ವಿಚಾರಲಹರಿ

ಪ್ರತಿಬಿಂಬ ಟ್ರಸ್ಟ್ ವತಿಯಿಂದ ‌ಅಂಧರಿಗಾಗಿ ಧ್ವನಿಮುದ್ರಿಸಲಾದ “ಧ್ವನಿಧಾರೆ- ಧ್ವನಿಸುವ ಅಕ್ಷರಲೋಕ” ದ ಆಡಿಯೋ ಪುಸ್ತಕ ಮಾಲಿಕೆಯ ಬಿಡುಗಡೆ ಸಮಾರಂಭ

ಕಳೆದ ತಿಂಗಳ 15ನೇ ತಾರೀಖಿನಂದು ಅಧಿಕೃತವಾಗಿ Dr H.N Kalakshetra ದಲ್ಲಿ ಜರುಗಿದ “ಸ್ವರಝೇಂಕಾರ” ಕಾರ್ಯಕ್ರಮದಲ್ಲಿ ಉದ್ಘಾಟನೆಗೊಂಡ ಪ್ರತಿಬಿಂಬ ಟ್ರಸ್ಟ್ ತನ್ನ ಆಶಯದಂತೆ ಆಡಿಯೋ ಪುಸ್ತಕಗಳನ್ನು ಮುದ್ರಿಸಿ ಸುಗಮ್ಯ ಡಿಜಿಟಲ್ ಲೈಬ್ರರಿಯ ಮೂಲಕ ಉಚಿತವಾಗಿ ಅಂಧರಿಗೆ ತಲುಪಿಸಲು ಯೋಜನೆ ರೂಪಿಸಿದೆ.‌ ಈ ವಿಷಯವಾಗಿ “ಧ್ವನಿಧಾರೆ” ಯನ್ನು ಗುರು‌ಹಿರಿಯರ ಸಮ್ಮುಖದಲ್ಲಿ‌ ದೀಪಾ ಚಾರಿಟಬಲ್ ಟ್ರಸ್ಟ್ ಹೆಸರಿನ ಅಂಧಮಕ್ಕಳ ಶಾಲೆಯಲ್ಲಿ ಇದೇ ತಿಂಗಳ 24 ನೇ ತಾರೀಖಿನಂದು ಸಂಜೆ 5 ಗಂಟೆಗೆ ಉದ್ಘಾಟಿಸುವ ಮೂಲಕ ಅಲ್ಲಿನ ವಿಧ್ಯಾರ್ಥಿಗಳು ಬಳಕೆಗೆ ನಿಲುಕುವಂತೆ ಮಾಡಲಾಗುತ್ತಿದೆ.

ಧ್ವನಿಧಾರೆಯ ಪ್ರಯೋಜನವನ್ನು ಅಂಧರ ಏಳಿಗೆಗಾಗಿ ಶ್ರಮಿಸುತ್ತಿರುವ ಸಂಘಸಂಸ್ಥೆಗಳೂ, ಅಂಧಶಾಲೆಗಳೂ ಉಚಿತವಾಗಿ ಪಡೆಯಬಹುದಾಗಿದ್ದು ಹೆಚ್ಚಿನ ಮಾಹಿತಿಗೆ 9353213946 / 9483816419 ಈ ನಂಬರನ್ನು ಸಂಪರ್ಕಿಸಬಹುದು

Audio Book Of Pratibimba Trust Going To Relaese 1ಪ್ರತಿಬಿಂಬ ಟ್ರಸ್ಟ್
ಪ್ರತಿಬಿಂಬ – ವಿಷಯದ ಅಂತರಂಗಕ್ಕೊಂದು ಕೈಗನ್ನಡಿ

ಕಳೆದ ಒಂದುವರೆ ವರ್ಷದಿಂದ ಫ಼ೇಸ್ಬುಕ್, ಯೂಟ್ಯೂಬ್ ಮೂಲಕ ಹಲವಾರು ಚಿಂತನಾರ್ಹ
ವಿವರಗಳನ್ನ ತಿಳಿಸುತ್ತಿದ್ದ ಸ್ನೇಹಕುಟೀರ ಈಗ ಪ್ರತಿಬಿಂಬ ಟ್ರಸ್ಟ್ ಆಗಿದೆ. ಸಮಾನ ಮನಸ್ಕ
ಸಾಹಿತ್ಯಾಸಕ್ತರೂ, ಸ್ನೇಹಿತರೂ, ಆಕಾಶವಾಣಿ FMRainbow ದಲ್ಲಿ RJ ಗಳೂ ಆದ ಐವರು
ಸೇರಿ‌ ಕಟ್ಟಿದ ಸ್ನೇಹಕುಟೀರವೇ ಪ್ರತಿಬಿಂಬ ಟ್ರಸ್ಟ್ .

