ರಂಗಭೂಮಿ ಯಲ್ಲಿ ಮಹಿಳೆ ಪುರುಷನಿಗೆ ಸರಿಸಾಟಿ ಎಂದು ಹೇಳಿದರೆ ಹಲವರಿಗೆ ಅಚ್ಹರಿಯಾಗಬಹುದು.ಪುರುಷ ಪ್ರಧಾನ ಸಮಾಜದಲ್ಲಿ ಇದು ಹೇಗೆ ಸಾದ್ಯ?ಎಂದೇ ಶಿಕ್ಷಿತ ಸಮುದಾಯದ ಕೆಲವರಾದರೂ ಕೇಳಬಹುದು.ಆದರೆ ಪುರುಷರಿಗಿಂತ ನಾವೇನು ಕಮ್ಮಿ ಎಂದು ಸವಾಲೆಸೆದು ಪುರುಷರಿಗಿಂತ ಮಿಗಿಲಾದ ಸಾದನೆಗೈದದ್ದು ವಿಚಿತ್ರವಾದರೂ ಸತ್ಯ.
ಸಂಘ ಸಂಸ್ಥೆಗಳು, ಹವ್ಯಾಸಿ ರಂಗ ತಂಡಗಳು ನಾಟಕ ಮಾಡಲೆಂದು ಸಿದ್ದವಾಗುವ ಸಂದರ್ಭದಲ್ಲಿ ಎದುರಾಗುವ ಹಲವು ತೊಡಕುಗಳಲ್ಲಿ ಕಲಾವಿದೆಯರು ಸಿಗುವುದಿಲ್ಲ ಎಂಬ ಸಮಸ್ಯೆ ಇದ್ದ ಕಾಲದಲ್ಲಿ ಮಹಿಳೆಯರ ಪಾತ್ರವನ್ನು ಅದ್ಭುತವಾಗಿ ಅಭಿನಯಿಸಿದ ಪುರುಷರ ದೊಡ್ಡ ಪಟ್ಟಿಯೇ ಇದೆ, ಕೆಲವು ನಾಟಕಕಾರರು ಮಹಿಳೆಯರ ಪಾತ್ರವೇ ಇಲ್ಲದ ನಾಟಕಗಳನ್ನು ಬರೆದಿದ್ದಾರೆ. ೧೪೦ ವರ್ಷಗಳ ಇತಿಹಾಸವಿರುವ ವೃತ್ತಿ ರಂಗಭೂಮಿಯಲ್ಲಿ ಮಹಿಳೆಯರು ಆರಂಭದ ಒಂದೆರಡು ದಶಕಗಳಲ್ಲಿ ರಂಗ ಪ್ರವೆಶಿಸಿರಲಿಲ್ಲ. ಸ್ರೀಯರ ನಯ, ನಾಜೂಕಿನ ಹಾವ ಭಾವಗಳಿಗೆ ಸಹಜತೆ ಬರಬೇಕಾದರೆ ಸ್ರೀಯೇ ಅಭಿನಯಿಸಬೇಕು ಎಂಬ ತೀರ್ಮಾನಕ್ಕೆ ಬಂದ ಕೋಣ್ಣೂರು ನಾಟಕ ಕಂಪನಿಯ ಶಿವಮೂರ್ತಿ ಸ್ವಾಮಿಗಳು ೧೯೦೧ ರಲ್ಲಿಯೇ ಗುಳೇದಗುಡ್ಡದಿಂದ “ಯಲ್ಲೂ ಬಾಯಿ “ಎಂಬ ಮಹಿಳೆಯನ್ನು ಕರೆಸಿ ಆಕೆಯಿಂದ ಮಹಿಳೆಯ ಪಾತ್ರ ಮಾಡಿಸುತ್ತಾರೆ. ಗಾಯನ ಮತ್ತು ಅಭಿನಯದಲ್ಲಿ ತನ್ನ ಅದ್ವಿತೀಯ ಪಾತ್ರ ತೋರಿದ “ಯಲ್ಲೂಬಾಯಿ”ಯನ್ನೇ ವ್ರತ್ತಿ ರಂಗ ಭೂಮಿಯ ಮೊದಲ ನಟಿ ಎಂದು ವಿದ್ವಾಂಸರು ಹೇಳುತ್ತಾ ಬಂದಿದ್ದರೂ ೧೮೯೮ರಲ್ಲಿ ಪಾಪಸಾನಿ ಎಂಬಾಕೆ ಸ್ಥಾಪಿಸಿದ ಸ್ರೀ ನಾಟಕ ಮಂಡಳಿ “ಪ್ರಭಾವತಿ ದರ್ಬಾರು “ಹರಿಶ್ಚಂದ್ರ’ಮುಂತಾದ ನಾಟಕ ಪ್ರದರ್ಶಿಸುತ್ತಿತ್ತೆಂದೂ ಹಾಗಾಗಿ ಇದೇ ಮೊದಲ ನಾಟಕ ಮಂಡಳಿ ಎಂದೂ ಹೇಳಲಾಗುತ್ತದೆ, ೧೯೦೮ರಲ್ಲಿ ಲಕ್ಹ್ಷ್ಮಿಮೇಶ್ವರದ ಬಚ್ಚಸಾನಿ ಸ್ಥಾಪಿಸಿದ ಮಹಿಳಾ ನಾಟಕ ಮಂಡಳಿಯಲ್ಲಿ ಪುರುಷ ಪಾತ್ರ ಸೇರಿದಂತೆ ಎಲ್ಲಾ ಪಾತ್ರಗಳನ್ನೂ ಮಹಿಳೆಯರೇ ಅಭಿನಯಿಸುತ್ತಿದ್ದರು.ಇದು ಬರೀ ಮಹಿಳೆಯರೇ ಅಭಿನಯಿಸುವ ಇಂತಹ ಸಂಪ್ರದಾಯ ಹಾಕಿಕೊಟ್ಟ ಮೊದಲ ಮಹಿಳಾ ನಾಟಕ ತಂಡ.
-ಕೃಪೆ : http://www.wikiwand.com/kn/ರಂಗಭೂಮಿ#/overview