ಮೌಜೀಂ ಯಜ್ನೋಪವೀತ: ಚ ನವದಂಡಂಚ ಧಾರ0iÉುೀತ್ |ಅಜಿನಂ ಕಟಿಸೂತ್ರಂಚ ನವವಸ್ತ್ರಂ ತಥೈವಚ || ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುವುದು. ಈ ದಿನ ಹಳೆಯ ಜನಿವಾರ(ಯಜ್ನೋಪವೀತ)ವನ್ನು ತೆಗೆದು ಹೊಸ ಜನಿವಾರವನ್ನು ಧರಿಸಬೇಕು.
ಜನಿವಾರ ಯಾಕೆ ಧರಿಸಬೇಕು?
ಜನಿವಾರ ಧಾರಣೆಯು ಸನಾತನ ಸಂಪ್ರದಾಯವಾಗಿದೆ. ಭಗವಂತನು ಯಜ್ನಸ್ವರೂಪಿ.ಅವನನ್ನು ಸೇರುವುದಕ್ಕಾಗು ಧರಿಸುವ ಯಜ್ನಸೂತ್ರವೇ ಯಜ್ನೋಪವೀತ ಅಥವಾ ಜನಿವಾರ. ಇದನ್ನು ಧರಿಸಿದರೆ ದು:ಖ ನಾಶವಾಗುತ್ತದೆ, ಕಷ್ಟಗಳು ದೂರ ಸರಿಯುತ್ತವೆ,ಆತ್ಮಶಕ್ತಿ ವೃದ್ಧಿಸುವುದು, ಅಕಾಲಮೃತ್ಯುವಿಗೆ ಅವಕಾಶವಿರುವುದಿಲ್ಲ ಎಂದು ನಾರಾಯಣ ಉಪನಿಶತ್ತಿನಲ್ಲಿ ಉಕ್ತವಾಗಿದೆ.
“ ಯಜ್ನೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯ: ಸಹಜಂ ಪುರಸ್ತಾತ್ ಆಯುಷ್ಯಮಗ್ರ್ಯಂ ಪ್ರತಿಮುಂಚ ಶುಭ್ರಂಯಜ್ನೋಪವೀತಂ ಬಲಮಸ್ತು ತೇಜ: ||”
ಈ ಮಂತ್ರವನ್ನು ಹೇಳುತ್ತಾ ಪ್ರತಿದಿನ ಜನಿವಾರಕ್ಕೆ ನಮಿಸಿದರೆ ಶುಭವೂ, ಅಭಿವೃದ್ಧಿಯೂ, ಗೌರವವೂ, ಶಾಂತಿ, ಸಂಪತ್ತು, ನೆಮ್ಮದಿ ಲಭಿಸುತ್ತದೆ ಎಂದು ಯಜುರ್ವೇದದಲ್ಲಿ ಹೇಳಲ್ಪಟ್ಟಿದೆ. ಮೂರು ದಾರಗಳಿರುವ ಈ ಜನಿವಾರದಲ್ಲಿ ಒಂದು ದಾರ ಶಾಂತಿಯನ್ನೂ, ಒಂದು ಪವಿತ್ರತೆಯನ್ನೂ, ಒಂದು ತೇಜಸ್ಸನ್ನೂ ಸೂಚಿಸುತ್ತದೆ.
ಮೂರುದಾರಗಳನ್ನು ಸೇರಿಸಿ ಹಾಕಿರುವ ಗಂಟಿಗೆ “ಬ್ರಹ್ಮ ಗಂಟು” ಎನ್ನುತ್ತಾರೆ. ಹುಡುಗನ ಎಂಟನೇ ವಯಸ್ಸಿನಲ್ಲಿ ಉಪನಯನ ಸಂಸ್ಕಾರ ಮಾಡಬೇಕು.
ಉಪನಯನ ಸಂಸ್ಕಾರದಲ್ಲಿ ಈ ಜನಿವಾರವನ್ನು ವಟು(ಬ್ರಹ್ಮಚಾರಿ)ವಿಗೆ ಹಾಕುತ್ತಾರೆ. `ಉಪ’ ಅಂದರೆ `ಹತ್ತಿರ’.