ವ್ಯವಸ್ಥಾಪಕ ನಿರ್ದೇಶಕರು – ಜ್ಯೋತಿ ಪ್ರಶಾಂತ್
ಖಜಾಂಚಿ – ನಾಗರಾಜ್ ವಸಿಷ್ಠ
ಟ್ರಸ್ಟೀಗಳು
ಅಮೂಲ್ಯ ಎಸ್
ತೇಜ ಅನ್ನದಾನಯ್ಯ

ಧ್ವನಿಧಾರೆ – ಧ್ವನಿಸುವ ಅಕ್ಷರಲೋಕ (Audio books)

ನಮ್ಮ ಮೂಲ ಧ್ಯೇಯೋದ್ದೇಶ ನಮ್ಮಂತೆಯೇ ಸಾಹಿತ್ಯಾಸಕ್ತರಾದ ಅಂಧರಿಗೆ ಕನ್ನಡ ಸಾಹಿತ್ಯ ಲೋಕ ಭಂಡಾರವನ್ನ ಆಡಿಯೋ ಪುಸ್ತಕ ರೂಪದಲ್ಲಿ ಯಾವುದೇ ಶುಲ್ಕವಿಲ್ಲದೆ ತಲುಪಿಸುವುದು.

ವರ್ಣಬಿಂಬ ಧ್ವನಿಧಾರೆಯ ಸ್ವರೂಪಕ್ಕೆ ಸಹಕರಿಸಬಯಸುವ ಸಹೃದಯರಿಗಾಗಿ ನಾವು ನಡೆಸಲಾಗುವ ತರಬೇತಿ.

ಎಲ್ಲಾ‌ ವಯೋಮಾನದವನ್ನೂ ರಂಜಿಸುವ ಹಾಗು ಸಾತ್ವಿಕ ಚಿಂತನೆಗೆ ಒಡ್ಡಿಕೊಳ್ಳುವ ರೀತಿಯಲ್ಲಿ ನಮ್ಮ ಮೂಲ ಬೇರುಗಳನ್ನು ನೆನಪಿಸುವ ಹಲವು ಕಾರ್ಯಕ್ರಮಗಳ ರಚನೆ ಹಾಗು ಅನುಷ್ಠಾನ. ಆ ಮೂಲಕ ಧ್ವನಿಧಾರೆಯ ಖರ್ಚು ವೆಚ್ಚಗಳನ್ನು ಭರಿಸುವ ಯೋಜನೆಯಿದೆ

ಆಡಿಯೋ ಪುಸ್ತಕದ ಪ್ರಭಾವ
ದೃಷ್ಠಿವಿಶೇಷಚೇತನ ಸಾಹಿತ್ಯಾಸಕ್ತರಿಗೆ ಸುಲಭ ಮಾರ್ಗದಲ್ಲಿ ಕನ್ನಡ ಸಾಹಿತ್ಯ ಲೋಕದ ಎಲ್ಲ ದಿಗ್ಗಜರ ಪುಸ್ತಕಗಳನ್ನೂ ಆಲಿಸಿಅರ್ಥಮಾಡಿಕೊಳ್ಳಲು ಸಹಾಯಕವಾಗಿದೆ.
ಪರೀಕ್ಷೆಗಳಿಗೆ ತಯಾರಾಗುವವರೂ, ಸಮಯ ಕಳೆಯಲು ಕಥೆ ಕಾದಂಬರಿಗಳನ್ನು ಓದಲು ಬಯಸುವವರೂ, ಕನ್ನಡ ಸಾಹಿತ್ಯಸಂಶೋಧಕರಿಗೂ ಇದೊಂದು ವರದಾನವಾಗಲಿದೆ.

ನಾಗರಾಜ್ ವಸಿಷ್ಠ
ಪ್ರತಿಬಿಂಬ ಟ್ರಸ್ಟ್
ಬೆಂಗಳೂರು
9483816419/9353213946

Audio Book Of Pratibimba Trust Going To Relaese 4

Audio Book Of Pratibimba Trust Going To Relaese 3 Audio Book Of Pratibimba Trust Going To Relaese 5 Audio Book Of Pratibimba Trust Going To Relaese 6 Audio Book Of Pratibimba Trust Going To Relaese 2

Back to top button

Adblock Detected

Please consider supporting us by disabling your ad blocker