ಹೊಸ ಪರಿಚಯ

ಚಿತ್ರರಂಗಕ್ಕೆ ಲವ್ ಲಿ ಸ್ಟಾರ್ ಪ್ರೇಮ್ ಪುತ್ರಿ ಎಂಟ್ರಿ- ‘ಟಗರು ಪಲ್ಯ’ಕ್ಕೆ ಬಟ್ಟಲು ಕಣ್ಣಿನ ಹುಡುಗಿ ಅಮೃತ ಪ್ರೇಮ್ ನಾಯಕಿ

ನೆನಪಿರಲಿ ಖ್ಯಾತಿಯ ಲವ್ ಲಿ ಸ್ಟಾರ್ ಪ್ರೇಮ್ ಮಗಳು ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಮೂಲಕ ಲವ್ ಲಿ ಸ್ಟಾರ್ ಲವ್ ಲಿ ಪುತ್ರಿ ಅಮೃತ ಪ್ರೇಮ್ ಸಿನಿ ಕೆರಿಯರ್ ಶುರು ಮಾಡುತ್ತಿದ್ದಾರೆ. ಡಾಲಿ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ‘ಟಗರು ಪಲ್ಯ’ ಸಿನಿಮಾ ಮೂಲಕ ನಾಯಕ ನಟಿಯಾಗಿ ಬಟ್ಟಲು ಕಣ್ಣಿನ ಹುಡುಗಿ ಅಮೃತ ಪ್ರೇಮ್ ಹೊಸ ಹೆಜ್ಜೆ ಇಡುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಅಮೃತ ಪ್ರೇಮ್ ಲುಕ್ ಗಮನ ಸೆಳೆಯುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಉಮೇಶ್. ಕೆ. ಕೃಪ ಸಿನಿಮಾಗೆ ಫ್ರೆಶ್ ಫೇಸ್ ಹುಡುಕಾಟದಲ್ಲಿದ್ದೆವು. ಕಾರ್ಯಕ್ರಮವೊಂದರಲ್ಲಿ ಪ್ರೇಮ್ ಪುತ್ರಿ ಭೇಟಿಯಾದಾಗ ಈ ಸಿನಿಮಾ ಬಗ್ಗೆ ಹೇಳಿದೆ. ಕಥೆ ಕೇಳಿ ಹೇಳುತ್ತೇನೆ ಎಂದಿದ್ರು. ಅವರಿಗೂ ಈ ಕಥೆ ಇಷ್ಟವಾಯ್ತು ಸಿನಿಮಾ ಮಾಡಲು ಒಪ್ಪಿಕೊಂಡ್ರು. ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರವನ್ನು ಅಮೃತ ಪ್ರೇಮ್ ನಿರ್ವಹಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ಕಳೆದ 20 ದಿನಗಳಿಂದ ಅವರಿಗೆ ವರ್ಕ್ ಶಾಪ್ ನೀಡಲಾಗ್ತಿದೆ ಎಂದು ತಿಳಿಸಿದ್ದಾರೆ.

ಮಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಬಗ್ಗೆ ನಟ ನೆನಪಿರಲಿ ಪ್ರೇಮ್ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಒಬ್ಬ ನಟನಾಗಿ ಮಗಳು ಚಿತ್ರರಂಗಕ್ಕೆ ಬರುತ್ತಿರೋದು ಖುಷಿ ಇದೆ. ಆಕೆ ಓದುವುದರಲ್ಲೂ ಡಿಸ್ಟಿಂಕ್ಷನ್, ಈಗ ನಟಿಯಾಗಿ ಸಿನಿಮಾಗೂ ಬರುತ್ತಿದ್ದಾಳೆ. ಚಿತ್ರದ ಪಾತ್ರಕ್ಕಾಗಿ ಹಲವು ದಿನಗಳಿಂದ ಸಿದ್ದತೆ ನಡೆಸುತ್ತಿದ್ದಾಳೆ. ನಿರ್ದೇಶಕ ಉಮೇಶ್.ಕೆ.ಕೃಪ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಕಥೆ ಕೇಳಿದ ಮೇಲೆ ಬೇಡ ಎನ್ನಲಾಗಲಿಲ್ಲ. ಕನ್ನಡ ಜನತೆ ಆಕೆಗೆ ಪ್ರೀತಿ ಪ್ರೋತ್ಸಾಹ ನೀಡಿ ಬೆಳಸಬೇಕು ಎಂದು ಸಂತಸ ಹಂಚಿಕೊಂಡಿದ್ದಾರೆ ಪ್ರೇಮ್.

ಬಯೋ ಮೆಡಿಕಲ್ ಇಂಜಿನಿಯರಿಂಗ್ ಓದುತ್ತಿರುವ ಅಮೃತ ಪ್ರೇಮ್ ಓದಿನ ಜೊತೆ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಳ್ಳಲಿದ್ದಾರೆ. ‘ಟಗರು ಪಲ್ಯ’ ಸಿನಿಮಾ ಹಲವು ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು, ಉಮೇಶ್.ಕೆ.ಕೃಪ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ‘ಇಕ್ಕಟ್’ ಖ್ಯಾತಿಯ ನಾಗಭೂಷಣ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಸ್ಕ್ರಿಪ್ಟ್ ಕೆಲಸ ಮುಗಿಸಿರುವ ‘ಟಗರು ಪಲ್ಯ’ ಡಿಸೆಂಬರ್ ಮೊದಲ ವಾರದಲ್ಲಿ ಸೆಟ್ಟೇರಲಿದೆ.

ವಾಸುಕಿ ವೈಭವ್ ಸಂಗೀತ ನಿರ್ದೇಶನನ, ಎಸ್. ಕೆ. ರಾವ್ ಕ್ಯಾಮೆರಾ ವರ್ಕ್, ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

 

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.