ ಜೀವನವನ್ನು ಹಾರ್ಮೋನಿಯಂ ವಾದ್ಯ-ವಾದನಕ್ಕಾಗಿ ಮುಡಿಪಾಗಿಟ್ಟರು. ಹಾರ್ಮೋನಿಯಂ ವಾದನದಲ್ಲಿ ತಮ್ಮದೇ ಆದ ಹೊಸ ಶೈಲಿಯನ್ನು ಸೃಷ್ಟಿಸಿ, ವಾದ್ಯದ ಸೌಂದರ್ಯ ಹೆಚ್ಚಿಸಿದ ಕೀರ್ತಿ ಇವರದ್ದು. 2010ರಲ್ಲಿ ಈ ನಾದ ಜ್ಯೋತಿಯು ಅನಂತದಲ್ಲಿ ಲೀನವಾದರೂ ಅದರ ಪ್ರಭಾವಲಯವಿನ್ನೂ ಚೈತನ್ಯಪೂರ್ಣವಾಗಿ ಹರಡುತ್ತಿಲೇ ಇದೆ !

 

ಋಷಿ ತುಲ್ಯರಿಂದ ಸಂಗೀತ ದೀಕ್ಷೆ, ಛಲಬಿಡದ ಸಾಧನೆ, ವಿಶಿಷ್ಠ ವಾದನ ಶೈಲಿಯ ಅವಿಷ್ಕಾರ, ಐದು ತಲೆಮಾರಿನ ಅತ್ಯುನ್ನತ ವಿದ್ವಾಂಸರ ಸಹವಾಸ, ಸಾಂಗತ್ಯ, 76 ವರ್ಷಗಳ ಸುಧೀರ್ಘ ವಿದ್ಯಾದಾನ ಯಜ್ಞ, ಬಂದಿಶ್‍ಗಳ, ರಾಗ-ರಾಗಿಣಿಗಳ ಸಂಗತಿಗಳ ಸಾಧನೆಯ ಸಾರಸಂಗ್ರಹ ಈ ಕಲಾಸಾಧಕ ದೇಶಾದ್ಯಂತ ಮೆರೆದ ಕಲಾಪ್ರತಿಭೆ. ಸ್ನೇಹಮಯಿಯಾಗಿ ಸಮಾಜಮುಖಿಯಾಗಿ ಅಗಣಿತ ಕಲಾಪ್ರೇಮಿಗಳ ಮನಮುಟ್ಟಿದ ನಾದ ತಪಸ್ವಿ. ಇದು ಪಂಡಿತ್ ರಾಮಭಾವು ಬಿಜಾಪುರೆಯವರ ನಾದ ಪಯಣದ ಸಂಕ್ಷಿಪ್ತ ತುಣುಕು ನೋಟ.

 

ಇಂತಹ ಶ್ರೇಷ್ಠ ಗುರುವಿನ ಜನ್ಮಶತಮಾನೋತ್ಸವವನ್ನು ಡಾ.ರವೀಂದ್ರ ಕಾಟೋಟಿ ತಮ್ಮ ನೇತೃತ್ವದಲ್ಲಿ ತಮ್ಮದೇ ಸಂಸ್ಥೆ ‘ಬಿಜಾಪುರೆ ಹಾರ್ಮೋನಿಯಂ ಫೌಂಡೇಷನ್” ವತಿಯಿಂದ ಗುರುಗಳ ಹುಟ್ಟೂರಾದ ಕಾಗವಾಡದಲ್ಲಿ ಕಾರ್ಯಕ್ರಮ ಆರಂಭಿಸಿ ನಂತರ ಕರ್ನಾಟಕದ ಹಲವಾರು ಕಡೆಗಳಲ್ಲಿ ವಿಸ್ತರಿಸಿದರು. ಗುರುವಿನ ಪ್ರಿಯ ಶಿಷ್ಯ ಡಾ.ರವೀಂದ್ರ ಕಾಟೋಟಿಯವರು ಜನ್ಮಶತಮಾನೋತ್ಸವದ ಸ್ಮರಣಾರ್ಥವಾಗಿ ವಿದೇಶಕ್ಕೂ ಸಂಚರಿಸಿ ಹಾರ್ಮೋನಿಯಂ ಸೋಲೋ ಕಾರ್ಯಕ್ರಮ ನೀಡಿ ತಮ್ಮ ಗುರುಗಳ ಹಾರ್ಮೋನಿಯಂ ವಾದನ ಶೈಲಿಯನ್ನು ಅಲ್ಲಿಯೂ ಸಹ ಮೆರೆಸಿದರು ! ಜನ್ಮಶತಮಾನೋತ್ಸವದ ಕೊನೆಯ ದಿನದಂದು ಶತ ಕಂಠ ಗಾಯನ ಮತ್ತು ಶತ ಸಂವಾದಿನಿ ವಾದನದಿಂದ ಗುರುವಿಗೆ ನಮನ ಸಲ್ಲಿಸಲಾಯಿತು.

