ವಿಚಾರಲಹರಿ

ಅಂಧರ ಬಾಳಿಗೆ ಬೆಳಕಾಗುವ ಈ ಕೈಂಕರ್ಯದಲ್ಲಿ ನೀವೂ ನೆರವಾಗಿ

ಪ್ರತಿಬಿಂಬ ಟ್ರಸ್ಟ್ ತನ್ನ ಆಶಯದಂತೆ ಆಡಿಯೋ ಪುಸ್ತಕಗಳನ್ನು ಮುದ್ರಿಸಿ ಸುಗಮ್ಯ ಡಿಜಿಟಲ್ ಲೈಬ್ರರಿಯ ಮೂಲಕ "ಧ್ವನಿಧಾರೆ"ಯ ಹೆಸರಿನಲ್ಲಿ ಉಚಿತವಾಗಿ ಅಂಧರಿಗೆ ತಲುಪಿಸಲು ಯೋಜನೆ ರೂಪಿಸಿದೆ

ಕಳೆದ ತಿಂಗಳ 15ನೇ ತಾರೀಖಿನಂದು ಅಧಿಕೃತವಾಗಿ Dr H.N Kalakshetra ದಲ್ಲಿ ಜರುಗಿದ “ಸ್ವರಝೇಂಕಾರ” ಕಾರ್ಯಕ್ರಮದಲ್ಲಿ ಉದ್ಘಾಟನೆಗೊಂಡ ಪ್ರತಿಬಿಂಬ ಟ್ರಸ್ಟ್ ತನ್ನ ಆಶಯದಂತೆ ಆಡಿಯೋ ಪುಸ್ತಕಗಳನ್ನು ಮುದ್ರಿಸಿ ಸುಗಮ್ಯ ಡಿಜಿಟಲ್ ಲೈಬ್ರರಿಯ ಮೂಲಕ “ಧ್ವನಿಧಾರೆ”ಯ ಹೆಸರಿನಲ್ಲಿ ಉಚಿತವಾಗಿ ಅಂಧರಿಗೆ ತಲುಪಿಸಲು ಯೋಜನೆ ರೂಪಿಸಿದೆ.‌ ಈ ವಿಷಯವಾಗಿ “ಧ್ವನಿಧಾರೆ”ಯನ್ನು ಸಹೃದಯರ ಸಮ್ಮುಖದಲ್ಲಿ‌ ದೀಪಾ ಅಕಾಡೆಮಿ ಫ಼ಾರ್ ಡಿಫರೆಂಟ್ಲಿ ಏಬಲ್ಡ್ ಹೆಸರಿನ ಅಂಧಮಕ್ಕಳ ಶಾಲೆಯಲ್ಲಿ ಇಂದು ಸಂಜೆ 5 ಗಂಟೆಗೆ ಉದ್ಘಾಟಿಸಲಾಯಿತು. ಈ ಮೂಲಕ ಅಲ್ಲಿನ ವಿಧ್ಯಾರ್ಥಿಗಳಿಗೆ “ಧ್ವನಿಧಾರೆ”ಯ ಎಲ್ಲಾ ಪುಸ್ತಕಗಳೂ ಉಚಿತವಾಗಿ ಬಳಕೆಗೆ ನಿಲುಕುವಂತೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ದೀಪಾ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕರಾದ ಶ್ರೀ. ಶಾಂತಾರಾಂ, ರೇಡಿಯೋ ದನಿಯಾಗಿ ಎಲ್ಲರಿಗೂ ಚಿರಪರಿಚಿತರಾದ ಆಶಾ ವಿಶ್ವನಾಥ್, ಅಂತರಾಳ ತಂಡದ ಸದಸ್ಯರಾದ ರಾಜಾ ಶಶಿಧರ್ ಹಾಗು ಕೋಲಾರ ಜಿಲ್ಲೆಯ ನಿವೃತ್ತ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ಶ್ರೀಮತಿ ನಾಗಮಣಿ ಅತಿಥಿಗಳಾಗಿ ಭಾಗವಹಿಸಿ ಪ್ರತಿಬಿಂಬ ಟ್ರಸ್ಟ್ನ ಧ್ಯೇಯೋದ್ದೇಶಗಳನ್ನು ಶ್ಲಾಘಿಸಿದರು.

ಧ್ವನಿಧಾರೆಯ ಪ್ರಯೋಜನವನ್ನು ಅಂಧರ ಏಳಿಗೆಗಾಗಿ ಶ್ರಮಿಸುತ್ತಿರುವ ಸಂಘಸಂಸ್ಥೆಗಳೂ, ಅಂಧಶಾಲೆಗಳೂ ಉಚಿತವಾಗಿ ಪಡೆಯಬಹುದಾಗಿದ್ದು ಹೆಚ್ಚಿನ ಮಾಹಿತಿಗೆ 9353213946 ಈ ನಂಬರನ್ನು ಸಂಪರ್ಕಿಸಬಹುದು.

 

Related Articles

Back to top button

Adblock Detected

Kindly unblock this website.