ಹೊಸ ಪರಿಚಯ

ಕಿರೀಟಿ ಹುಟ್ಟುಹಬ್ಬಕ್ಕೆ ಟೈಟಲ್ ಉಡುಗೊರೆ – ಏಕಕಾಲದಲ್ಲಿ ನಾಲ್ಕು ಭಾಷೆಯಲ್ಲಿ ಲಾಂಚ್ ಆಗ್ತಿದ್ದಾರೆ ಯುವನಟ

ಚಂದನವನಕ್ಕೆ ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾಗಿದೆ. ಅದ್ಧೂರಿಯಾಗಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಎಸ್.ಎಸ್. ರಾಜಮೌಳಿ ಕಿರೀಟಿಗೆ ಸಾಥ್ ನೀಡಿ ಪ್ರೋತ್ಸಾಹಿಸಿದ್ದು ಗೊತ್ತೇ ಇದೆ. ಇಂಟ್ರಡಕ್ಷನ್ ಟೀಸರ್ ಮೂಲಕ ಗಮನ ಸೆಳೆದಿರೋ ಕಿರೀಟಿ ಒಂದೇ ನೋಟಕ್ಕೆ ಎಲ್ಲರನ್ನು ಸೆಳೆದಿದ್ದಾರೆ. ಸ್ಯಾಂಡಲ್ ವುಡ್ ಅಂಗಳಕ್ಕೆ ಭರವಸೆಯ ನಾಯಕ ನಟನಾಗುತ್ತಾನೆ ಎಂಬ ಭವಿಷ್ಯ ವಾಣಿಯೂ ಕೇಳಿ ಬಂದಿವೆ. ಎಲ್ಲರ ಪ್ರೋತ್ಸಾಹದ ನುಡಿಗಳೊಂದಿಗೆ ಯಂಗ್ ಅಂಡ್ ಎನರ್ಜಿಟಿಕ್ ಕಿರೀಟಿ ಮೊದಲ ಚಿತ್ರದ ಚಿತ್ರೀಕರಣದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಸದ್ಯ ಕಿರೀಟಿ ಮೊದಲ ಚಿತ್ರದಿಂದ ಲೇಟೆಸ್ಟ್ ಅಪ್ ಡೇಟ್ ಹೊರಬಿದ್ದಿದೆ. ಅದುವೇ ಚಿತ್ರದ ಟೈಟಲ್.

ಎಸ್. ಕಿರೀಟಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟು ಚಿತ್ರೀಕರಣದಲ್ಲಿ ತೊಡಗಿದ್ರು ಕೂಡ ಇಲ್ಲಿವರೆಗೂ ಸಿನಿಮಾದ ಟೈಟಲ್ ಅನಾವರಣ ಆಗಿರಲಿಲ್ಲ. ಫೈನಲಿ ಸಿನಿಮಾ ತಂಡ ಟೈಟಲ್ ರಿವೀಲ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಅದು ಒಂದು ವಿಶೇಷ ದಿನದಂದು. ಹೌದು, ನಾಳೆ ಕಿರೀಟಿ ಹುಟ್ಟುಹಬ್ಬ. ಈ ದಿನವೇ ಚಿತ್ರದ ಟೈಟಲ್ ರಿವೀಲ್ ಮಾಡಬೇಕು ಅನ್ನೋದು ಚಿತ್ರತಂಡದ ಪ್ಲ್ಯಾನ್.
ಆದ್ರಿಂದ ಸೆಪ್ಟೆಂಬರ್ 29ರಂದು ಅಂದ್ರೆ ನಾಳೆ ಸಂಜೆ 6.39ಕ್ಕೆ ವಾರಾಹಿ ಚಲನಚಿತ್ರ ಯೂಟ್ಯೂಬ್ ಚಾನೆಲ್ ನಲ್ಲಿ ಕಿರೀಟಿ ಮೊದಲ ಚಿತ್ರದ ಟೈಟಲ್ ಲಾಂಚ್ ವೀಡಿಯೋ ಬಿಡುಗಡೆಯಾಗೋದು ಫಿಕ್ಸ್ ಆಗಿದೆ.

ರಾಧಾಕೃಷ್ಣ ರೆಡ್ಡಿ ನಿರ್ದೇಶನ ಸಾರಥ್ಯದಲ್ಲಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದೆ. ಇದು ವಾರಾಹಿ ಸಂಸ್ಥೆಯ 15ನೇ ಸಿನಿಮಾ ಕೂಡ ಆಗಿದ್ದು ಅಷ್ಟೇ ಅದ್ದೂರಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಕನ್ನಡ, ತೆಲುಗು,ತಮಿಳು, ಮಲಯಾಳಂ, ನಾಲ್ಕು ಭಾಷೆಯಲ್ಲಿ ನಿರ್ಮಾಣವಾಗುತ್ತಿರೋ ಈ ಚಿತ್ರದ ಮೂಲಕ ಕಿರೀಟಿ ಏಕಕಾಲದಲ್ಲಿ ನಾಲ್ಕು ಇಂಡಸ್ಟ್ರಿಗೆ ಹೀರೋ ಆಗಿ ಲಾಂಚ್ ಆಗ್ತಿದ್ದಾರೆ.

ಚಿತ್ರದಲ್ಲಿ ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್ ಮುಖ್, ಶ್ರೀಲೀಲಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಚಿತ್ರದ ತಾಂತ್ರಿಕ ವರ್ಗ ಕೂಡ ಶ್ರೀಮಂತವಾಗಿದ್ದು ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ, ಬಾಹುಬಲಿ ಸಿನಿಮಾದ ಕಣ್ಣು ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣ, ರವೀಂದರ್ ಕಲಾ ನಿರ್ದೇಶನ, ಭಾರತದ ಟಾಪ್ ಸ್ಟಂಟ್ ಡೈರೆಕ್ಟರ್ ಪೀಟರ್ ಹೆನ್ ಆಕ್ಷನ್ ಚಿತ್ರಕ್ಕಿದೆ.

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.