 

ಪಡುವಣ ದೇಶ ನಿನ್ನ ತವರೇ, ಈ ಭರತ ಭೂಮಿ ನಿನ್ನಾಶ್ರಯವೇ

 

“ಪಡುವಣ ದೇಶ ನಿನ್ನ ತವರೇ, ಈ ಭರತ ಭೂಮಿ ನಿನ್ನಾಶ್ರಯವೇ” ಎಂಬ ಡಾ.ರವೀಂದ್ರ ಕಾಟೋಟಿಯವರ ಸಾಲುಗಳೇ ಹೇಳುವಂತೆ ಹಾರ್ಮೋನಿಯಂ ಪಾಶ್ಚಿಮಾತ್ಯ ದೇಶದಿಂದ ಭಾರತಕ್ಕೆ ಬಂದ ಕೊಡುಗೆಯಾಗಿದೆ. ಆದರೆ ಇದು ಭಾರತೀಯ ಸಂಗೀತದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂದಿದೆ. ಮೊದಲಿನ ಕಾಲದಲ್ಲಿ ಕೇವಲ ಸಹವಾದನಕ್ಕೆ ಮಾತ್ರ ಮೀಸಲಾಗಿದ್ದ ಈ ವಾದ್ಯವಾದನವು ಕ್ರಮೇಣ ಪಂ|ರಾಮಭಾವು ಬಿಜಾಪುರೆ, ಪಂ|ವಸಂತ್ ಕನಕಾಪುರ್, ಪಂ|ತುಳಸೀದಾಸ್ ಬೋರ್ಕರ್, ಪಂ|ಅಪ್ಪಯ್ಯ ಜಲಗಾವ್ಕರ್ ಮುಂತಾದ ಶ್ರೇಷ್ಠ ಹಾರ್ಮೋನಿಯಂ ಕಲಾವಿದರ ಸತತ ಪರಿಶ್ರಮದಿಂದಾಗಿ ಸಂಗೀತ ವೇದಿಕೆಯ ಎಡ ಬದಿಯಲ್ಲಿ ಇರುತ್ತಿದ್ದ ವಾದ್ಯವಿಂದು ವೇದಿಕೆಯಲ್ಲಿ ಮಧ್ಯಸ್ಥಾನವನ್ನು ಪಡೆಯುತ್ತ ಹಾರ್ಮೋನಿಯಂ ಸೋಲೋ ವಾದನವಾಗಿ ಅದರ ಹೆಚ್ಚಿನ ಸೌಂದರ್ಯ ಜನರನ್ನು ತಲುಪುವಂತಾಗಿದ್ದು ವಿಶೇಷವಲ್ಲವೇ?!

 

Guruvarya Pt. Bijapure on his 93rd birthday with Pt. Tulsidas Borkar……in fact it was their last meeting — with Bijapure Harmonium Foundation

 

World Harmonium Summit – Bijapure Harmonium Foundation – Day 1

https://www.youtube.com/watch?v=7xyjKxHOLHY

World Harmonium Summit – Bijapure Harmonium Foundation – Day 2

https://www.youtube.com/watch?v=5d9bKX8StP4

World Harmonium Summit – Bijapure Harmonium Foundation – Day 3

https://www.youtube.com/watch?v=BznsXPqa-5s

Bijapure Harmonium Foundation Selected Videos

https://www.youtube.com/playlist?list=PL01ilcOJQjCGxQaAroaeu6oJH1QxNb7lw

 

BIJAPURE HARMONIUM FOUNDATION
World Harmonium Summit 2018
5 – 7 JANUARY, 2018, BENGALURU, INDIA

About

To commemorate the birth centenary of the Legendary Harmonium exponent,
Guruvarya Pt. Rambhau Bijapure, Bijarapure Harmonium Foundation welcomes you all to the World Harmonium Summit.

 

The event will be featuring scintillating performance by celebrated and prominent harmonium maestros from across the world.
http://www.harmoniumsummit.in

 

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.