ಪರಿಸರಪ್ರವಾಸ

ಪರಿಸರ ಮತ್ತು ವಾತಾವರಣ – ಸಮತೋಲನ

ಶ್ರೀ ನರೇಂದ್ರ ಮೋದಿಯವರು ಹೇಳುತ್ತಾರೆ, “ಗುಜರಾತ್ ರಾಜ್ಯವನ್ನು ಮುಂದಿನ ಪೀಳಿಗೆ ಜೀವಿಸಲು ಅತ್ಯುತ್ತಮ ರಾಜ್ಯವನ್ನಾಗಿ ಮಾಡಬಯಸುತ್ತೇನೆ.”ಪರಿಸರದ ಮತ್ತು ಪ್ರಾಕೃತಿಕ ಸಂಪತ್ತು ರಕ್ಷಣೆಯ ಜೊತೆಗೆ ಆರ್ಥಿಕ ಬೆಳವಣಿಗೆ ನಿರಂತರವಾಗಿ ಸಾಗುವುದನ್ನು ದೃಢಪಡಿಸಿಕೊಳ್ಳಲು ನರೇಂದ್ರ ಮೋದಿ ಅವರು ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈ ಯೋಜನೆಗೆ ಎರಡು ಆಯಾಮಗಳಿವೆ – ಪರಿಸರ ಮತ್ತು ಮಾಲಿನ್ಯ ನಿಯಂತ್ರಣ.

ಪರಿಸರ ರಕ್ಷಿಸಲು ಉದ್ಯಮಿಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ, ನಗರಗಳಲ್ಲಿ ಮತ್ತು ಅರೆ ನಗರ ಪ್ರದೇಶಗಳಲ್ಲಿ ಮಾಲಿನ್ಯದ ಮಟ್ಟವನ್ನು ಸಾಧ್ಯವಾದ ಮಟ್ಟಿಗೆ ತಗ್ಗಿಸಲು ನರೇಂದ್ರ ಮೋದಿ ಅವರು ಅನೇಕ ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಸಿಎನ್‌ಜಿ ಬಳಕೆಗೆ ಒತ್ತುನೀಡುತ್ತಿದ್ದಾರೆ. ಸಾರ್ವಜನಿಕ ಸಾರಿಗೆ ಬಸ್ಸುಗಳನ್ನು ಸಿಎನ್‌ಜಿ ಕಿಟ್ ಆಗಿ ಪರಿವರ್ತಿಸಲಾಗಿದೆ.

ಉತ್ತಮ ಆಡಳಿತ ನೀಡುವ ಸರಕಾರದ ಕ್ರಿಯಾತ್ಮಕ ಚಿಂತನೆಯ ಭಾಗವಾಗಿ ಹವಾಮಾನ ಬದಲಾವಣೆ ಇಲಾಖೆಯನ್ನು ನರೇಂದ್ರ ಮೋದಿ ಸ್ಥಾಪಿಸಿದ್ದಾರೆ. ಗುಜರಾತ್ ಸರಕಾರದ ಈ ನಡೆ ಭಾರತದಲ್ಲಿ ಮಾತ್ರವಲ್ಲ ಇಡೀ ಏಷ್ಯಾದಲ್ಲಿ ‘ಪ್ರಥಮ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಡೀ ಜಗತ್ತಿನಲ್ಲಿ ಹವಾಮಾನ ಬದಲಾವಣೆಗಾಗಿಯೇ ಇಲಾಖೆಯನ್ನು ಸ್ಥಾಪಿಸಿರುವ 4ನೇ ರಾಜ್ಯ/ಪ್ರಾಂತ್ಯ ಗುಜರಾತ್ ಆಗಿದೆ.

2009ರ ಫೆಬ್ರವರಿಯಲ್ಲಿ ಸ್ಥಾಪಿತವಾದ ಹವಾಮಾನ ಬದಲಾವಣೆ ಇಲಾಖೆಯ ಉಸ್ತುವಾರಿಯನ್ನು ನರೇಂದ್ರ ಮೋದಿಯವರೇ ವಹಿಸಿಕೊಂಡಿದ್ದು, ಎಲ್ಲ ಸಮಸ್ಯೆಗಳಿಗೆ ಅವರೇ ಸ್ಪಂದಿಸುತ್ತಾರೆ. ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಮಾನವೀಯ ಮುಖ ನೀಡುವುದು, ಬೆಳವಣಿಗೆಯ ಹರಿಕಾರರಾಗಲು ನಾಗರಿಕರಿಗೆ ಅಧಿಕಾರ ನೀಡುವುದು, ಪರಿಸರ ರಕ್ಷಣೆಗೆ ಜನರ ಮನೋಭಾವವೇ ಪ್ರಮುಖವಾಗುತ್ತದೆ ಎಂಬ ವಾತಾರವಣವನ್ನು ಸೃಷ್ಟಿಸುವುದು, ಎಲ್ಲ ನಾಗರಿಕರ ಸುರಕ್ಷೆ ಮತ್ತು ಭವ್ಯ ಭವಿತವ್ಯಕ್ಕಾಗಿ ಸಹಭಾಗಿತ್ವ ಪ್ರೋತ್ಸಾಹಿಸಲು ಈ ಅಭಿಯಾನವನ್ನು ಶುರು ಮಾಡಲಾಗಿದೆ. ಇಂಧನ ಮತ್ತು ಪೆಟ್ರೋಕೆಮಿಕಲ್ಸ್, ನಗರ ಸಾರಿಗೆ, ಅರಣ್ಯ ಮತ್ತು ಪರಿಸರ, ಗ್ರಾಮೀಣ ಅಭಿವೃದ್ಧಿ ಮತ್ತು ಕೈಗಾರಿಕೆ ಮತ್ತು ಗಣಿಗಾರಿಕೆ ಈ ಇಲಾಖೆಯ ಅಡಿಗಳಲ್ಲಿ ಬರುತ್ತವೆ. ರಾಜ್ಯದ 1600 ಕಿ.ಮೀ. ಉದ್ದದ ಕರಾವಳಿಯ ಮೇಲೆ ಜಾಗತಿಕ ಉಷ್ಣಾಂಶದಿಂದ ಆಗುತ್ತಿರುವ ಪರಿಣಾಮ ಕುರಿತು ಕೂಡ ಈ ಇಲಾಖೆ ಅಧ್ಯಯನ ನಡೆಸುತ್ತಿದೆ.

ಪರಿಸರ ಶಿಕ್ಷಣ, ಜಾಗೃತಿ ಅಭಿಯಾನವನ್ನು ರಾಜ್ಯ ಅತ್ಯಂತ ತುರುಸಿನಿಂದ ಮುಂದುವರಿಸಿದೆ. ವಿದ್ಯಾರ್ಥಿಗಳನ್ನು ಈ ಅಭಿಯಾನದಲ್ಲಿ ತೊಡಗಿಸಿ ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡುವ ಮುಖಾಂತರ ಪರಿಸರದ ಬಗ್ಗೆ ಪ್ರಜ್ಞೆಯಿರುವ ಸಮಾಜವನ್ನು ನಿರ್ಮಾಣ ಮಾಡಲಾಗಿದೆ. ಜಿಇಇಆರ್ ಫೌಂಡೇಷನ್ (Gujarat Ecological Education and Research Foundation), ಜಿಇಸಿ (Gujarat Ecology Commission) ಮತ್ತು ಜಿಇಎಮ್ಐ (Gujarat Environmental Management Institute) ಪರಿಸರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ಹೊತ್ತಿವೆ.

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.