ಹೊಸ ಪರಿಚಯ

‘ಲೈಗರ್’ ಸಿನಿಮಾದ ಖಡಕ್ ಖಳನಾಯಕ ಇವ್ರೇ…ವಿಜಯ್ ದೇವರಕೊಂಡ ಎದುರು ಅಬ್ಬರಿಸಲಿದ್ದಾರೆ ವಿಶ್

ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್ ಕಾಂಬಿನೇಷನ್ ‘ಲೈಗರ್’ ಸಿನಿಮಾ ರಿಲೀಸ್ ಗೆ ಇನ್ನೇನೂ ದಿನಗಣನೆ ಶುರುವಾಗಿದೆ. ಇದೇ 25ರಂದು ಪಂಚ ಭಾಷೆಯಲ್ಲಿ ಚಿತ್ರ ಮೆರವಣಿಗೆ ಹೊರಡಲಿದೆ. ಬಾಕ್ಸರ್ ಆಗಿ ಅಬ್ಬರಿಸಲಿರುವ ವಿಜಯ್ ಎದುರು ವಿಶ್ ಎಂಬ ಯುವ ನಟ ಖಳನಾಯಕನಾಗಿ ತೊಡೆ ತಟ್ಟಲಿದ್ದಾರೆ. ಪುರಿ ಕನೆಕ್ಟ್ಸ್ ಪ್ರೊಡಕ್ಷನ್ ಹೌಸ್ ನ ಸಿಇಒ ಕೆಲಸ ಮಾಡಿರುವ, ಸಾಕಷ್ಟು ಸಿನಿಮಾಗಳಿಗೆ ತೆರೆಹಿಂದೆ ದುಡಿದಿರುವ ವಿಶ್ ಲೈಗರ್ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಡ್ತಿದ್ದಾರೆ. ಬಾಕ್ಸಿಂಗ್ ರಿಂಗ್ ನಲ್ಲಿ ವಿಶ್ ವಿಜಯ್ ಎದುರು ಪೈಪೋಟಿ ನಡೆಸಲಿದ್ದಾರೆ.

ಪುರಿ ಕನೆಕ್ಟ್ಸ್ ಹಾಗೂ ಧರ್ಮ ಪ್ರೊಡಕ್ಷನ್ ನಡಿ ರೆಡಿಯಾಗಿರುವ ಪ್ಯಾನ್ ಇಂಡಿಯಾ ಚಿತ್ರ ಲೈಗರ್ ಗೆ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದು, ವಿಜಯ್ ಗೆ ಜೋಡಿಯಾಗಿ ಅನನ್ಯ ಪಾಂಡೇ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಗೆ ಬರಲಿದೆ. ಈ ಚಿತ್ರದಿಂದ ವಿಜಯ್ ವೃತ್ತಿ ಜೀವನಕ್ಕೆ ಮೈಲೇಜ್ ಸಿಗುವ ಸಾಧ್ಯತೆ ಇದೆ. ಬಾಕ್ಸಿಂಗ್ ಲೋಕದ ದಿಗ್ಗಜ ಮೈಕ್ ಟೈಸನ್ ಕೂಡ ನಟಿಸಿದ್ದು, ರಮ್ಯಾ ಕೃಷ್ಣ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಾರಾಗಣ: ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ, ರಮ್ಯಾ ಕೃಷ್ಣನ್, ರೋನಿತ್ ರಾಯ್, ವಿಶು ರೆಡ್ಡಿ, ಅಲಿ, ಮಕರಂದ್ ದೇಶ್ ಪಾಂಡೆ ಮತ್ತು ಗೆಟಪ್ ಶ್ರೀನು.

ತಾಂತ್ರಿಕ ಸಿಬ್ಬಂದಿ:
ನಿರ್ದೇಶಕ: ಪುರಿ ಜಗನ್ನಾಥ್
ನಿರ್ಮಾಪಕರು: ಪುರಿ ಜಗನ್ನಾಥ್, ಚಾರ್ಮಿ ಕೌರ್, ಕರಣ್ ಜೋಹರ್, ಹಿರೂ ಯಶ್ ಜೋಹರ್ ಮತ್ತು ಅಪೂರ್ವ ಮೆಹ್ತಾ
ಬ್ಯಾನರ್: ಪುರಿ ಕನೆಕ್ಟ್ಸ್ ಮತ್ತು ಧರ್ಮ ಪ್ರೊಡಕ್ಷನ್ಸ್
ಛಾಯಾಗ್ರಾಹಕ: ವಿಷ್ಣು ಶರ್ಮಾ
ಕಲಾ ನಿರ್ದೇಶಕ: ಜಾನಿ ಶೇಕ್ ಬಾಷಾ
ಸಂಪಾದಕ: ಜುನೈದ್ ಸಿದ್ದಿಕಿ
ಸಾಹಸ ನಿರ್ದೇಶಕ: ಕೇಚ

Back to top button

Adblock Detected

Kindly unblock this website.