ಬೆಂಗಳೂರು : ಆರ್ ಎಂ ಎಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ 2024 -25ನೇ ಸಾಲಿನ ಮಕ್ಕಳಿಗೆ ಅಧಿಕಾರ ಹಂಚಿಕೆ ಸಮಾರಂಭವನ್ನು ಇಟ್ಟುಕೊಳ್ಳಲಾಗಿತ್ತು. ಮಕ್ಕಳು ತುಂಬಾ ಉತ್ಸುಕರಾಗಿ ತಮ್ಮ ತಮ್ಮ ಅಧಿಕಾರದ ಬ್ಯಾಡ್ಜ್ ಧರಿಸಿ ಹೆಮ್ಮೆಯಿಂದ ಸಂಭ್ರಮಿಸಿದರು.
ಈ ಸಮಾರಂಭಕ್ಕೆ ಶ್ರೀಮತಿ ರತ್ನಮ್ಮ ಎಂ ಶ್ರೀನಿವಾಸ್ ಶಾಲೆಯ ಕಾರ್ಯದರ್ಶಿಗಳು , ಇವರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಾಮನ್ ಬೆಲನ್ ಆರ್ ಎಂ ಎಸ್ ಪದವಿ ಕಾಲೇಜು, ಪ್ರಾಂಶುಪಾಲರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು . ಅಲ್ಲದೆ ಶ್ರೀಮತಿ ಸಂಧ್ಯಾ ರಘು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು , ಶ್ರೀಮತಿ ಸುಮಾ ಪ್ರಸಾದ್ ಶಾಲೆಯ ಪ್ರಾಂಶುಪಾಲರು ಮತ್ತು ಶ್ರೀ ಸೂರ್ಯಪ್ರಕಾಶ್ ರವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಜ್ಞಾನ ದೀಪಿಕೆ – 10 ( ಸಿರಿ ಕನ್ನಡ -10) ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಇದನ್ನು ಸಿಬಿಎಸ್ಸಿ 10ನೇ ತರಗತಿಯ ದ್ವಿತೀಯ ಭಾಷೆ ಕನ್ನಡ ತೆಗೆದುಕೊಂಡ ಮಕ್ಕಳಿಗೆ ಅನುಕೂಲವಾಗಲೆಂದು ತಯಾರಿಸಲಾಗಿದೆ.
ಇದು ಸಿರಿ ಕನ್ನಡ -10 ಪುಸ್ತಕದ ಎಲ್ಲ ಪಾಠಗಳ ಮತ್ತು ಪದ್ಯಗಳ ಪ್ರಶ್ನೋತ್ತರಗಳನ್ನು, ವ್ಯಾಕರಣವನ್ನು ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ . ಇದು ಮಕ್ಕಳ ಓದಿಗೆ ಸಹಕಾರಿಯಾಗಲಿದೆ. ಇದನ್ನು ಇದೇ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಮಧು ಆನಂದ್ , ಶ್ರೀಮತಿ ಸುನಂದ ಎಚ್ಎಸ್, ಶ್ರೀಮತಿ ಸುಜಾತ ಎಂ ಡಿ ಮತ್ತು ಕವಿತಾ ವಿ ಬಣಕಾರ ಅವರು ಹೊರ ತಂದಿದ್ದಾರೆ.
ಸಮಾರಂಭದ ಅತಿಥಿಗಳು ಹೀಗೆಯೇ ಹೆಚ್ಚು ಹೆಚ್ಚು ಪುಸ್ತಕಗಳನ್ನು ಹೊರ ತರುವಂತೆ ಹಾರೈಸಿ. ಶುಭ ಕೋರಿದರು . ಸಮಾರಂಭದಲ್ಲಿ ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.