ರಂಗಭೂಮಿ

ಪೊಲೀಸ್ ಸಾಹಿತಿ ಸೋಮು ರೆಡ್ಡಿ ಅವರ ತಲಾಷ್ ನಾಟಕ ಕೃತಿಯು ಪ್ರದರ್ಶನಕ್ಕೆ ಸಿದ್ಧವಾಗಿದೆ

ಆಗಸ್ಟ್ 11ನೇ ತಾರೀಖು ಭಾನುವಾರ ಸಂಜೆ 6 ಗಂಟೆಗೆ ಹುಬ್ಬಳ್ಳಿ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ

ಕಥೆ, ಕಾದಂಬರಿಯ ಹೊರತಾಗಿಯೂ ಸಿನಿಮಾ ಹಾಗೂ ಕಿರತೆರೆಯಲ್ಲಿ ಕೆಲಸ ಮಾಡಿ ಅನುಭವವಿರುವ ಪೊಲೀಸ್ ಸಾಹಿತಿ ಸೋಮು ರೆಡ್ಡಿ ಅವರ ತಲಾಷ್ ನಾಟಕ ಕೃತಿಯು ಪ್ರದರ್ಶನಕ್ಕೆ ಸಿದ್ದವಾಗಿದೆ. ತಲಾಷ್ ನಾಟಕ ಕೃತಿಯು ಈಗಾಗಲೇ ಒಂದು ಸಾಹಿತ್ಯಕ ಕೃತಿಯಾಗಿ ಹೆಸರು ಮಾಡಿದ್ದರಿಂದ ಅದನ್ನು ರಂಗಕ್ಕೆ ಅಳವಡಿಸಿಕೊಳ್ಳವ ಸಂದರ್ಭದಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಲಾಗಿದೆ. ಈ ನಾಟಕವು ವಾಸ್ತವ ಜೀವನಕ್ಕೆ ಹತ್ತಿರವಾಗುವಂತಹ ಕಥೆ ಸಾರವನ್ನು ಹೊಂದಿರುವುದರಿಂದ ಪ್ರೇಕಕರು ಮೆಚ್ಚುಗೆ ವ್ಯಕ್ತಪಡಿಸುವ ವಿಶ್ವಾಸವಿದೆ ಎಂದು ಈ ನಾಟಕದ ನಿರ್ದೇಶಕರಾದ ರಂಗಕರ್ಮಿ ಗದಿಗೆಯ್ಯ ಹಿರೇಮಠ ಅವರು ಹೇಳಿದ್ದಾರೆ.

Somu Reddy Talaash Book Release 4ನಾಟಕ ಕ್ಷೇತ್ರ ನನಗೇನು ಹೊಸದಲ್ಲ. ಶಾಲಾ ಕಾಲೇಜುನಲ್ಲಿದ್ದಾಗಲೇ ನಾಟಕ ಬರೆದದ್ದು, ಅಭಿನಯಿಸಿದ್ದು, ನಿರ್ದೇಶಿಸಿದ್ದಾಗಿದೆ. ಬರವಣಿಗೆ ಒಂದು ಫ್ರೌಢ ಹಂತಕ್ಕೆ ಬಂದ ಮೇಲೆ ಬಹು ಆಸ್ಥೆಯಿಂದ ತಲಾಷ್ ನಾಟಕವನ್ನು ರಚಿಸಿರುವದರಿಂದ ಸಹಜವಾಗಿ ನನ್ನಲ್ಲಿ ಕುತೂಹಲ ಮೂಡಿದೆ. ನನ್ನ ವಲಯದಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ನನ್ನ ಮೊದಲ ಕೃತಿಯನ್ನೇ ಪ್ರದರ್ಶನಕ್ಕೆ ಆಯ್ದುಕೊಳ್ಳುವ ಸಾಹಸ ಮಾಡಿದ ನಿರ್ದೇಶಕ ಗದಿಗೆಯ್ಯ ಹಿರೇಮಠ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಲೇಖಕ ಸೋಮು ರೆಡ್ಡಿ ಕನ್ನಡ ಟೈಮ್ಸ್‍ಗೆ ತಿಳಿಸಿದ್ದಾರೆ.

ಹುಬ್ಬಳಿಯ ಜೀವಿ ಕಲಾ ಬಳಗದ ವತಿಯಿಂದ ಈ ನಾಟಕವನ್ನು ಪ್ರದರ್ಶಿಸುತ್ತಿದ್ದು ಇದರಲ್ಲಿ ಈಗಾಗಲೇ ಸಿನಿಮಾ ಹಾಗೂ ಕಿರುತೆರೆಗಳಲ್ಲಿ ಅಭಿನಯಿಸಿದ ಅನೇಕರು ಪಾತ್ರ ಮಾಡುತ್ತಿರುವುದು ಗಮನಾರ್ಹ. ಸಿ.ಎಸ್.ಪಾಟೀಲ್‍ಕುಲಕರ್ಣಿ, ಡಾ. ಮಹೇಶ ಹೊರಕೇರಿ, ಪ್ರಕಾಶ್ ನೂಲ್ವಿ, ರಾಧಿಕಾ ಶಿಗ್ಗಾಂವಿ, ಶಂಕರ ಕರಿಕಟ್ಟಿ, ಈರಣ್ಣ ಕರಿಕಟ್ಟಿ, ದಾನೇಶ ಚೌಕಿಮಠ, ನಾರಾಯಣ ಬಾದ್ರಿ, ಶೇಖರ ಹುಬ್ಬಳ್ಳಿ, ಅನ್ನಪೂರ್ಣಾ ಉಂಡಿ, ರೇಣುಕಾ ಲಿಂಗಾರೆಡ್ಡಿ, ಕೃಷ್ಣಾ ಮಹಾಮನೆ, ಗುರು ರಬ್ಬಯ್ಯನವರ, ಬಾಬು ಖಂಡೋಜಿ, ಸಕಾರಾಮ ಬಡಿಗೇರ, ವಿಕ್ಕಿ ಹಿರೇಮಠ ಹಾಗೂ ಮುಂತಾದವರು ಅಭಿನಯಿಸುತ್ತಿದ್ದಾರೆ.

ಆಗಸ್ಟ್ 11ನೇ ತಾರೀಖು ಭಾನುವಾರ ಸಂಜೆ 6 ಗಂಟೆಗೆ ಹುಬ್ಬಳ್ಳಿ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ. ಟಿಕೇಟ್‍ಗಳಿಗಾಗಿ ಮೇಲ್ವಿಚಾರಕ ಚಂದ್ರಶೇಖರ ಮಾಡಲಗೇರಿ ಅವರ 9986821096 ದೂರವಾಣಿಗೆ ಸಂಪರ್ಕಿಸಲು ಕೋರಲಾಗಿದೆ.

Talash Drama Of Somu Reddy In Hubli 2

Somu Reddy Talaash Book Release 4

Back to top button

Adblock Detected

Please consider supporting us by disabling your ad blocker