`ನಯನಮ್’ ಎಂದರೆ ಕಳಿಸುವುದು ಎಂದರ್ಥ. ಉಪನಯನ ಎಂದರೆ ಗುರುಗಳ ಹತ್ತಿರ ವಿದ್ಯಾಭ್ಯಾಸಕ್ಕಾಗಿ ಕಳಿಸುವುದು.
ಉಪನಯನದಿಂದ ಬ್ರಹ್ಮಚಾರಿಗೆ ವೇದಾಭ್ಯಾಸದ ಅಧಿಕಾರ ಸಿಗುತ್ತದೆ. ಜನಿವಾರ ಇದ್ದರೆ ಅವನಿಗೆ ಉಅಪನಯನವಾಗಿದೆ ಎಂದರ್ಥ.
ಈ ದಿನ ಯಾರು ಏನು ಧರಿಸಬೇಕು?
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ,ವಿಶ್ವಕರ್ಮ,ದೇವಾಂಗ ಜಾತಿಯವರು ತಪ್ಪದೇ ಈ ದಿನ ಹೊಸ ಜನಿವಾರ ತೊಡಬೇಕು.ಬೇರೆ ಜಾತಿಯವರು ಹೊಸ “ಉಡುದಾರ” ಧರಿಸಬೇಕು. ಸ್ತ್ರೀಯರು ಹೊಸ ವಸ್ತ್ರವನ್ನು ಧರಿಸಬೇಕು. ಯತಿಗಳೂ, ಸನ್ಯಾಸಿಗಳೂ ಹೊಸ ದಂದವನ್ನೂ, ನೂತನ ಜಪಮಾಲೆಯನ್ನೂ ಸ್ವೀಕರಿಸಬೇಕು.
ಇದೇ ದಿನ ರಕ್ಷಾಬಂಧನ ?ಹೌದು ಇಂದೇ ರಕ್ಷಾಬಂಧನ. “ಅಕ್ಕ-ತಂಗಿಯರು ಅಣ್ಣ-ತಮ್ಮಂದಿರಿಗೆ ಮಾತ್ರ ರಾಖಿ ಕಟ್ಟುತ್ತಾರೆ”ಎಂಬುದು ಸುಳ್ಳು. ಅಜ್ಜಿ ಮೊಮ್ಮಗನಿಗೆ, ತಾಯಿ ಮಗನಿಗೆ, ಸಹೋದರಿಯರು ಸಹೋದರರಿಗೆ, ಹೆಂಡತಿ ಗಂಡನಿಗೆ `ನನ್ನನ್ನು ದುಷ್ಟ ಜನರಿಂದ ರಕ್ಷಿಸು ಹಾಗೂ ನಿನಗೆ ದುಷ್ಟ ಶಕ್ತಿಗಳಿಂದ ತೊಂದರೆ ಬಾರದಿರಲಿ’ ಎಂದು ಕಟ್ಟುವ ಕಂಕಣವೇ “ರಾಖಿ”. ಆದರೆ ಈಗಿನ ದಿನಗಳಲ್ಲಿ ಸಹೋದರಿಯರು ಸಹೋದರರಿಗೆ ಮಾತ್ರ ರಾಖಿ ಕಟ್ಟುವುದು ರೂಢಿಯಲ್ಲಿದೆ.
0iÉುೀನಬದ್ಧೋ ಬಲೀರಾಜಾ ದಾನವೇಂದ್ರೋ ಮಹಾಬಲ: |ತೇನ ತ್ವಾಮ್ ಅಭಿಬಧ್ನಾಮಿ ರಕ್ಷ ಮಾಚಲ ಮಾಚಲ ||
ಎಂದು ಹೇಳಿ ಸ್ತ್ರೀಯರು ಪುರುಷರಿಗೆ ಕಟ್ಟಬೇಕು. ರಾಖಿಯು ಅಲಂಕಾರಯುಕ್ತವಾಗಿ0iÉುೀ ಇರಬೇಕೆಂದಿಲ್ಲ. ಒಂದು ಅರಿಶಿನದ ದಾರವನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿ ಕಟ್ಟಿದರೆ ಅದೂ ಕೂಡ ರಾಖಿಯ ಮಹತ್ವವನ್ನು ಪಡೆಯುತ್ತದೆ.